ಹುಣಸೂರು (ಮೈಸೂರು ಜಿಲ್ಲೆ): ‘ರಾಜ್ಯ ಸರ್ಕಾರ ವಿವಿಧ ಗ್ಯಾರಂಟಿ ಹೆಸರಿನಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸುವ ಭರದಲ್ಲಿ ಬಂಡವಾಳ ವೃದ್ಧಿಗೆ ಆದ್ಯತೆ ನೀಡದಿರುವುದು ಭವಿಷ್ಯದ ದೃಷ್ಟಿಯಿಂದ ಆಘಾತಕಾರಿಯಾಗಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಮಾದಹಳ್ಳಿಯ ಉಕ್ಕಿನ ಕಂತೆ ಮಠದಲ್ಲಿ ಶನಿವಾರ ಗುರುಬೂದಿಸ್ವಾಮಿಗಳ 397ನೇ ಆರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ, ವೇದಿಕೆಯಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಉದ್ದೇಶಿಸಿ ಈ ಮಾತು ಹೇಳಿದರು.

‘ಮಹಿಳೆಯರಿಗೆ ನಿಮ್ಮ ಇಲಾಖೆಯಿಂದ ನೀಡುತ್ತಿರುವ ₹2 ಸಾವಿರ ಗೃಹಲಕ್ಷ್ಮಿ ಹಣದ ಬಗ್ಗೆ ನನ್ನ ತಕರಾರು ಇಲ್ಲ, ವಿರೋಧವೂ ಇಲ್ಲ. ಮೂರು ವರ್ಷಗಳಿಂದ ಯೋಜನೆಯ ಮೂಲಕ ₹70–75 ಸಾವಿರ ಕೋಟಿ ನೀಡಿರಬಹುದು. ಆದರೆ, ಹಣವನ್ನು ಎಲ್ಲಿಂದ ತರುತ್ತಿದ್ದೀರಿ’ ಎಂದು ಎಚ್ಡಿಕೆ ಪ್ರಶ್ನಿಸಿದರು.

‘ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸಾಲದ ಮೊತ್ತ ₹ 8.24 ಲಕ್ಷ ಕೋಟಿಯಾಗಿದೆ. ಮುಂದಿನ ದಿನದಲ್ಲಿ ₹9.50ಲಕ್ಷದಿಂದ ₹10 ಲಕ್ಷ ಕೋಟಿಗೆ ತಲುಪಲಿದೆ. ಇದಕ್ಕೆ ಸರಿಸಮನಾಗಿ ಬಂಡವಾಳ ಕ್ರೋಡೀಕರಣಕ್ಕೆ ಆದ್ಯತೆ ನೀಡದಿದ್ದರೆ ಭವಿಷ್ಯದ ದಿನಗಳನ್ನು ಗಂಭೀರವಾಗಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ ಅನುಭವ ನನಗೆ ಇದ್ದು, ಸರ್ಕಾರ ಈಗಲೂ ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಆರ್ಥಿಕ ಸ್ಥಿತಿಗತಿಯನ್ನು ತೂಗಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.