ಹುಣಸೂರು: ಜನಗಣತಿ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ವೆಬ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಲು ಪ್ರೇರಣೆ ನೀಡಬೇಕು. ಆ ಮೂಲಕ ಸಮರ್ಪಕ ಗಣತಿ ನಡೆಸಲು ಒತ್ತು ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಹೇಳಿದರು.

ನಗರದ ಸಂತ ಜೋಸೆಫ್ ಶಾಲೆಯ ಗಣತಿದಾರರ ತರಬೇತಿ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು.

ತರಬೇತಿಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಗಣತಿಯಲ್ಲಿ ಕೈಗೊಳ್ಳಬೇಕಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದರು.

ಸಾರ್ವಜನಿಕರು ನೇರವಾಗಿ ಗಣತಿ ಕಾರ್ಯದಲ್ಲಿ ಭಾಗಿಯಾಗಿ ತಮ್ಮ ವಿವರವನ್ನು ವೆಬ್ ಪೋರ್ಟಲ್ನಲ್ಲಿ ನಮೂದಿಸುವ ಬಗ್ಗೆ ಗಣತಿದಾರರು ಒತ್ತು ನೀಡಬೇಕು ಎಂದರು.

ಸಾರ್ವಜನಿಕರು ಹಂಚಿಕೊಳ್ಳುವ ಸಮಗ್ರ ಮಾಹಿತಿಯನ್ನು ಯಾವುದೇ ಕಾರಣದಿಂದಲೂ ಸೋರಿಕೆ ಆಗದಂತೆ ಕ್ರಮವಹಿಸುವ ಬಗ್ಗೆ ಜನರಿಗೆ ಭರವಸೆ ನೀಡಬೇಕು. ಈ ಬಗ್ಗೆ ಅವರಿಗೆ ಮನದಟ್ಟು ಮಾಡಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆ ಅಧಿಕಾರಿ ಶ್ರೀಪಾದ್, ಚಂದ್ರಶೇಖರ್, ಮಾಸ್ಪರ್ ತರಬೇತುದಾರರಾದ ಸಂತೋಷ್ ಕುಮಾರ್, ರಮಣನಾಯಕ್, ಪ್ರಸನ್ನ, ಬಸವರಾಜ್, ಚಂದ್ರು, ಮಂಜುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-38-830820665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.