‘ಸಂಪ್ರದಾಯದಂತೆ ಕಾರ್ಯಕ್ರಮ; ಸಿದ್ಧತೆ’
ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಸಂಪ್ರದಾಯದಂತೆ ಬ್ರಹ್ಮರಥೋತ್ಸವವು ನಡೆಯಲಿದೆ. ಈಗಾಗಲೇ ಸಮಿತಿ ಮತ್ತು ತಾಲ್ಲೂಕು ಆಡಳಿತದಿಂದ ಸಕಲ ಸಿದ್ಧತೆ ಮಾಡಲಾಗಿದ್ದು ಪಟ್ಟಣದ ಜನತೆ ಹಬ್ಬದ ಸಡಗರದಲ್ಲಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ತಹಶೀಲ್ದಾರ್ ಶ್ರೀನಿವಾಸ್ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಎಸ್. ರಂಗಯ್ಯಂಗಾರ್ ರಾಜ ನಾಯಕ ತಿರುಮಲಾಚಾರ್ ವಿನಯ್ ವಾದ್ಯರ್ ಡಿಶ್ ದೇವರಾಜು ಡೇರಿ ಶ್ರೀಕಾಂತ್ ಶ್ರೀಧರ್ ಶ್ರೀನಿಧಿ ಸುಧಾಕರ್ ಪೂರ್ಣೇಶ ಜಯಂತ್ ಕನ್ನಡ ಪ್ರಮೋದ್ ಸೇರಿದಂತೆ ಹಲವರು ಉತ್ಸವ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ದೇವಸ್ಥಾನ ಸಮಿತಿ ಸದಸ್ಯ ಪ್ರಸಾದ್ ಅಯ್ಯಂಗಾರ್ ಮಾಹಿತಿ ನೀಡಿದರು.