ಹುಣಸೂರು: ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಉತ್ತಮ ಮಳೆಯಾಗಿದ್ದು, ರೈತರು ವಾಣಿಜ್ಯ ಬೆಳೆ ತಂಬಾಕು, ದ್ವಿದಳ ಧಾನ್ಯ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಮೇ 24 ಮತ್ತು 25ರಂದು ತಾಲ್ಲೂಕಿನ ಬಿಳಿಕೆರೆ ಹೋಬಳಿ ಹೊರತು ಪಡಿಸಿ ಉಳಿದಂತೆ ಎಲ್ಲಾ ಹೋಬಳಿ ಭಾಗದಲ್ಲಿ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

‘ಮೇ 24ರಂದು ತಾಲ್ಲೂಕಿನಲ್ಲಿ ಸರಾಸರಿ 2.76 ಸೆಂಟಿ ಮೀಟರ್ ಮಳೆ ಯಾಗಿದ್ದು, ಮೇ 25ರಂದು ಸರಾಸರಿ 0.86 ಸೆಂ.ಮೀ ಮಳೆಯಾಗಿದೆ. ತಂಬಾಕು ಸಂಶೊಧನಾ ಕೇಂದ್ರದ ಮಾಪನದಲ್ಲಿ 4.4 ಸೆಂ.ಮೀ. ಹಾರಂಗಿ 5.6 ಸೆಂ.ಮೀ, ಚಿಲ್ಕುಂದ 0.8 ಸೆಂ.ಮೀ 11.4 ಸೆಂ.ಮೀ ಮಳೆಯಾಗಿದೆ. ಮೇ 25ರ ರಾತ್ರಿ ಸುರಿದ ಮಳೆ ಚಿಲ್ಕುಂದ ಭಾಗದಲ್ಲಿ 1.8 ಸೆಂ.ಮೀ ಉಳಿದಂತೆ ಕೇಂದ್ರದಲ್ಲಿ ಸರಾಸರಿ 0.8 ಸೆಂ.ಮೀ ಮಳೆಯಾಗಿದೆ’ ಎಂದು ತಾಲ್ಲೂಕು ಹವಾಮಾನ ಇಲಾಖೆ ಅಧಿಕಾರಿ ಚಂದ್ರಶೇಖರ್ ಪ್ರಜಾವಾಣಿಗೆ ತಿಳಿಸಿದರು.

ವಾಡಿಕೆ ಮಳೆ : ಜನವರಿ ತಿಂಗಳಿಂದ ಮೇ ವರಗೆ 19.9 ಸೆಂ.ಮೀ ಮಳೆ ಆಗಬೇಕಿದ್ದು, ಈ ಸಾಲಿನಲ್ಲಿ 7.1 ಸೆಂ.ಮೀ ಮಳೆಯಾಗಿದೆ. ಮೇ ತಿಂಗಳಲ್ಲಿ ವಾಡಿಕೆ ಮಳೆ 10.9 ಸೆಂ.ಮೀ ಆಗಬೇಕಿದ್ದು, ಈವರಗೆ 3.99 ಸೆಂ.ಮೀ ಮಳೆಯಾಗಿದೆ. 2025ರಲ್ಲಿ 19 ಸೆಂ.ಮೀ ಮಳೆಯಾಗಿತ್ತು ಎಂದು ತಿಳಿಸಿದರು.

ಕೃಷಿ ಚಟುವಟಿಕೆ: ‘ತಾಲ್ಲೂಕಿನಲ್ಲಿ 76,428 ಹೆಕ್ಟೇರ್ ಪ್ರದೇಶ ಬೇಸಾಯಕ್ಕೆ ಯೋಗ್ಯವಿದ್ದು, ಈ ಪೈಕಿ ಎರಡು ದಿನದ ಮಳೆಗೆ 19,110 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದು ತಂಬಾಕು ಮತ್ತು ದ್ವಿದಳ ದಾನ್ಯಗಳ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅನಿಲ್ ತಿಳಿಸಿದ್ದಾರೆ.

‘ಎರಡು ದಿನದಿಂದ ಬೀಳುತ್ತಿರುವ ಮಳೆಗೆ ರೈತರು ಮುಸುಕಿನ ಜೋಳ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದು, ಈಗಾಗಲೇ 19,011 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ತಾಲ್ಲೂಕಿನಲ್ಲಿ ತಂಬಾಕು ನಂತರದ ವಾಣಿಜ್ಯ ಬೆಳೆ ಮುಸುಕಿನ ಜೋಳ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಿದೆ’ ಎಂದರು.

ದ್ವಿದಳ ಧಾನ್ಯ: ಕ್ಷೇತ್ರದಲ್ಲಿ ಹಲಸಂದೆ, ಅವರೆ, ಹೆಸರು, ಹುರುಳಿ ಮತ್ತು ಉದ್ದು ಹೆಚ್ಚಿನದಾಗಿ ಬೆಳೆಯಲಿದ್ದು, ಈ ಸಾಲಿನಲ್ಲಿ 4,003 ಹೆಕ್ಟೇರ್ನಲ್ಲಿ ಹಲಸಂದೆ, 5,770 ಹೆಕ್ಟೇರ್ನಲ್ಲಿ ಅವರೆ, 3,000 ಹೆಕ್ಟೇರ್ನಲ್ಲಿ ಹುರುಳಿ, 150 ಹೆಕ್ಟೇರ್ನಲ್ಲಿ ತೊಗರಿ, ಬಿತ್ತನೆಯಾಗಿದ್ದು, ಉಳಿದಂತೆ ಭತ್ತ,ಕಬ್ಬು, ಹತ್ತಿ ಎಂದಿನಂತೆ ನಡೆದಿದೆ’ ಎಂದು ಮಾಹಿತಿ ನೀಡಿದರು.

‘ಕ್ಷೇತ್ರದಲ್ಲಿ ರಸಗೊಬ್ಬರ ಕೊರತೆ ಇಲ್ಲ, ಎಲ್ಲಾ ಅಂಗಡಿಗಳಲ್ಲಿ ರಸಗೊಬ್ಬರ ಲಭ್ಯವಿದ್ದು, ಇಲಾಖೆ ನಿಯಮಾನುಸಾರ ಗೊಬ್ಬರ ಮಾರಾಟ ಮಾಡುವಂತೆ ಈಗಾಗಲೇ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತಂಬಾಕು ಮಂಡಳಿ ವತಿಯಿಂದ ವಿತರಿಸುವ ರಸಗೊಬ್ಬರದ ಗುಣಮಟ್ಟದ ಪರೀಕ್ಷೆಗೆ ಈಗಾಗಲೇ ಮಾದರಿ ಸಂಗ್ರಹಿಸಿ ಸಂಶೋಧನಾಲಯಕ್ಕೆ ಕಳುಹಿಸಿದ್ದು ವರದಿ ಬಂದ ಬಳಿಕ ತಂಬಾಕು ಬೆಳೆಗಾರರಿಗೆ ಅವರ ನಿಯಮದಂತೆ ಗೊಬ್ಬರ ವಿತರಿಸಲಿದ್ದಾರೆ’ ಎಂದು ಹೇಳಿದರು.

‘ನ್ಯಾನೊ ಯೂರಿಯಾ ಬಳಸುವಂತೆ ಕಳೆದ ಎರಡು ವರ್ಷದಿಂದ ರೈತರಲ್ಲಿ ಜಾಗೃತಿ ಕಾರ್ಯ ನಡೆದಿದ್ದು, ಇತ್ತೀಚೆಗೆ ಕೆಲವು ರೈತರು ನ್ಯಾನೊ ಯೂರಿಯಾ ಬಳಸುತ್ತಿತ್ತು, ಭವಿಷ್ಯದಲ್ಲಿ ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ’ ಎಂದರು. .

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-38-1968225103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.