ಹುಣಸೂರು: ‘ಹಜ್ ಯಾತ್ರಾರ್ಥಿಗಳು ನಿತ್ಯ ದೇವರ ಪ್ರಾರ್ಥನೆ ಮತ್ತು ಕುರಾನ್ ಪಠಣದಲ್ಲಿ ತೊಡಗಿಸಿಕೊಂಡು ಅಲ್ಲಾಹ್ ಪ್ರಾರ್ಥನೆಯಲ್ಲಿ ನಿರಂತರಾಗಿ ತೊಡಗಿಸಿಕೊಳ್ಳುವುದರಿಂದ ಹಜ್ ಯಾತ್ರೆ ಸಾರ್ಥಕವಾಗಲಿದೆ’ ಎಂದು ಮುಸ್ಲಿಂ ಸಮುದಾಯದ ಮುಖಂಡ ಸಲೀಂ ಅತ್ತಾರಿ ಹೇಳಿದರು.

ನಗರದ ಜಾಮಿಯಾ ಮಸೀದಿಯಲ್ಲಿ ಈಚೆಗೆ ಸಮಿತಿ ವತಿಯಿಂದ ತಾಲ್ಲೂಕಿನಿಂದ ಹಜ್ ಯಾತ್ರಾ ಪ್ರವಾಸಕ್ಕೆ ತೆರಳುತ್ತಿರುವ ಭಕ್ತರಿಗೆ ಗೌರವಿಸಿ ಮಾತನಾಡಿದರು.

‘ನಿತ್ಯ ವಿಶೇಷ ಪ್ರಾರ್ಥನೆ ಮತ್ತು ಕುರಾನ್ ಪಠಣದಿಂದ ಮನಸ್ಸಿನ ಮೇಲೆ ಹತೋಟಿ ಸಿಗಲಿದೆ. ಹಜ್ ಪ್ರವಾಸದಲ್ಲಿ ತಾಪಮಾನ ಏರುಪೇರಾಗುವ ಸಾಧ್ಯತೆ ಇದ್ದು, ಆ ತಾಪಮಾನವನ್ನು ಸಹಿಸಿಕೊಳ್ಳುವಷ್ಟು ಯಾತ್ರಿಗರು ಈಗಲಿಂದಲೇ ದೈಹಿಕವಾಗಿ ಸಜ್ಜಾಗಬೇಕು. ಯಾತ್ರೆ ಮುಗಿಸಿದ ಬಳಿಕ ಸ್ವಕ್ಷೇತ್ರಕ್ಕೆ ಹಿಂದಿರುಗಿ ಸಮಾಜದವರಿಗೆ ಹಜ್ ಪುಣ್ಯದ ಫಲವನ್ನು ತಿಳಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕಾಗಿದೆ’ ಎಂದರು.

ಮೆಕ್ಕಾ ಮದೀನದಲ್ಲಿ ದೇವರ ದರ್ಶನ ಪಡೆಯಲು ಯಾವ ರೀತಿ ಹೋಗಬೇಕು, ಅಲ್ಲಿನ ಪ್ರತಿಯೊಂದು ವಿಷಯ ಕುರಿತು ಯಾತ್ರಿಗಳಿಗೆ ಮಾರ್ಗದರ್ಶನ ನೀಡಲಾಯಿತು.

ಮಸೀದಿಯ ಅಧ್ಯಕ್ಷ ಹಜರತ್ ಜಾನ್ ಮಾತನಾಡಿದರು. ಉಪಾಧ್ಯಕ್ಷ ಮೊಹಮ್ಮದ್ ಅಮರ್, ಕಾರ್ಯದರ್ಶಿ ಶಾಜಮ್ ಜಂಟಿ ಕಾರ್ಯದರ್ಶಿ ಹೀನಾಯತ್ ಉಲ್ಲಾ ಖಾನ್, ಸದಸ್ಯರಾದ ಮಕಸೂದ್ ಆಲಿಖಾನ್, ಅಪ್ರೋಜ್ ಆಹಮ್ಮದ್, ಬಶೀರ್ ಆಹಮ್ಮದ್, ಮೊಹಮ್ಮದ್ ಫಜಲ್, ಜಾಗೀರ್ದಾರ್ ಬಾಬು ಸೈಯದ್, ರಿಜ್ವಾನ, ಧಾರ್ಮಿಕ ಗುರು ಗಳಾದ ಶಾಲಾಂ, ಖಯಾಮ್ ಮುದ್ದಿನ್, ಮೊಹಮ್ಮದ್ ರಫಿ ಆಝಮ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-38-676433067

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.