ಹುಣಸೂರು: ‘ತಾಲ್ಲೂಕಿನ ದಲಿತ ಕೇರಿಗಳಲ್ಲಿ ಮೂಲ ಸವಲತ್ತುಗಳ ಕೊರತೆ ಇದ್ದು, ತಾಲ್ಲೂಕು ಆಡಳಿತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ’ ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ನೇತೃತ್ವದಲ್ಲಿ ವಿವಿಧ ಗ್ರಾಮದ ದಲಿತ ಕೇರಿ ನಿವಾಸಿಗರು ತಹಶೀಲ್ದಾರ್ ಮಂಜುನಾಥ್ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.

ಅಧಿಕಾರಿ ಭೇಟಿ ಮಾಡಿದ ತಾಲ್ಲೂಕಿನ ವಿವಿಧ ಗ್ರಾಮಗಳ ದಲಿತ ಸಮುದಾಯದವರು, ದಲಿತರಿಗೆ ಮೂಲ ಸೌಕರ್ಯ ಸವಲತ್ತು ಇಲ್ಲದೆ ಅತಂತ್ರ ಜೀವನ ನಡೆಸುತ್ತಿದ್ದೇವೆ. ಸತ್ತವರನ್ನು ಹೂಳಲು ಸ್ಮಶಾನ ಇಲ್ಲದೆ ನದಿ, ಕೆರೆ ದಂಡೆಯಲ್ಲಿ ಸಂಸ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲೆಮಾರಿ ಸಮುದಾಯದವರಿಗೆ ನಿವೇಶನ ಇಲ್ಲದೆ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೆ ಜೋಪಡಿಯಲ್ಲಿ ಬದುಕು ನಡೆಸಬೇಕಾಗಿದೆ’ ಎಂದು ಅಲವತ್ತುಕೊಂಡರು.

‘ಬಿಳಿಗೆರೆ ಗ್ರಾಮದ 9 ದಲಿತ ಕುಟುಂಬಗಳಿಗೆ ಆಶ್ರಯ ಯೋಜನೆ ಅಡಿಯಲ್ಲಿ ಹಕ್ಕು ಪತ್ ಕೊಡಿಸಬೇಕು. ತರಿಕಲ್ ಗ್ರಾಮದ ಭೈಯಣ್ಣ ಎಂಬುವವರ ಜಮೀನು ಆಕ್ರಮಿಸಿಕೊಂಡಿದ್ದು, ಸರ್ವೆ ಇಲಾಖೆಯಿಂದ ಅಳತೆ ಮಾಡಿಸಿ ಹದ್ದುಬಸ್ತು ಮಾಡಿಸಿ ಬೇಸಾಯ ಮಾಡಲು ಕಂದಾಯ ಇಲಾಖೆ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

‘ಬಾಚಹಳ್ಳಿಯಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಈ ಸಂಬಂಧ ಹಲವು ಬಾರಿ ಪರಿಶಿಷ್ಟ ಜಾತಿ ಇಲಾಖೆ ಅಧಿಕಾರಗಳ ಗಮನಕ್ಕೆ ತಂದಿದ್ದರೂ ಪಡಿತರ ಕಾರ್ಡ್ ವ್ಯವಸ್ಥೆ ಮಾಡಿಲ್ಲ. ಹುಣಸೂರು ನಗರದ ಎನ್.ಎಸ್.ತಿಟ್ಟು ಬಡಾವಣೆಯಲ್ಲಿ ವಾಸಿಸುತ್ತಿರುವ ಹಿಂದುಳಿದ ಸಮುದಾಯದವರ ಮನೆಗಳಿಗೆ ಇ ಖಾತೆ ಮಾಡಿಕೊಡುವಂತೆ ನಗರಸಭೆಗೆ ಮನವಿ ಮಾಡಿದ್ದರೂ ನಗರಸಭೆ ಕ್ರಮವಹಿಸಿಲ್ಲ’ ಎಂದು ದೂರಿದರು.

‘ನಗರದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಭವನ ದುರಸ್ತಿಗೆ ₹ 10 ಲಕ್ಷ ಅನುದಾನ ನೀಡುವಂತೆ ಮನವಿ ಮಾಡಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಿಲ್ಲ. ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿನ ದೇವರಾಜ ಅರಸು ಅವರ ನಿವಾಸ ಜೀರ್ಣೋದ್ಧಾರಗೊಳಿಸಿ ಸಾರ್ವಜನಿಕರ ವಸ್ತು ಸಂಗ್ರಹಾಲಯವನ್ನಾಗಿ ಮಾಡುವಂತೆ’ ಒತ್ತಾಯಿಸಿದರು.

ಬಲ್ಲೇನಹಳ್ಳಿ ಕೆಂಪರಾಜು, ಮಲ್ಲಿಕ್ ಪಾಶಾ, ಮಾದೇವ, ಗಾಯತ್ರಿ, ವಸಂತ, ದಾಸಪ್ಪ, ಶೋಭ, ಮಂಜುಳಾ, ದೊಂಬರ ಕಾಲೊನಿ ನಿವಾಸಿ ಶಿವರಾಜು, ಪಾರ್ವತಿ, ಶೈಲಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-38-272529043

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.