ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅಭಿವೃದ್ಧಿಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕರು ಕೈಗೊಂಡ ವಿಶೇಷ ಕಾರ್ಯತಂತ್ರಗಳು ಫಲ ನೀಡಿವೆ.

ಕಳೆದ ಬಾರಿ 9ನೇ ಸ್ಥಾನದಲ್ಲಿದ್ದ ತಾಲ್ಲೂಕು ಈ ಬಾರಿ ಶೇ 96.80 ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನಕ್ಕೆ ಜಿಗಿದಿದೆ.ಪರೀಕ್ಷೆಗೆ ಹಾಜರಾಗಿದ್ದ 2,971 ವಿದ್ಯಾರ್ಥಿಗಳ ಪೈಕಿ 2,876 ಮಕ್ಕಳು ಉತ್ತೀರ್ಣರಾಗಿದ್ದು, 95 ಮಕ್ಕಳು ಮಾತ್ರ ಅನುತ್ತೀರ್ಣರಾಗಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಕೈಗೊಂಡ ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಶಿಕ್ಷಕರ ಪರಿಶ್ರಮದಿಂದ ಉತ್ತಮ ಫಲಿತಾಂಶ ದಾಖಲಿಸಿದೆ. ರಾಜು ಅವರು ಕೈಗೊಂಡ ಹಲವು ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಡಿಡಿಪಿಐ ಅವರು ಮಾದರಿ ಕಾರ್ಯಕ್ರಮಗಳೆಂದು ಶ್ಲಾಘಿಸಿದ್ದು, ಇತರ ತಾಲ್ಲೂಕುಗಳಿಗೂ ವಿಸ್ತರಣೆ ಮಾಡುವಂತೆ ಸೂಚನೆ ನೀಡಿದ್ದರು.

ಕಲಿಕಾ ಖಾತ್ರಿ ಪರೀಕ್ಷೆ: ತಾಲ್ಲೂಕಿನ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿ ತಿಂಗಳ ಮೊದಲ ದಿನ ನಿಗದಿತ ಪಠ್ಯ ನೀಡಲಾಗುತ್ತದೆ. ಆ ಪಠ್ಯವನ್ನು ವಿದ್ಯಾರ್ಥಿಗಳು ಇಡೀ ತಿಂಗಳು ಕಲಿಯಬೇಕು. ತಿಂಗಳ ಕೊನೆಯಲ್ಲಿ ನಡೆಯುವ ಪರೀಕ್ಷೆಯಲ್ಲಿ ಆ ಪಠ್ಯದಿಂದಲೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದರೆ ಇಲ್ಲಿ ಶಿಕ್ಷಕರು, ಪ್ರಶ್ನೆ ಪತ್ರಿಕೆ ತಯಾರಿಸುವವರು ಎಲ್ಲರೂ ಬೇರೆ ಶಾಲೆಯವರು ಆಗಿರುತ್ತಾರೆ. ಇಲ್ಲಿ ಅನುತ್ತೀರ್ಣ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಪ್ರತಿ ತಿಂಗಳು ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿ ಮಾಡುವುದು ಈ ಕಾರ್ಯಕ್ರಮದ ಉದ್ದೇಶ.

ನಾನೂ ಓದುತ್ತಿದ್ದೇನೆ: ‘ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಇಡೀ ರಾಜ್ಯದಲ್ಲಿ ಈ ಕಾರ್ಯಕ್ರಮವನ್ನು ಅಳವಡಿಸಿಕೊಂಡ ಏಕೈಕ ತಾಲ್ಲೂಕು ಎಚ್.ಡಿ.ಕೋಟೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಇಡೀ ವಿಷಯಗಳ ವೇಳಾಪಟ್ಟಿಯನ್ನು ತಯಾರಿಸಿ ನೀಡಲಾಗುತ್ತದೆ. ಆ ವಿದ್ಯಾರ್ಥಿ ಮುಂಜಾನೆ 5ಕ್ಕೆ ಎದ್ದು ಅಭ್ಯಾಸ ಮಾಡಬೇಕು. ಈ ವಿದ್ಯಾರ್ಥಿ ಚಲನವಲನಗಳ ಬಗ್ಗೆ ಪಾಲಕರು ನಿಗಾ ವಹಿಸಬೇಕು. ಅಲ್ಲದೆ ವಿದ್ಯಾರ್ಥಿ ಎದ್ದ ಸಮಯ, ಎಷ್ಟು ಪಠ್ಯ ಅಭ್ಯಾಸ ಮಾಡಿದ್ದಾರೆ ಎಂಬ ಇನ್ನಿತರ ಮಾಹಿತಿಯನ್ನು ಶಾಲೆಯಿಂದ ನೀಡಲಾದ ವೇಳಾಪಟ್ಟಿಯಲ್ಲಿ ನಮೂದಿಸಿ ಪಾಲಕರ ಸಹಿ ಪಡೆದು ಅದನ್ನು ಶಾಲಾ ಮುಖ್ಯಶಿಕ್ಷಕರ ಗಮನಕ್ಕೆ ತರಬೇಕು. ವಿಶೇಷ ಎಂದರೆ ಶಿಕ್ಷಕರೂ ಸಹ ಮಕ್ಕಳ ಅಭ್ಯಾಸ ಪ್ರಕ್ರಿಯೆ ಪರಿಶೀಲನೆಗೆ ಮುಂಜಾನೆ ಭೇಟಿ ನೀಡಿ ಅವರನ್ನು ಎಬ್ಬಿಸಿ, ಮಾತನಾಡಿಸಿ ಮನೆ ಗೋಡೆಯಲ್ಲಿ ಹಾಕಲಾದ ಪೋಸ್ಟರ್ನಲ್ಲಿ ಹಾಜರಾತಿ ಹಾಕಿ ಬರುವ ಮೂಲಕ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುತ್ತಿದ್ದರು.

ರಾತ್ರಿ ವಾಸ್ತವ್ಯ: ಪರೀಕ್ಷೆಗೆ ಅಭ್ಯಾಸ ಮಾಡುತ್ತಿರುವ ಮಕ್ಕಳ ಮನೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರೇ ಭೇಟಿ ನೀಡಿ ಮಕ್ಕಳನ್ನು ಪರಿಶೀಲಿಸುತ್ತಿದ್ದರು. ಒಂದು ದಿನ ಒಂದೊಂದು ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಇವರ ಜತೆ ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರು ವಾಸ್ತವ್ಯ ಹೂಡಬೇಕಿತ್ತು. ಸಂಜೆ ವೇಳೆ ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪಾಲಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ವಿಶೇಷ ತರಗತಿಗಳು: ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗಿತ್ತು. ಹಬ್ಬ ಹರಿದಿನಗಳು, ಭಾನುವಾರ ಸೇರಿದಂತೆ ವಿಶೇಷ ದಿನಗಳಂದೂ ತರಗತಿಗಳನ್ನು ಮಾಡಿ ಕಲಿಕಾ ಸಾಮರ್ಥ್ಯವನ್ನು ಪ್ರೋತ್ಸಾಹಿಸಲಾಗಿತ್ತು.

ಬಿಇಒ, ಶಿಕ್ಷಕರ ಪರಿಶ್ರಮ

ಫಲಿತಾಂಶ ವೃದ್ಧಿಗೆ ಹಲವು ವಿಭಿನ್ನ
ಕಾರ್ಯಕ್ರಮಗಳು

ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ಮೆಚ್ಚುಗೆ

ಕಲಿಕಾಮೃತ

ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಲವರ್ಧನೆಗೆ ಶಾಸಕರ ನೇತೃತ್ವದಲ್ಲಿ ಕಲಿಕಾಮೃತ ಎಂಬ ಹೊಸ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. ಇಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಎಲ್ಲ ವಿಷಯಗಳಿಂದ ಪಾಸಿಂಗ್ ಅಂಕ ಬರುವ ರೀತಿಯಲ್ಲಿ ಪುಸ್ತಕವನ್ನು ತಯಾರಿಸಿ ಮಕ್ಕಳಿಗೆ ಹಂಚಲಾಗಿತ್ತು. ಇದೇ ರೀತಿ ಶಾಸಕ ಅನಿಲ್ ಚಿಕ್ಕಮಾದು ಅವರು ಒಂದು ಸಾವಿರ ಪುಸ್ತಕಗಳನ್ನು ಮುದ್ರಿಸಿ ಮಕ್ಕಳಿಗೆ ಹಂಚಿದ್ದರು. ಇದೂ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ ಎನ್ನುತ್ತಾರೆ ಬಿಇಒ ರಾಜು.

ತಾಲ್ಲೂಕಿನಲ್ಲಿ ಪರಿಚಯಿಸಿದ ನಾನೂ ಓದುತ್ತೇನೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯವರೇ ಶ್ಲಾಘಿಸಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರಿಶ್ರಮದಿಂದ ಈ ಫಲಿತಾಂಶ ದೊರಕಿದೆ.
ಸಿ.ಎನ್.ರಾಜು ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.