ಹುಣಸೂರು: ‘ತಾಲ್ಲೂಕು ಗಾಣಿಗರ ಸಂಘದಲ್ಲಿ ಹಣಕಾಸು ಅವ್ಯವಹಾರ ನಡೆಸಿಲ್ಲ. ರಾಜ್ಯಸಭಾ ಸದಸ್ಯ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ ಶಾಸಕ ಹರೀಶ್ ಗೌಡ ಕೊಡಿಸಿದ ಅನುದಾನ ಬ್ಯಾಂಕಕ್ನಲ್ಲಿ ಇಟ್ಟಿದ್ದು, ಸಂಘದ ಮಾಜಿ ಅಧ್ಯಕ್ಷ ಇಂಟೆಕ್ ರಾಜು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಸಂಘದ ಕಾರ್ಯದರ್ಶಿ ಬಾಬು ಎಚ್.ಟಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂಘದ ಈ ಹಿಂದಿನ ಅಧ್ಯಕ್ಷರು ಸಮಾಜದ ಸಂಘದ ಬಗ್ಗೆ ತಪ್ಪು ಮಾಹಿತಿ ನೀಡಿ ಸಮುದಾಯ ತಲೆ ತಗ್ಗಿಸುವಂತೆ ನಡೆದಿರುವುದು ವಿಷಾದನೀಯ. ಅವರ ಅಧ್ಯಕ್ಷತೆಯಲ್ಲಿ 3 ವರ್ಷ ಸಂಘದ ಯಾವುದೇ ಕಾರ್ಯ ಚಟುವಟಿಕೆ ನಡೆಸದೆ ಸಂಘ ನೋಂದಣಿಯಾಗದೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರು ನೀಡಿದ್ದ ₹ 30 ಲಕ್ಷ ಅನುದಾನ ಸಮಯಕ್ಕೆ ಬಳಕೆಯಾಗದೆ ಹಿಂದಕ್ಕೆ ಹೋಗಿದೆ’ ಎಂದು ತಿಳಿಸಿದರು.

‘ಸಮುದಾಯದ ಅಧ್ಯಕ್ಷರಾಗಿ ಮೂರು ವರ್ಷ ಅಧಿಕಾರ ಅವಧಿ ಮುಗಿದ ಬಳಿಕ ಇಂಟಕ್ ರಾಜು ಅವರು, ಸಂಘಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನೀಡದೆ ಸಂಘಟನೆ ವಿರೋಧಿ ಚಟುವಟಿಕೆಯಲ್ಲಿದ್ದಾರೆ ಎಂದು ಆಕ್ಷೇಪಿಸಿದರು. ಈ ಸಂಬಂಧ ಸಂಘ 8 ಬಾರಿ ನೋಟಿಸ್ ಜಾರಿಗೊಳಿಸಿದ್ದರೂ ಯಾವುದಕ್ಕೂ ಸ್ಪಂದಿಸಿಲ್ಲ’ ಎಂದರು.

ಒಗ್ಗೂಡಿಸುವ ಪ್ರಯತ್ನ: ತಾಲ್ಲೂಕು ಗಾಣಿಗರ ಸಂಘದಲ್ಲಿ ಉಂಟಾಗಿರುವ ಅಸಮಾಧಾನ ಹೊರಹಾಕಿ ಒಗ್ಗೂಡಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮಾಜಿ ಅಧ್ಯಕ್ಷರನ್ನು ಮನವೊಲಿಸುವ ಕೆಲಸ ಶಾಸಕ ಜಿ.ಡಿ.ಹರೀಶ್ ಗೌಡ ಹಲವು ಬಾರಿ ಪ್ರಯತ್ನಿಸಿದ್ದರೂ ಸಕರಾತ್ಮಕವಾಗಿ ಸ್ಪಂದಿಸಿಲ್ಲ ಎಂದರು.

24ರಂದು ಚಾಲನೆ: ಗಾಣಿಗರ ಸಮಾಜದಿಂದ ಈಗಾಗಲೇ ನಿಗದಿಯಾಗಿರುವ ₹ 64 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್ ಗೌಡ ಏ.24ರಂದು ಪೂಜೆ ಕಾರ್ಯಕ್ರಮ ನಡೆಸಿ ಚಾಲನೆ ನೀಡಲಿದ್ದಾರೆ ಎಂದರು.

ಗಾಣಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜುನ್, ಸದಸ್ಯರಾದ ಕೆ.ರಮೇಶ್, ನಂಜುಂಡಸ್ವಾಮಿ, ಮಹದೇವಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-38-1436794351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.