ಹುಣಸೂರು: ‘ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಸರ್ವ ಧರ್ಮಿಯರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳುವಂತೆ ಮಾಡಿದ ಸಮಸಮಾಜ ನಿರ್ಮಾತೃ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್ ಕೊಡುಗೆಯನ್ನು ಪ್ರತಿ ಕ್ಷಣವೂ ಅನುಭವಿಸುವ ಈ ಸಮಾಜ, ಅವರ ಸ್ಮರಣೆಯನ್ನು ಜಯಂತಿಗೆ ಸೀಮಿತಗೊಳಿಸಿರುವುದು ವಿಷಾದನೀಯ. ಅಂಬೇಡ್ಕರ್, ಬಾಬು ಜಗಜೀವನರಾಂ ಸೇರಿದಂತೆ ಅನೇಕ ಮಹನಿಯರನ್ನು ಈ ದೇಶದ ನಾಗರಿಕರು ವರ್ಷದ ಎಲ್ಲಾ ದಿನವೂ ಸ್ಮರಿಸಬೇಕಾಗಿದೆ’ ಎಂದರು.

‘ಸಮಸಮಾಜ ನಿರ್ಮಾಣಕ್ಕೆ ಶೋಷಿತರ ಪರವಾಗಿ ಧ್ವನಿ ಎತ್ತಿದ ಅಂಬೇಡ್ಕರ್, ಮೇಲ್ವರ್ಗದವರ ವಿರುದ್ಧ ಹೋರಾಟ ನಡೆಸಿದ್ದರ ಪರಿಣಾಮ ಇಂದು ಸರ್ವ ಜನರು ಸಮಾನ ತತ್ವದಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ’ ಎಂದು ಹೇಳಿದರು.

‘ಇಂದಿಗೂ ಅಸ್ಪೃಶ್ಯತೆ, ಜಾತೀಯತೆ ಶಮನವಾಗದೆ ಅಂಬೇಡ್ಕರ್ ಕಂಡಿದ್ದ ಕನಸಿನ ಭಾರತ ನನಸಾಗದಿರುವುದು ವಿಪರ್ಯಾಸದ ಸಂಗತಿ’ ಎಂದು ಆತಂಕ ವ್ಯಕ್ತಪಡಿಸಿದರು.

ಹುಣಸೂರು ಉಪವಿಭಾಗದಲ್ಲಿ ಬೃಹತ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಬೀಜಗನಹಳ್ಳಿ ಗ್ರಾ.ಪಂ.ನಲ್ಲಿ 1 ಎಕರೆ 10 ಗುಂಟೆ ಸರ್ಕಾರಿ ಭೂಮಿ ಮಂಜೂರು ಮಾಡಿದ್ದು, ಅತ್ಯಾಧುನಿಕ ಭವನ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಹೇಳಿದರು.

ಪಿರಿಯಾಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪುಟ್ಟಮಾದಯ್ಯ ಪ್ರಧಾನ ಭಾಷಣ ಮಾಡಿದರು. ಉಪವಿಭಾಗಾಧಿಕಾರಿ ಕಾವ್ಯಾರಾಣಿ, ದಲಿತ ಮುಖಂಡರಾದ ನಾಗರಾಜ್ ಮಲ್ಲಾಡಿ, ಹರಿಹರ ಆನಂದಸ್ವಾಮಿ, ಪಿ.ಎಸ್.ಐ ತಾಜುದ್ದಿನ್ ಮಾತನಾಡಿದರು.

ಪವವಿ ಪೂರ್ವ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಅಂಬೇಡ್ಕರ್ ಕುರಿತ ಗೀತೆ ಹಾಡಿದರು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸುರೇಂದ್ರ, ಪಿ.ಸತೀಶ್, ಡಿವೈಎಸ್ಪಿ ರವಿ, ವರದರಾಜು, ರತ್ನಾಪುರಿ ಪುಟ್ಟ ರಾಜ್, ಬಸವಲಿಂಗಯ್ಯ, ನಿಂಗ ರಾಜ್ ಮಲ್ಲಾಡಿ, ಅಣ್ಣಯ್ಯ ನಾಯಕ, ದೇವರಾಜ ಒಡೆಯರ್, ನೇರಳಕುಪ್ಪೆ ಮಹದೇವ್, ಹೊಸೂರು ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-38-1342237197

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.