ಹುಣಸೂರು: ‘22 ವರ್ಷಗಳ ಹಿಂದೆ ಶಾಸಕ ದಿ. ವಿ.ಪಾಪಣ್ಣ ಅವರ ಅವಧಿಯಲ್ಲಿ 868 ಫಲಾನುಭವಿಗಳಿಗೆ ನಿವೇಶನ ವಿತರಿಸಿದ್ದು, ಅವರಿಗೆ ನಿವೇಶನ ಹಸ್ತಾಂತರಿಸುವಲ್ಲಿ ಗೊಂದಲವಾಗಿದೆ. ಈ ಸಂಬಂಧ ಫಲಾನುಭವಿಗಳಿಂದ ದಾಖಲೆ ಸಂಗ್ರಹಿಸಿ ಏ.6 ರಂದು ನಡೆಯಲಿರುವ ಆಶ್ರಯ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.

ನಗರಸಭೆ ಕಚೇರಿ ಮುಂಭಾಗ ಹುಣಸೂರು ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮತ್ತು ಉಪಾಧ್ಯಕ್ಷ ಇಂಟೆಕ್ ರಾಜು ನೇತೃತ್ವದಲ್ಲಿ ಫಲಾನುಭವಿಗಳಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ನಗರಸಭೆಯಿಂದ ವಿತರಿಸಿದ ನಿವೇಶನಕ್ಕೆ ಸಂಬಂಧಿಸಿದಂತೆ ಈವರೆಗೂ ನಿವೇಶನ ಗುರುತಿಸಿ ನೀಡಿಲ್ಲ. ಈ ಸಂಬಂಧ ಫಲಾನುಭವಿಗಳು ಸೂಕ್ತ ದಾಖಲೆಯೊಂದಿಗೆ ನಗರಸಭೆಗೆ ನೀಡಲು ಈ ಹಿಂದೆ ಸೂಚಿಸಿದ್ದೆ. ಅದರಂತೆ ಈವರೆಗೆ 248 ಫಲಾನುಭವಿಗಳು ಸೂಕ್ತ ದಾಖಲೆ ಸಲ್ಲಿಸಿದ್ದಾರೆ’ ಎಂದರು.

‘868 ಫಲಾನುಭವಿಗಳಲ್ಲಿ ಕೇವಲ 248 ಅರ್ಜಿದಾರರು ದಾಖಲೆ ಸಲ್ಲಿಸಿದ್ದು, ಉಳಿದ ಫಲಾನುಭವಿಗಳು ಸಲ್ಲಿಸಲು ಮತ್ತೊಮ್ಮೆ ಒಂದು ತಿಂಗಳ ಕಾಲಾವಕಾಶ ಕಲ್ಪಿಸಲು ನಗರಸಭೆಗೆ ತಿಳಿಸಿದ್ದೇನೆ. ಪ್ರಥಮ ಹಂತದಲ್ಲಿ ಈಗಾಗಲೇ ದಾಖಲೆ ನೀಡಿರುವ ಅರ್ಜಿದಾರರ ಪಟ್ಟಿ ಸಿದ್ಧಪಡಿಸಿ, ಈ ಹಿಂದೆ ಜಿಲ್ಲಾಧಿಕಾರಿ ಅನುಮೋದಿಸಿದ ಪಟ್ಟಿ ಎರಡನ್ನು ಪರಿಶೀಲಿಸಿ ಪ್ರತ್ಯೇಕ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಲಾಗಿದೆ’ ಎಂದು ತಿಳಿಸಿದರು.

ಪುನಃ ಆಹ್ವಾನ: ಫಲಾನುಭವಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿ, ನಗರಸಭೆಗೆ ಸೂಕ್ತ ದಾಖಲೆ ಸಲ್ಲಿಸಲು ಪ್ರಕಟಣೆ ಹೊರಡಿಸಲು ನಗರಸಭೆ ಆಯುಕ್ತೆ ಮಾನಸ ಅವರಿಗೆ ಸೂಚಿಸಿದರು.

ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ನಗರಸಭೆಯಿಂದ ಪರಿಶೀಲಿಸಿ ನ್ಯಾಯಬದ್ಧವಾಗಿ ನಿವೇಶನ ವಿತರಿಸಿ ಕಾನೂನಾತ್ಮಕವಾಗಿ ಹಸ್ತಾಂತರಿಸಲು ಬದ್ದ ಎಂದರು.

ತಂಡ: ‘ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಜಿದಾರರ ಮನೆಗಳಿಗೆ ನಗರಸಭೆ ಸಿಬ್ಬಂದಿ ಶನಿವಾರ ಮತ್ತು ಭಾನುವಾರ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿ ಅಧಿಕಾರಿಯೊಂದಿಗೆ ಫಲಾನುಭವಿ ಇರುವ ವಿಡಿಯೊ ಮತ್ತು ಫೋಟೊ ತೆಗೆದು ಖಾತ್ರಿಪಡಿಸಿ’ ಎಂದರು.

‘ನಗರದಲ್ಲಿ ವಾಸವಿಲ್ಲದವರ ಮತ್ತು ಸರ್ಕಾರಿ ಉದ್ಯೋಗಿಯಾಗಿದ್ದವರ ಹೆಸರನ್ನು ಪಟ್ಟಿಯಿಂದ ವಜಾಗೊಳಿಸಿ’ ಎಂದು ಅಧಿಕಾರಿಗೆ ಸೂಚಿಸಿದರು.

ನಗರಸಭೆ ಆಯುಕ್ತೆ ಮಾನಸ, ಕಂದಾಯ ಇಲಾಖೆ ಅಧಿಕಾರಿ ಸಿದ್ದರಾಜು, ಚಂದ್ರು ಹಾಗೂ ಫಲಾನುಭವಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-38-1459584148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.