ಎಚ್.ಡಿ. ಕೋಟೆ : ತಾಲ್ಲೂಕಿನ ಮಾರನಹಾಡಿಯಲ್ಲಿ ಬುಧವಾರ ಆನೆ ದಾಳಿ ಮಾಡಿದ್ದು, ಅಲ್ಲಿನ ನಿವಾಸಿ ಜ್ಯೋತಿ ಎಂಬುವವರು ತೀವ್ರ ಗಾಯಗೊಂಡಿದ್ದಾರೆ.

ಮಾರನಾಹಾಡಿಯ 15 ಮಹಿಳೆಯರು ಸೌದೆ ತರುವುದಕ್ಕೆ ಮಾರನ ಹಾಡಿಯಿಂದ 2 ಕಿ.ಮೀ. ದೂರದಲ್ಲಿರುವ ಆಡುಕುಪ್ಪೆ ಕೆರೆ ಹತ್ತಿರ ತೆರಳಿದ್ದಾರೆ. ಏಕಾಏಕಿ ಕಾಡಾನೆ ಇವರತ್ತ ನುಗ್ಗಿದಾಗ ಮಹಿಳೆಯರು ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಜ್ಯೋತಿ ಓಡಲು ಸಾಧ್ಯವಾಗದೇ ಕೆಳಗೆ ಬಿದ್ದಿದ್ದು ಆನೆ ತುಳಿದಿದೆ. ಕೊಂಬಿನಿಂದ ಬಲವಾಗಿ ಹೊಟ್ಟೆಯ ಪಕ್ಕೆಲುಬಿಗೆ ತಿವಿದಿರುವುದರಿಂದ ಹೊಟ್ಟೆಯ ಪಕ್ಕೆಲುಬು ಮುರಿದಿದೆ ಎಂದು ತಿಳಿಸಲಾಗಿದೆ.

ಹಾಡಿಯವರು ಇವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-38-246329422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.