ಹುಣಸೂರು: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಸ್ವಯಂ ಉದ್ಯೋಗ ಹೊಂದಿ ಆರ್ಥಿಕ ಶಕ್ತಿ ವೃದ್ಧಿಸಿಕೊಳ್ಳಲು ಕೇಂದ್ರ ಸರ್ಕಾರ ಕಳೆದ ಸಾಲಿನ ಆಯವ್ಯಯದಲ್ಲಿ ಅನುಮೋದನೆ ಮತ್ತು ಆರ್ಥಿಕ ಶಕ್ತಿ ನೀಡಿ ಮಹಿಳೆಯರ ಕೈ ಬಲಪಡಿಸಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ನಗರದ ಹೊರ ವಲಯ ಬೀಜಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಾಳಗೆರೆ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಅಕ್ಕ ಕೆಫೆ ಹೊಟೇಲ್ ಉದ್ದಿಮೆಗೆ ಚಾಲನೆ ನೀಡಿ ಮಾತನಾಡಿದರು. ಮಹಿಳಾ ಸ್ವಸಹಾಯ ಸಂಘಗಳ ಸಂಜೀವಿನಿ ಒಕ್ಕೂಟಗಳ ಸದಸ್ಯರಿಗೆ ಹೊಸ ಉದ್ದಿಮೆಯಲ್ಲಿ ತೊಡಗಿ ಸ್ವಾವಲಂಬಿಗಳಾಗಲು ಈ ಯೋಜನೆ ಜಾರಿಯಲ್ಲಿದೆಎಂದರು.

ಸಾಫ್ಟ್ ವೇರ್: ಹೊಟೇಲ್ ಉದ್ದಿಮೆ ನಿರ್ವಹಣೆಗೆ ಸಾಫ್ಟ್ವೇರ್ ಸಿದ್ಧಪಡಿಸಿದ್ದು, ಅಕ್ಕ ಕೆಫೆ ತಂಡದವರಿಗೆ ಸಾಫ್ಟ್ ವೇರ್ ಉಚಿತವಾಗಿ ನೀಡಿ ತರಬೇತಿ ಕೊಡಿಸಲು ಬದ್ಧ ಎಂದರು.

ಸಂಜೀವಿನಿ ತಾಲ್ಲೂಕು ಒಕ್ಕೂಟದ ಸಂಯೋಜನಾಧಿಕಾರಿ ಮಂಜುಳ ನರಗುಂದ ಮಾತನಾಡಿ, ‘ಜಿಲ್ಲೆಯಲ್ಲಿ ಹುಣಸೂರು ಸೇರಿದಂತೆ 3 ಅಕ್ಕ ಕೆಫೆ ಮಂಜೂರಾಗಿದ್ದು, ಹೊಟೇಲ್ ಉದ್ದಿಮೆಯನ್ನು ಮುನ್ನಡೆಸಲು ನಿಲುವಾಗಿಲು ಗ್ರಾಮದ ಕಾಳಿಕಾಂಬ ಮಹಿಳಾ ಸ್ವಸಹಾಯ ಸಂಘದ 7 ಸದಸ್ಯರು ಮುಂದಾಗಿದ್ದು, ಈಗಾಗಲೇ ತರಬೇತಿ ನೀಡಲಾಗಿದೆ ಎಂದರು. ಬಿಳಿಕೆರೆ ಗ್ರಾಮದ ಸಂಜೀವಿನಿ ಒಕ್ಕೂಟದ ಮಹಿಳೆಯರು ರಾಗಿಯ ವಿವಿಧ ಆಹಾರ ಮಾರಾಟ ಮಾಡಿ ವಾರ್ಷಿಕ ₹ 25 ಲಕ್ಷ ವಹಿವಾಟು ನಡೆಸಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಭೀಮಪ್ಪ ಕೆ.ಲಾಳಿ, ಆಡಳಿತಾಧಿಕಾರಿ ಸವಿತಾ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿದ್ದಗಂಗಮ್ಮ, ಗ್ಯಾರಂಟಿ ತಾಲ್ಲೂಕು ಸಮಿತಿ ಅಧ್ಯಕ್ಷ ರಾಘು ಕಲ್ಕುಣಿಕೆ, ಒಕ್ಕೂಟದ ಅಧ್ಯಕ್ಷೆ ಯಶೋಧಮ್ಮ, ತಾಲ್ಲೂಕು ಪಂಚಾಯಿತಿ ಇಒ ಹೊಂಗಯ್ಯ, ಪಿಡಿಒ ಮಹದೇವಸ್ವಾಮಿ, ಬವರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-38-1415572097

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.