ಹುಣಸೂರು: ಕೊಲ್ಲಿ ರಾಷ್ಟ್ರಗಳಲ್ಲಿ ತಲೆ ದೂರಿರುವ ಯುದ್ಧದಿಂದ ದೇಶದಲ್ಲಿ ಎದುರಾಗಿರುವ ಅಡುಗೆ ಅನಿಲ ಕೊರತೆಗೆ ತಾಲ್ಲೂಕಿನ ಹೊಟೇಲ್ ಉದ್ಯಮವೂ ತತ್ತರಿಸಿದೆ.

ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಕೊರತೆಯಿಂದ ಹೊಟೇಲ್ ಉದ್ಯಮಿಗಳು ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡಿದ್ದಾರೆ. ನಗರದಲ್ಲಿ 10 ಸಸ್ಯಹಾರಿ ಹೊಟೇಲ್, 15 ಮಾಂಸಾಹಾರಿ ಹೊಟೇಲ್ಗಳಿದ್ದು, ಎಲ್ಲವು ಎರಡು ದಿನಗಳಿಂದ ಅಡುಗೆ ಅನಿಲದ ಸಮಸ್ಯೆ ಎದುರಿಸುತ್ತಿವೆ.

ನಗರದ ಕೆಲ ಹೋಟೆಲ್ಗಳಲ್ಲಿ ಸೌದೆ ಬಳಸಿ ಅಡುಗೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಬಸ್ ನಿಲ್ದಾಣದ ಹುಣಸೂರು ಟಿಫಾನೀಸ್ ಮಾಲೀಕ ಶಶಿ ಅವರು ಭಾನುವಾರದಿಂದ ಸೌದೆ ಒಲೆಯಲ್ಲಿ ಖಾದ್ಯ ಸಿದ್ದಪಡಿಸಲು ಸಜ್ಜಾಗಿದ್ದಾರೆ.

‘ಎರಡು ದಿನಗಳಿಂದ ಆನ್ಲೈನ್ನಲ್ಲಿ ಆಹಾರ ಪೂರೈಕೆಯನ್ನು ನಿಲ್ಲಿಸಿದ್ದೇವೆ. ದೋಸೆ ಮತ್ತು ಚೈನೀಸ್ ಆಹಾರ ಹೊರತುಪಡಿಸಿ ಉಳಿದಂತೆ ಎಲ್ಲ ಖಾದ್ಯ ಸಿದ್ಧಪಡಿಸಿ ಗ್ರಾಹಕರಿಗೆ ನೀಡುತ್ತಿದ್ದೇವೆ. ಬಹುತೇಕ ಹೊಟೇಲ್ನಲ್ಲಿ ವಾಟರ್ ಬಾಯ್ಲಿಂಗ್ ಸ್ಟೀಂ ಅಡುಗೆ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದ್ದು, ಅಡುಗೆ ಅನಿಲದ ಕೊರತೆ ಹಠಾತ್ತನೆ ತಟ್ಟಿಲ್ಲ. ಕಾಫಿ, ಟೀ ಬಿಸಿ ಮಾಡಲು ಇಂಡಕ್ಷನ್ ಎಲೆಕ್ಟ್ರಿಕ್ ಒಲೆ ಖರೀದಿಸಿ ಬಳಸುತ್ತಿದ್ದೇವೆ’ ಎನ್ನುತ್ತಾರೆ ಶಶಿ.

ಚೌಡಾಂಬಿಕ ಅಡುಗೆ ಅನಿಲ ವಿತರಣಾ ಕೇಂದ್ರದ ಮಾಲೀಕರಾದ ನಂದಿನಿ ಮಲ್ಲೇಶ್ ಮಾತನಾಡಿ, ‘ಕೊಲ್ಲಿ ಯುದ್ಧ ಆರಂಭಕ್ಕು ಮುನ್ನ ವಾರಕ್ಕೆ 6ರಿಂದ 7 ಲೋಡ್ ಗ್ಯಾಸ್ ಸಿಲಿಂಡರ್ ಸರಬರಾಜು ಇತ್ತು, ಇತ್ತೀಚೆಗೆ 2ರಿಂದ 3 ಲೋಡ್ ವಾರಕ್ಕೆ ಸರಬರಾಜಾಗುತ್ತಿದೆ. ಸರ್ಕಾರದ ಸೂಚನೆಯಂತೆ 25 ದಿನಕ್ಕೆ ಒಮ್ಮೆ ಸಿಲಿಂಡರ್ ಬುಕಿಂಗ್ ನಡೆದಿದೆ’ ಎಂದರು.

ಆನ್ಲೈನ್ ಮೂಲಕ ಸಿಲಿಂಡರ್ ನೋಂದಣಿ ಪ್ರಕ್ರಿಯೆ ಸದ್ಯಕ್ಕೆ ಕೇಂದ್ರದಿಂದಲೇ ಸ್ಥಗಿತಗೊಳಿಸಿದ್ದು, ನಮ್ಮಲ್ಲಿ ಈ ಹಿಂದೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಿಗೆ ಆದ್ಯತೆ ಮೇಲೆ ಮನೆಗಳಿಗೆ ವಿತರಿಸುವ ಪ್ರಕ್ರಿಯೆ ನಡೆದಿದೆ.

5 ಕೆ.ಜಿ.ಸಿಲಿಂಡರ್: ಗ್ರಾಹಕರಿಗೆ ತಾತ್ಕಾಲಿಕ ಸಮಸ್ಯೆ ಬಗೆ ಹರಿಸಲು 5 ಕೆ.ಜಿ. ಸಿಲಿಂಡರ್ ಸರಬರಾಜು ಮಾಡುವ ವ್ಯವಸ್ಥೆ ಇದ್ದು, ಅವಶ್ಯ ಇದ್ದ ಗ್ರಾಹಕರು ಸಿಲಿಂಡರ್ ಪಡೆಯಲು ₹ 2 ಸಾವಿರ ಠೇವಣಿ ಇಟ್ಟು ₹ 650 ಪಾವತಿಸಿ ಖರೀದಿಸಬಹುದಾಗಿದೆ. ಅಡುಗೆ ಅನಿಲ ಸಮಸ್ಯೆ ಪರಿಹಾರವಾದ ಬಳಿಕ ಸಿಲಿಂಡರ್ ಹಿಂದಿರುಗಿಸುವ ಗ್ರಾಹಕರಿಗೆ ಠೇವಣಿ ಹಣ ಹಿಂದಿರುಗಿಸುವ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.