ಹುಣಸೂರು: ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ದೇಶದಲ್ಲಿ ಶೋಷಿತರಿಗೆ ಸಂವಿಧಾನಾತ್ಮಕ ಹಕ್ಕು ನೀಡಿ ಸಮಾಜಮುಖಿಯನ್ನಾಗಿಸಿದವರು. ಈ ಇಬ್ಬರ ಜಯಂತಿ ನವರಾತ್ರಿಯ ಮಾದರಿ ಆಚರಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಆರ್,ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಇವರಿಬ್ಬರ ವಿಚಾರಗಳನ್ನು 9 ದಿನ ಒಂದೊಂದು ವಿಷಯ ಸಂವಾದ, ಚರ್ಚೆ ನಡೆಸಿ ಜನರಿಗೆ ವಿಚಾರಧಾರೆ ತಲಪಿಸಬೇಕು. ಹುಣಸೂರು ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಇಬ್ಬರ ನಾಯಕರ ಬಗ್ಗೆ 9 ದಿನ ವಿವಿಧ ವಿಚಾರವನ್ನು ಚರ್ಚಿಸಿ ಅಂಬೇಡ್ಕರ್ ಮತ್ತು ಬಾಬು ಅವರ ಸ್ಮರಣೆ ಮಾಡಲಾಗಿತ್ತು ಎಂದರು.

ನಿವೃತ್ತ ಪ್ರೊ.ಸಿದ್ದೇಗೌಡ ಅವರು ಪ್ರಧಾನ ಭಾಷಣ ಮಾಡಿದರು. ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಪುಷ್ಪ ಅಮರನಾಥ್ ಮಾತನಾಡಿ, ‘ ಅಂಬೇಡ್ಕರ್ ಸಾಮಾಜಿಕ ನ್ಯಾಯ ಕಲ್ಪಿಸುವ ಸಂವಿಧಾನ ರಚಿಸಿದ್ದಾರೆ. ಬಾಬು ಜಗಜೀವನರಾಂ ಹಸಿರು ಕ್ರಾಂತಿ ಹರಿಕಾರ’ ಎಂದರು.

ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿದರು. ಗ್ಯಾರಂಟಿ ಸಮಿತಿ ತಾಲ್ಲೂಕು ಸಮಿತಿ ಅಧ್ಯಕ್ಷ ರಾಘು, ಕಾಂಗ್ರೆಸ್ ಅಧ್ಯಕ್ಷ ದೇವರಾಜ್.ಮುಖಂಡರಾದ ಕುನ್ನೇಗೌಡ, ಪುಟ್ಟರಾಜ್, ಚಿಕ್ಕಸ್ವಾಮಿ ಮಾತನಾಡಿದರು. ರವಿಪ್ರಸನ್ನ, ಪ್ರೇಮಕುಮಾರ್, ಬಾಲಚಂದ್ರ, ಕಲ್ಪನ, ನೇತ್ರಾವತಿ, ಮಂಜುಳ, ರೇಖಾಮಣಿ, ರಕ್ಷಿತ್, ಫೈಜಲ್, ಧರ್ಶನ್, ಧರ್ಮಾಪುರ ಮಹದೇವ್, ಹೊಬ್ಬಪ್ಪ, ಹೆಮ್ಮಿಗೆ ರಾಮೇಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ಬಿಳಿಕೆರೆ ಬಸವರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-38-2105635836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.