ಹುಣಸೂರು: ನಗರದಲ್ಲಿರುವ ಗ್ರಾಮ ದೇವತೆ ಮುತ್ತುಮಾರಮ್ಮ ದೇವಸ್ಥಾನದ ನೂತನ ಬೆಳ್ಳಿ ರಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 20ರಂದು ಉದ್ಘಾಟಿಸುವರು ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಎಚ್. ವೈ. ಮಹದೇವ್ ಹೇಳಿದರು.

ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಅವರು ಮಾತನಾಡಿ, ₹ 3 ಕೋಟಿ ವೆಚ್ಚದಲ್ಲಿ 125 ಕೆ.ಜಿ. ಬೆಳ್ಳಿ ಬಳಸಿ 12 ಅಡಿ ಎತ್ತರ, 6 ಆಡಿ ಉದ್ದ ಮತ್ತು 5 ಅಡಿ ಅಗಲ ಇರುವ ಬೆಳ್ಳಿ ರಥ ಭಕ್ತರ ದೇಣಿಗೆ, ಉದ್ಯಮಿ ಅಶೋಕ್ ಅವರ ಕೊಡುಗೆ ಸಂಗ್ರಹಿಸಿ ನಿರ್ಮಿಸಲಾಗಿದೆ. ₹ 7 ಲಕ್ಷ ಮೌಲ್ಯದ ತೇಗದ ಮರವನ್ನು ಉದ್ಯಮಿ ಎಚ್.ಎಸ್ ಶಿವಯ್ಯ ನೀಡಿದ್ದಾರೆ ಎಂದರು.

ಅನ್ನಸಂತರ್ಪಣೆ: ಅಂದು ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜೆ, 5 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆಎಂದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಅಶೋಕ್, ಎಚ್.ಎಸ್.ಶಿವಯ್ಯ, ಯೋಗೇಶ್, ಪ್ರಕಾಶ್ ಇದ್ದರು.

ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬಾಲಸುಂದರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಘು ಕಲ್ಕುಣಿಕೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ದರ್ಶನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-38-1357948818

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.