ಮೈಸೂರು: ‘ಭಾರತದ ಎಲ್ಲ ಭಾಷೆಗಳ ಮೇಲೆ ಅಭಿಮಾನ ಇರಿಸಿಕೊಂಡೇ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬೆಳೆಸಬೇಕಿದೆ’ ಎಂದು ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಪಾದಿಸಿದರು.

ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ವಿಭಾಗವು ಶನಿವಾರ ಆಯೋಜಿಸಿದ್ದ ‘ದಕ್ಷಿಣ ಹಾಗೂ ನೈರುತ್ಯ ವಿಭಾಗದ ಅಧಿಕೃತ ಭಾಷಾ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಾರತೀಯ ಸಮಾಜದ ಅಭಿವ್ಯಕ್ತಿಯೇ ಭಾಷೆಯಾಗಿದೆ. ದೇಶದ ಬಹುಸಂಸ್ಕೃತಿಯ ರಾಯಭಾರಿಯಾಗಿರುವ ಎಲ್ಲ ಭಾಷೆಗಳನ್ನು ಕಲಿತಾಗ ಮಾತ್ರವೇ ವೈವಿಧ್ಯತೆ ಅರಿಯಲು ಸಾಧ್ಯವಾಗುತ್ತದೆ’ ಎಂದರು.

‘ಸಶಕ್ತ ಪರಂಪರೆ ಹೊಂದಿರುವ ದೇಶದ ಅನೇಕತೆಯಲ್ಲಿಯೇ ಏಕತೆಯಿದೆ. ನಮ್ಮ ಸಂಸ್ಕೃತಿಯು ಇತಿಹಾಸ ಹಾಗೂ ಜ್ಞಾನದ ಆಧಾರದ ಮೇಲೆ ನಿಂತಿದೆ. ಹೀಗಾಗಿಯೇ ಹೆಚ್ಚು ವಿದೇಶಿಗರು ದೇಶದ ಜ್ಞಾನ ಭಂಡಾರ ಅರಿಯಲು ಇಲ್ಲಿಗೆ ಬರುತ್ತಾರೆ. ಜ್ಞಾನಿಗಳಾದ ಭಾರತೀಯರು ಸಮಾಜದ ಅಭಿವೃದ್ಧಿಯ ಕಡೆಗೆ ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ಯಾವುದೇ ವಿದೇಶಿ ಭಾಷೆಯನ್ನು ಕಲಿಯಬಹುದು. ಆದರೆ, ನಮ್ಮ ದೇಶದ ಭಾಷೆಗಳನ್ನು ಪ್ರೀತಿಸಬೇಕು. ದ್ವೇಷಿಸಬಾರದು’ ಎಂದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಾತನಾಡಿದರು.

ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು, ಪಾಂಡಿಚೇರಿ, ಲಕ್ಷದ್ವೀಪದ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕ್ಗಳಲ್ಲಿ ಭಾಷಾ ಅನುಷ್ಠಾನಗೊಳಿಸಿದ 32 ಉತ್ತಮ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ, ಪ್ರಮಾಣ ಪತ್ರ ನೀಡಲಾಯಿತು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಬಿನೋದ್ ಕುಮಾರ್, ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಕೃಷ್ಣನ್, ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಅಧಿಕೃತ ಭಾಷಾ ವಿಭಾಗದ ಜಂಟಿ ನಿರ್ದೇಶಕ ರಾಜೇಶ್ ಕುಮಾರ್ ಶ್ರೀವಾತ್ಸವ, ಉಪ ಕಾರ್ಯದರ್ಶಿ ಅನಿಲ್ ಕುಮಾರ್, ಬೆಂಗಳೂರು ವಿಭಾಗೀಯ ನಿರ್ದೇಶಕ ಅನಿರ್ಬನ್ ಕುಮಾರ್ ಬಿಸ್ವಾಸ್, ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.