ಮೈಸೂರು: ‘ಭಾರತದ ಎಲ್ಲ ಭಾಷೆಗಳ ಮೇಲೆ ಅಭಿಮಾನ ಇರಿಸಿಕೊಂಡೇ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬೆಳೆಸಬೇಕಿದೆ’ ಎಂದು ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಪಾದಿಸಿದರು.

ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ವಿಭಾಗವು ಶನಿವಾರ ಆಯೋಜಿಸಿದ್ದ ‘ದಕ್ಷಿಣ ಹಾಗೂ ನೈರುತ್ಯ ವಿಭಾಗದ ಅಧಿಕೃತ ಭಾಷಾ ಸಮ್ಮೇಳನ’ ಉದ್ಘಾಟಿಸಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದಿ ಮಾಧ್ಯಮ ಭಾಷೆಯಾಗಿ ಎಲ್ಲರನ್ನೂ ಒಂದುಗೂಡಿಸಿತ್ತು’ ಎಂದರು.

‘ಭಾಷೆಯನ್ನು ವಿವಾದಕ್ಕೆ ಬಳಸಬಾರದು. ಜನರನ್ನು ಒಂದುಗೂಡಿಸಬೇಕು. ದೇವರಲ್ಲಿ ನಂಬಿಕೆ, ಶ್ರದ್ಧೆ ತೋರಿಸುವಂತೆಯೇ ಭಾಷಾ ಸಂಸ್ಕೃತಿಯನ್ನು ಗೌರವಿಸಬೇಕು. ವರ್ಣಭೇದ, ವರ್ಗ ವಿಂಗಡನೆಯಾಗಿ ವಿಶ್ವದ ವಿವಿಧ ನಾಗರಿಕತೆಗಳು ಭಾಷೆಯನ್ನು ಬಳಸಿಕೊಂಡಿವೆ. ಆದರೆ, ಭಾರತೀಯರು ಅದನ್ನು ವಿರೋಧಿಸಿದ್ದರು’ ಎಂದು ಹೇಳಿದರು.

‘ಆದಿ ಶಂಕರಾಚಾರ್ಯರು ಜನರ ಭಾಷೆ ಗೊತ್ತಿಲ್ಲದೇ ಭಾವದ ಮೂಲಕವೇ ದೇಶದ ಸಾಂಸ್ಕೃತಿಕ, ಆಧ್ಯಾತ್ಮಿಕ ಏಕತೆಯನ್ನು ಸಾಧಿಸಿಕೊಟ್ಟರು. ಕಳೆದ ಶತಮಾನದವರೆಗೂ ವಿಶ್ವದ ಹಲವು ದೇಶಗಳಲ್ಲಿ ಸ್ತ್ರೀಯರಿಗೆ ಮತ ಚಲಾಯಿಸುವ ಹಕ್ಕು ಇರಲಿಲ್ಲ. ಶಂಕರರು ಅಹಂ ಬ್ರಹ್ಮಾಸ್ಮಿ ತತ್ವ ಪ್ರತಿಪಾದಿಸಿ 13 ಶತಮಾನಗಳಷ್ಟು ಹಿಂದೆಯೇ ಪ್ರತಿ ವ್ಯಕ್ತಿಯ ದಿವ್ಯತೆ ಬೆಳಗಿದ್ದರು’ ಎಂದು ತಿಳಿಸಿದರು.

‘ಭಾರತೀಯ ಸಮಾಜದ ಅಭಿವ್ಯಕ್ತಿಯೇ ಭಾಷೆಯಾಗಿದೆ. ತಾಯಿ ಸರಸ್ವತಿ ನೀಡಿರುವ ದೇಶದ ಎಲ್ಲ ಜ್ಞಾನದ ಭಾಷೆಗಳನ್ನು ಕಲಿತಾಗ ಮಾತ್ರವೇ ವೈವಿಧ್ಯತೆ, ವಿಭಿನ್ನತೆ ಅರಿಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಸಶಕ್ತ ಪರಂಪರೆ ಹೊಂದಿರುವ ದೇಶದ ಅನೇಕತೆಯಲ್ಲಿಯೇ ಏಕತೆಯಿದೆ. ನಮ್ಮ ಸಂಸ್ಕೃತಿಯು ಇತಿಹಾಸ ಹಾಗೂ ಜ್ಞಾನದ ಆಧಾರದ ಮೇಲೆ ನಿಂತಿದೆ. ಹೀಗಾಗಿಯೇ ಹೆಚ್ಚು ವಿದೇಶಿಗರು ದೇಶದ ಜ್ಞಾನ ಭಂಡಾರ ಅರಿಯಲು ಇಲ್ಲಿಗೆ ಬರುತ್ತಾರೆ. ಜ್ಞಾನಿಗಳಾದ ಭಾರತೀಯರು ಸಮಾಜದ ಅಭಿವೃದ್ಧಿಯ ಕಡೆಗೆ ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ಸಂಸ್ಕೃತಿ ಅರಿಯುವುದೆಂದರೆ ಅದು ಸಭ್ಯತೆಯ ಯಾತ್ರೆಯಾಗಿದೆ. ಯಾವುದೇ ವಿದೇಶಿ ಭಾಷೆಯನ್ನು ಕಲಿಯಬಹುದು. ಆದರೆ, ನಮ್ಮ ದೇಶದ ಭಾಷೆಗಳನ್ನು ಪ್ರೀತಿಸಬೇಕು. ಅವುಗಳ ವಿಕಾಸಕ್ಕೆ ನೆರವಾಗಬೇಕೇ ಹೊರತು ದ್ವೇಷ ಸಾಧಿಸಬಾರದು’ ಎಂದರು.

ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು, ಪುದುಚೇರಿ, ಲಕ್ಷದ್ವೀಪದ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕ್ಗಳಲ್ಲಿ ಭಾಷಾ ಅನುಷ್ಠಾನಗೊಳಿಸಿದ 32 ಉತ್ತಮ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ, ಪ್ರಮಾಣ ಪತ್ರ ನೀಡಲಾಯಿತು.

ಅಧಿಕೃತ ಭಾಷಾ ವಿಭಾಗದ ಕಾರ್ಯದರ್ಶಿ ಅಂಶುಲಿ ಆರ್ಯ, ಜಂಟಿ ಕಾರ್ಯದರ್ಶಿ ಮೀನಾಕ್ಷಿ ಜೋಲಿ, ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಅನುರಾಗ್ ಕುಮಾರ್, ಕೇಂದ್ರೀಯ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್, ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಬಿನೋದ್ ಕುಮಾರ್, ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಕೃಷ್ಣನ್, ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಪಾಲ್ಗೊಂಡಿದ್ದರು.

‘ಮಾತೃಭಾಷೆ ಜೊತೆಗೆ ಹಿಂದಿಗೆ ಒತ್ತು’

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಾತನಾಡಿ ‘ದಕ್ಷಿಣ ಭಾರತೀಯ ಭಾಷಿಕರಿಗಷ್ಟೇ ಅಲ್ಲದೇ ಅಂತರರಾಷ್ಟ್ರೀಯ ಭಾಷೆಯಾಗಿಯೂ ಪ್ರವರ್ಧಮಾನಕ್ಕೆ ಬರುತ್ತಿದೆ. ಕೇಂದ್ರ ಸರ್ಕಾರವು ಹಿಂದಿ ಜೊತೆಗೆ ಮಾತೃಭಾಷಾ ಕಲಿಕೆ ಹಾಗೂ ಅಭಿವೃದ್ಧಿಗೆ ಮಹತ್ವ ನೀಡಿದೆ’ ಎಂದರು. ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗಳಿಗೂ ಆದ್ಯತೆ ಕೊಡಲಾಗಿದೆ’ ಎಂದು ಹೇಳಿದ ಅವರು ‘ರಾಷ್ಟ್ರೀಯ ಏಕೀಕರಣದಲ್ಲಿ ಹಿಂದಿ ಪಾತ್ರ ದೊಡ್ಡದು. ಮಹಾತ್ಮ ಗಾಂಧಿ ಅವರೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಸ್ಥಾಪಿಸಿದ್ದರು’ ಎಂದು ಸ್ಮರಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಪ್ರತಿಯೊಬ್ಬ ಕನ್ನಡಿಗ ಭಾರತೀಯ ಎಂಬ ತತ್ವವು ನಮ್ಮ ನಾಡಗೀತೆಯಲ್ಲಿಯೇ ಇದೆ. ಒಂದು ಲೋಕಸಭಾ ಕ್ಷೇತ್ರದಲ್ಲಿ ಕನ್ನಡ ಕೊಡವ ಅರೆಭಾಷೆಗಳಿವೆ. ಹೀಗಾಗಿ ಬಹುಭಾಷೆ ಸಂಸ್ಕೃತಿಯೇ ದೇಶದ ಶಕ್ತಿಯಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.