ಹುಣಸೂರು: ನಗರಸಭೆ ವ್ಯಾಪ್ತಿಯಲ್ಲಿನ ಕುರ್ಜು ಬೀದಿಯ ಚಿಕ್ಕಮ್ಮ ತಾಯಿ ದೇವಸ್ಥಾನಕ್ಕೆ ಸೇರಿದ ನಿವೇಶನವನ್ನು ಖಾತೆ ಮಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು ಎಂದು ನಗರಸಭೆ ಆಯುಕ್ತೆ ಮಾನಸ ಹೇಳಿದರು.

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಈ ಸಮಸ್ಯೆ ಅಂತಿಮವಾಗಿ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದಿಂದ ಪೂರ್ಣಗೊಳಿಸಿ ದೇವಸ್ಥಾನದ ನಿವೇಶನಕ್ಕೆ ದಾಖಲೆ ಹಾಗೂ ಖಾತೆ ನೀಡಿದ್ದೇವೆ. ದಲಿತ ಸಂಘರ್ಷ ಸಮಿತಿ ಈ ಸಂಬಂಧ ನಿರಂತರ ಸಂಪರ್ಕದಲ್ಲಿ ಇದ್ದ ಕಾರಣ ದೇವಸ್ಥಾನದ ನಿವೇಶನ ಸಮಸ್ಯೆ ಅಂತಿಮಘಟ್ಟಕ್ಕೆ ಬರಲು ಸಾಧ್ಯವಾಯಿತು. ದಸಂಸ ದೇವಸ್ಥಾನದ ಸಮಸ್ಯೆ ಬಗೆಹರಿಸುವಲ್ಲಿ ತೋರಿಸಿದ ಕಾಳಜಿಗೆ ನಗರಸಭೆ ಶ್ಲಾಘಿಸಿದೆ ಎಂದರು.

ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ದಶಕಗಳಿಂದ ದೇವಸ್ಥಾನಕ್ಕೆ ತನ್ನದೇ ನಿವೇಶನ ಹೊಂದಿದ್ದರೂ ಅಧಿಕೃತವಾಗಿ ದಾಖಲೆ ಇಲ್ಲದೆ ಸರ್ಕಾರದ ಯಾವುದೇ ಯೋಜನೆ ಬಳಸಿಕೊಳ್ಳಲು ಸಾಧ್ಯವಿರಲಿಲ್ಲ. ಈ ಸಮಸ್ಯೆ ನಗರಸಭೆ ಆಯುಕ್ತರ ಗಮನಕ್ಕೆ ತಂದು ನಿವೇಶನಕ್ಕೆ ದಾಖಲೆ ನೀಡುವಂತೆ ಮಾಡಿದ ಮನವಿಗೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿ ಖಾತೆ ಮಾಡುವಲ್ಲಿ ಸಹಕರಿಸಿದೆ ಎಂದರು.

ಕಲ್ಕುಣಿಗೆ ಬಡಾವಣೆ ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷೆ ಭವ್ಯ ರಾಜೇಶ್ ನಗರಸಭೆ ಕಂದಾಯ ವಿಭಾಗದ ಅಧಿಕಾರಿ ಸಿದ್ದಯ್ಯ, ಸುರೇಂದ್ರ, ದಸಂಸ ಮುಖಂಡ ಬಲ್ಲೇನಹಳ್ಳಿ ಕೆಂಪರಾಜು, ಸಿದ್ದರಾಜ ನಾಯಕ, ಮಹೇಶ್, ಚಂದ್ರನಾಯಕ ಮಂಜುಳಾ, ಪಾರ್ವತಿ, ಲಕ್ಷ್ಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-38-2111356429

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.