ಹುಣಸೂರು: ಇಲ್ಲಿನ ನಗರಸಭೆಯಿಂದ ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಅಡಿಯಲ್ಲಿ ಆಯೋಜಿಸಿದ್ದ ‘ಸ್ವಚ್ಛತೆಗಾಗಿ ಓಟ’ ಕಾರ್ಯಕ್ರಮದಲ್ಲಿ ಮೈಸೂರು, ಕೊಡಗು ಜಿಲ್ಲೆಯಿಂದ ಆಸಕ್ತ ಹವ್ಯಾಸಿ ಓಟಗಾರರು ಭಾಗವಹಿಸಿ ಗಮನ ಸೆಳೆದರು.

ನಗರದ ಸಂವಿಧಾನ ವೃತ್ತದಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಮತ್ತು ಡಿವೈಎಸ್ಪಿ ರವಿ ಅವರು ಚಾಲನೆ ನೀಡಿದರು. ನಿಗದಿಗೊಳಿಸಿದ ಮಾರ್ಗದಲ್ಲಿ ತೆರಳಿದ ಓಟಗಾರರು ಸಂವಿಧಾನ ವೃತ್ತದಲ್ಲಿ ಓಟ ಪೂರ್ಣಗೊಳಿಸಿದರು.

ಉಪವಿಭಾಗಾಧಿಕಾರಿ ಕಾವ್ಯಾರಾಣಿ ಮಾತನಾಡಿ, ‘ಸ್ವಚ್ಛತೆ ಕಾದುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಹೆಗಲಿಗಿದ್ದು, ನಾವು ನಮ್ಮ ಪರಿಸರವನ್ನು ಶುಚಿತ್ವದಿಂದ ಕಾದುಕೊಂಡಲ್ಲಿ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ’ ಎಂದರು.

‘ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡುವ ಮನಸ್ಥಿತಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ತಾತ್ಸಾರದ ತ್ಯಾಜ್ಯ ನಿರ್ವಹಣೆ ನಗರಸಭೆಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ’ ಎಂದರು.

ಡಿವೈಎಸ್ಪಿ ರವಿ ಮಾತನಾಡಿ, ‘ಸ್ವಚ್ಛತೆ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಪೌರಕಾರ್ಮಿಕರಿಗೆ ನಾಗರಿಕರೂ ಸಹಾಯ ಹಸ್ತ ನೀಡಬೇಕು. ತ್ಯಾಜ್ಯ ಸಂಗ್ರಹದ ವಾಹನ ಪ್ರತಿ ಮನೆಗೆ ಬರುತ್ತಿದ್ದು ಹಸಿ ಮತ್ತು ಒಣ ಕಸ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಿ ನಗರ ಶುಚಿತ್ವ ಕಾದುಕೊಳ್ಳಲು ಕೈ ಜೋಡಿಸಿ’ ಎಂದರು.

ಬಹುಮಾನ: ಸ್ವಚ್ಛತೆಗಾಗಿ ಓಟ ಕಾರ್ಯಕ್ರಮದಲ್ಲಿ ಪುರುಷರ ವಿಭಾಗದಲ್ಲಿ ಶ್ರೀಧರ್, ನಿತಿನ್, ಪ್ರಸನ್ನಕುಮಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ರಾಣಿ, ಅನಿತಾ ಮತ್ತು ಅಂಕಿತಾ ಬಾಯಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದರು. ನಗರಸಭೆಯಿಂದ ಕ್ರಮವಾಗಿ ₹ 5 ಸಾವಿರ, ₹3 ಸಾವಿರ ಮತ್ತು ₹2 ಸಾವಿರ ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಮಾನಸ, ಪರಿಸರ ಎಂಜಿನಿಯರ್ ಸೌಮ್ಯ, ಸರೋಜಿನಿ ವಿಕ್ರಂ, ಶ್ರೀನಾಥ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-38-753610532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.