ಹುಣಸೂರು: ‘ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಹಾಗೂ ಮೂಲಭೂತ ಹಕ್ಕುಗಳನ್ನು ಸಂವಿಧಾನ ಬದ್ಧವಾಗಿ ಸಿಗುವಂತೆ ಧ್ವನಿಯಾಗಿ ಹೋರಾಡಿದ ಡಾ.ಬಿ.ಆರ್. ಅಂಬೇಡ್ಕರ್ ಸರ್ವಕಾಲಕ್ಕೂ ಪ್ರಸ್ತುತ’ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಹಿಂಡಗೂಡ್ಲು ಗ್ರಾಮದಲ್ಲಿ ಜೈಭೀಮ್ ಪುತ್ಥಳಿ ಪ್ರತಿಷ್ಠಾನ ಸಮಿತಿ ನೇತೃತ್ವದಲ್ಲಿ ಸ್ಥಾಪಿಸಿದ 7 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಸ್ವಾತಂತ್ರ್ಯ ಭಾರತಕ್ಕೂ ಮುನ್ನ ದಲಿತ ಸಮುದಾಯ ಮೇಲ್ವರ್ಗದವರ ಹಿಡಿತಕ್ಕೆ ಸಿಲುಕಿ ಸ್ವಾಭಿಮಾನ ಬಿಟ್ಟು ಬದುಕು ನಡೆಸುವ ಪರಿಸ್ಥಿತಿ ಇತ್ತು, ಆ ಪರಿಸ್ಥಿತಿ ಸ್ವಾತಂತ್ರ್ಯ ನಂತರದಲ್ಲೂ ಸುಧಾರಣೆ ಕಾಣದ ಕಾರಣ ಸ್ವತಂತ್ರ್ಯ ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ಥಿತ್ವಕ್ಕೆ ಬಂದ ನಂತರದಲ್ಲಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಅಂಬೇಡ್ಕರ್ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಮೇಲೆತ್ತುವ ದಿಕ್ಕಿನಲ್ಲಿ ಹಲವು ಸುಧಾರಿತ ಕಾಯ್ದೆಗಳನ್ನು ಅನುಷ್ಠಾನಗೊಳಿಸಿ ದಲಿತ ಸಮುದಾಯವನ್ನು ಸಮಾಜಮುಖಿಯನ್ನಾಗಿಸುವಲ್ಲಿ ಅಪಾರ ಕೊಡುಗೆ ನೀಡಿದ ಧೀಮಂತ ನಾಯಕ’ ಎಂದು ಶ್ಲಾಘಿಸಿದರು.

ಸಮ ಸಮಾಜ ನಿರ್ಮಾಣಕ್ಕೆ ಹಲವು ಅಡ್ಡಿ ಆತಂಕಗಳು ಸ್ವಾತಂತ್ರ್ಯ ಭಾರತದಲ್ಲಿ ಎದುರಾಗಿದ್ದ ಸಮಯದಲ್ಲಿ ಡಾ.ಅಂಬೇಡ್ಕರ್ ಅವರು ಸಂವಿಧಾನಬದ್ಧವಾಗಿ ಎಲ್ಲಾ ಸವಲತ್ತುಗಳನ್ನು ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಸಿಗುವಂತೆ ವ್ಯವಸ್ಥಿತವಾಗಿ ಜಾರಿಗೊಳಿಸಿದ ಕಾರಣ ಸ್ವಾತಂತ್ರ್ಯ ಬಂದು 76 ವರ್ಷಗಳ ಅವಧಿಯಲ್ಲಿ ಅಲ್ಪಮಟ್ಟದ ಬದಲಾವಣೆ ಮತ್ತು ಹೊಂದಾಣಿಕೆ ಈ ಸಮಾಜದಲ್ಲಿ ಕಾಣುತ್ತಿದ್ದೇವೆ. ಇದಲ್ಲದೆ ರಾಜಕೀಯ ಶಕ್ತಿಯನ್ನು ದಲಿತ ಸಮುದಾಯಗಳಿಗೆ ಕಲ್ಪಿಸಿ ಸಾಮಾಜಿಕ ಅನ್ಯಾಯವನ್ನು ತಡೆಯುವಲ್ಲಿಯೂ ಅಂಬೇಡ್ಕರ್ ಕೊಡುಗೆ ಅಪಾರ’ ಎಂದರು.

ಬೌದ್ಧ ವಿವಾಹದ ಕಲ್ಯಾಣ ಸಿರಿ ಬಂತೇಜಿ ಸಾನಿಧ್ಯ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಮುಖಂಡ ನಿಂಗರಾಜ್ ಮಲ್ಲಾಡಿ, ಜೆಡಿಎಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ದೇವರಾಜ್ ಒಡೆಯರ್, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ರಾಘು, ಉದ್ಯಮಿ ಡಾ.ಎಚ್.ವಿ.ಕಾರ್ತಿಕ್, ಶಿವಕುಮಾರ್, ಕುಮಾರ್, ಎಚ್.ಎಸ್. ಕಿರಂಗೂರು ಸ್ವಾಮಿ, ಹರೀಶ್, ಹೈರಿಗೆ ಗೋವಿಂದರಾಜ್, ಬಸವಯ್ಯ, ರಮೇಶ್, ನಾಗರಾಜ್ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-38-1227669657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.