ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಬಿರುಸಿನ ಮಳೆ: ಮುಳುಗಿದ ಸೇತುವೆ

Last Updated 14 ಡಿಸೆಂಬರ್ 2022, 11:42 IST
ಅಕ್ಷರ ಗಾತ್ರ

ಹಂಪಾಪುರ (ಮೈಸೂರು): ಮ್ಯಾಂಡಸ್‌ ಚಂಡಮಾರುತ ಪರಿಣಾಮ ಕಳೆದೆರಡು ದಿನಗಳಿಂದಸುರಿದ ಬಿರುಸಿನ ಮಳೆಯಿಂದಾಗಿ ಎಚ್.ಡಿ. ಕೋಟೆ ತಾಲ್ಲೂಕಿನ ಹೆಬ್ಬಳ್ಳ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ಜಲಾಶಯದ ಹೊರಹರಿವು ಹೆಚ್ಚಿದ್ದರಿಂದ ಬುಧವಾರ ಎಚ್.ಡಿ.ಕೋಟೆ– ಬೆಳಗನಹಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಬೀರೇಶ್ವರ ದೇವಾಲಯದ ಸೇತುವೆಯೂ ಮುಳುಗಡೆಯಾಗಿದೆ.ಸೇತುವೆಗಳ ಮೇಲೆ 3 ಅಡಿ ನೀರು ಹರಿಯುತ್ತಿದ್ದರೂ ಅಪಾಯ ಲೆಕ್ಕಿಸದೇ ವಾಹನ ಸವಾರರು ಸಂಚರಿಸಿದರು.

ಪ್ರಸಕ್ತ ವರ್ಷ 7ನೇ ಬಾರಿ ಸೇತುವೆ ಮುಳುಗಡೆಯಾಗಿದ್ದು, ಎತ್ತರದ ಹೊಸ ಸೇತುವೆ ನಿರ್ಮಾಣಕ್ಕೆಬೆಳಗನಹಳ್ಳಿ, ಹೊಸತೊರವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಎರಡು ದಿನದ ವರ್ಷಧಾರೆಗೆ ಹಲವು ರೈತರ ಜಮೀನಿಗೂ ನೀರು ನುಗ್ಗಿದ್ದು, ಬೆಳೆ ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT