ಹುಣಸೂರು: ಆದಿವಾಸಿ ಸಮುದಾಯದವರ ಮಸ್ಯೆಗಳಿಗೆ ಪರಿಹಾರ ಸಿಗದೆ ಇಂದಿಗೂ ಸಮಸ್ಯೆಗಳ ಸುಳಿಯಲ್ಲೇ ಬದುಕುತ್ತಿರುವುದು ವಿಪರ್ಯಾಸ ಎಂದು ಮಾಸ್ತಮ್ಮನ ಹಾಡಿ ಗಿಡಮೂಲಿಕೆ ತಜ್ಞೆ ಮಾಸ್ತಮ್ಮ ವ್ಯಕ್ತಪಡಿಸಿದರು.

ತಾಲ್ಲೂಕಿನ ನೇರಳಕುಪ್ಪೆ–ಬಿ ಹಾಡಿ, ಮಾಸ್ತಮನ ಹಾಡಿ, ಶೆಟ್ಟಹಳ್ಳಿ ಹಾಡಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಠಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ತಂಡ ಭೇಟಿ ನೀಡಿ ಸಂವಾದ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡರು.

ವಿದ್ಯಾರ್ಥಿಗಳೊಂದಿಗೆ ಮಾತನಾಡಿದ , ‘ಮಾಸ್ತಮ್ಮ ಆದಿವಾಸಿ ಸಮುದಾಯದವರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಅರಣ್ಯ ಹಕ್ಕು ಮಾನ್ಯ ಕಾಯ್ದೆ ಜಾರಿಯಿಂದ ನಮ್ಮ ಪೂರ್ವಜರ ಆಸ್ತಿ ನಮ್ಮ ಪಾಲಿಗೆ ಇಲ್ಲವಾಗಿದೆ. ಸಮುದಾಯ ಭವನ ಎಲ್ಲಾ ಸಮುದಾಯಕ್ಕೂ ನಿರ್ಮಾಣ ಮಾಡುತ್ತಿದ್ದು, ಆದಿವಾಸಿ ಗಿರಿಜನರಿಗೆ ಏಕಿಲ್ಲ ?’ ಎಂದರು.

‘ಆದಿವಾಸಿ ಗಿರಿಜನರಿಗೆ ಪೌಷ್ಟಿಕ ಆಹಾರ ವಿತರಣೆ ಇದ್ದರೂ ಮೂರು ತಿಂಗಳಿಂದ ಹಾಡಿಗೆ ಬಂದಿಲ್ಲ, ಸರ್ಕಾರದ ಗ್ಯಾರಂಟಿ ಯೋಜನೆ ಇಲ್ಲವಾಗಿದೆ ಎಂದರು. ಹುಲಿ ಯೋಜನೆ ಹೆಸರಿನಲ್ಲಿ ಅರಣ್ಯದಿಂದ ಹೊರ ಹಾಕಿದ 3,418 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್ ಆದೇಶಿಸಿದ್ದರೂ ಸರ್ಕಾರ ದಶಕ ಕಳೆದರೂ ಅನುಷ್ಠಾನಗೊಳಿಸಿಲ್ಲ. ಇದು ನ್ಯಾಯಾಂಗ ನಿಂದನೆ ಆಗಿದೆ’ ಎಂದರು.

ವಿದ್ಯಾರ್ಥಿಗಳು ನೇರಳಕುಪ್ಪೆ ಹಾಡಿ ಮತ್ತು ಮಾಸ್ತಮ್ಮನಹಾಡಿಯಲ್ಲಿ ನಿವಾಸಿಗಳ ಮನೆಗೆ ಭೇಟಿ ನೀಡಿ ಅವರ ಜೀವನ ಶೈಲಿ ಕುರಿತು ಮಾಹಿತಿ ಸಂಗ್ರಹಿಸಿದರು.

ರೈಲ್ವೆ ತಡೆಗೋಡೆ: ಹಾಡಿಗೆ ಹೊಂದಿಕೊಂಡಿರುವ ನಾಗರಹೊಳೆ ಅರಣ್ಯದಂಚಿನಲ್ಲಿ ಅಳವಡಿಸಿದ ರೈಲ್ವೆ ತಡೆಗೋಡೆ ಕುರಿತು ಮಾಹಿತಿ ಸಂಗ್ರಹಿಸಿ ಅದರ ಸಾದಕ–ಬಾಧಕ ಕಿರಿತು ಚರ್ಚಿಸಿದರು.

ವಿದ್ಯಾರ್ಥಿಗಳ ಭೇಟಿ ಸಮಯದಲ್ಲಿ ವಿಠಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಸೌಮ್ಯ, ಪ್ರಸನ್ನಕುಮಾರ್ ಮತ್ತು ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-38-1807236985

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.