ಹುಣಸೂರು: ‘ಬಾಬು ಜಗಜೀವನರಾಂ ಮತ್ತು ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಒಟ್ಟಿಗೆ ಆಚರಿಸುವ ಇಚ್ಛೆ ಇದ್ದರೂ ಸರ್ಕಾರದ ನಿಯಮಾನುಸಾರ ಆಯಾ ದಿನಗಳಂದೇ ಇಬ್ಬರು ಮಹನೀಯರ ಜಯಂತಿ ಪ್ರತ್ಯೇಕವಾಗಿ ಆಚರಿಸಲು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಬದ್ಧ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ನಗರದ ಬಾಬು ಜಗಜೀವನರಾಂ ಭವನದಲ್ಲಿ ಮಂಗಳವಾರ ನಡೆದ ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಜಯಂತಿಗಳನ್ನು ಒಟ್ಟಿಗೆ ಆಚರಿಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು ಒಳ್ಳೆಬೆಳವಣಿಗೆ’ ಎಂದರು.

ನಗರಸಭೆ ಮಾಜಿ ಸದಸ್ಯ ಸತೀಶ್ ಕುಮಾರ್ ಮಾತನಾಡಿ, ‘ಬಾಬು ಜಗಜೀವನರಾಂ ಭವನ ಕಟ್ಟಡ ಕಾಮಗಾರಿ ಆರಂಭವಾಗಿ 15 ವರ್ಷ ಕಳೆದಿದ್ದು, ಪೂರ್ಣಗೊಂಡಿಲ್ಲ’ ಎಂದರು.

ಶಾಸಕ ಉತ್ತರಿಸಿ, ‘ಭವನ ಪೂರ್ಣಗೊಳಿಸಲು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ₹ 20 ಲಕ್ಷ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸದನದಲ್ಲಿ ₹ 25 ಲಕ್ಷ ನೀಡುವ ಭರವಸೆ ನೀಡಿದ್ದಾರೆ’ ಎಂದರು.

ಕಟ್ಟೆಮಳಲವಾಡಿ ಗ್ರಾಮದ ಮುಖಂಡ ಆಂಜನೇಯ ಮಾತನಾಡಿ, ‘ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬಿ.ಆರ್.ಅಂಬೇಡ್ಕರ್ ಪುತ್ಥಳಿ ಕಾಮಗಾರಿಗೆ ಅನುದಾನ ನೀಡುವ ಭರವಸೆಯೂ ಈಡೇರಿಸಿಲ್ಲ’ ಎಂದರು.

ಸಭೆಯಲ್ಲಿ ದಲಿತ ಮುಖಂಡರಾದ ನಿಂಗರಾಜ್ ಮಲ್ಲಾಡಿ, ರಾಜು, ಕಿರಂಗೂರು ಸ್ವಾಮಿ, ಬಸವಲಿಂಗಯ್ಯ, ಬೆಳ್ತೂರು ವೆಂಕಟೇಶ್, ಡಿ.ಕುಮಾರ್, ಶಿವಣ್ಣ, ಬಲ್ಲೇನಹಳ್ಳಿ ಕೆಂಪರಾಜು, ಕೆಂಪರಾಜು, ತಹಶೀಲ್ದಾರ್ ಮಂಜುನಾಥ್, ನಗರಸಭೆ ಆಯುಕ್ತೆ ಮಾನಸ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-38-326075480

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.