ಎಚ್.ಡಿ. ಕೋಟೆ: ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ (ಎಐಜೆಎಎಸ್ಸಿ) ನೇತೃತ್ವದಲ್ಲಿ ಎರಡು ತಿಂಗಳಿಂದ ಆದಿವಾಸಿಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿ ನೀಡಿಲ್ಲ, ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.

ಎಐಜೆಎಎಸ್ಸಿ ಪದಾಧಿಕಾರಿ ಸುನಿಲ್ ಟಿ.ಆರ್. ಮಾತನಾಡಿ, ಎಚ್.ಡಿ. ಕೋಟೆ ಹಾಗೂ ಸರಗೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವಾಸಿಸುವ ಬಹುತೇಕ ಆದಿವಾಸಿ ಜನ ಕೃಷಿ ಕೂಲಿಕಾರ್ಮಿಕರಾಗಿದ್ದಾರೆ. ಅನಕ್ಷರತೆ, ಅಪೌಷ್ಟಿಕತೆ, ಬಡತನ ಹಾಗೂ ಕಾನೂನಿನ ಅರಿವಿಲ್ಲದ ಇವರಿಗೆ ವಾಸಿಸಲು ಮನೆ, ಶೌಚಾಲಯ, ಕುಡಿಯುವ ನೀರು, ರಸ್ತೆ, ಇನ್ನಿತರ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ ಎಂದರು. ದಡದಹಳ್ಳಿ ಹಾಡಿ, ಬಾವಲಿ ಹಾಡಿ ಹಾಗೂ ಎನ್. ಬೇಗೂರು ಭಾಗದ (ಮಾಳದಹಾಡಿ) ಹಾಡಿಗಳಲ್ಲಿ ಶುದ್ದ ಕುಡಿಯುವ ನೀರು ಇಲ್ಲದೇ ಕಲುಷಿತ ನೀರನ್ನು ಬಳಸುವ ಪರಿಸ್ಥಿತಿ ಇದೆ ಎಂದರು.

ಪೌಷ್ಟಿಕ ಆಹಾರ ಟೆಂಡರ್ ನೀಡಿಲ್ಲ ಎಂಬ ನೆಪ ಹೇಳಿ ಅಧಿಕಾರಿಗಳು ಜನವರಿ ಬಳಿಕ ಪೌಷ್ಟಿಕ ಆಹಾರ ಸಾಮಗ್ರಿ ವಿತರಿಸಿಲ್ಲ. ಕೂಡಲೇ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಟೆಂಡರ್ ಕರೆಯುವವರೆಗೆ ಆಹಾರ ಸಾಮಗ್ರಿಗಳನ್ನು ಖರೀದಿಸಿ ವಿತರಿಸಬೇಕು. ಜನವರಿ ತಿಂಗಳಿಂದ ಈ ವರೆಗಿನ ಆಹಾರ ಸಾಮಾಗ್ರಿ ವಿತರಿಸಬೇಕು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ದಿನಗೂಲಿಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಬಿನಿ ಹಿನ್ನೀರು, ಕಾಡಂಚಿನ ಗ್ರಾಮಗಳು, ಹಾಡಿಗಳಿಗೆ ಕುಡಿಯುವ ನೀರಿನ ಪೂರೈಕೆ ಆಗುತ್ತಿಲ್ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ಐಟಿಡಿಪಿ ಅಧಿಕಾರಿ ಮಹೇಶ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ‘ಏಪ್ರಿಲ್, ಮೇ ತಿಂಗಳ ಪೌಷ್ಟಿಕ ಆಹಾರವನ್ನು ಈ ತಿಂಗಳ ಒಳಗಾಗಿ ವಿತರಿಸಲಾಗುವುದು. ಕುಡಿಯುವ ನೀರು ಹಾಗೂ ಇನ್ನಿತರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಆಯಾ ಗ್ರಾಮದ ಪಿಡಿಒಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದರು

ರೈತ ಮಹಿಳಾ ಸಂಘಟನೆಯ ಪ್ರಮುಖರಾದ ಬಸವರಾಜು, ಆಸೀಯ , ಪದ್ಮ , ಕುಮಾರ್ , ನೇತ್ರ, ಪೂರ್ಣಿಮಾ ಹಾಗೂ ವಿವಿಧ ಹಾಡಿಗಳ ಮುಖಂಡರಾದ ಮಾಚಮ್ಮ, ಮಾರೆ, ರವಿ, ಕುಮಾರಿ, ಕಾಳಮ್ಮ, ಶಿವಮಾದಮ್ಮ, ಮಾರಮ್ನ, ಶೀರಮ್ಮ, ಗೀತಾ, ಗಂಗೆ, ಮೀನಾ, ಮಾರ, ಮನೋಜ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-38-685500038

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.