ಹುಣಸೂರು: ‘ಬೆಳೆಗಾರರಿಗೆ ತಂಬಾಕು ಮಂಡಳಿಯಿಂದ ರಿಯಾಯ್ತಿ ದರದಲ್ಲಿ ಪೂರೈಸುವ ರಸಗೊಬ್ಬರದ ಮಾದರಿಯನ್ನು ಕೃಷಿ ಇಲಾಖೆ ಸಂಗ್ರಹಿಸಿ ರಸಗೊಬ್ಬರ ನಿಯಂತ್ರಣಾ ಪ್ರಯೋಗಾಲಯಕ್ಕೆ ರವಾನಿಸಿದೆ ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ತಿಳಿಸಿದರು.

ಕಾಫ್ ಸಮಿತಿಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ರಸಗೊಬ್ಬರದ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳುವ ಉದ್ದೇಶದಿಂದ ತಂಬಾಕು ಹರಾಜು ಮಾರುಕಟ್ಟೆ ಗೋದಾಮಿನಲ್ಲಿ ಸಂಗ್ರಹಿಸಿರುವ ರಸಗೊಬ್ಬರದ ಮಾದರಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ರವಾನಿಸಿ ವರದಿ ನಿರೀಕ್ಷೆಯಲ್ಲಿದೆ ಎಂದರು.

ಮಂಡಳಿ ಈ ಸಾಲಿನ ಬೇಸಾಯಕ್ಕೆ 3400 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ನೀಡಿದ್ದು, 13 ಕಂಪೆನಿಗಳಿಂದ ಪ್ರಸ್ತುತ 1300 ಮೆಟ್ರಿಕ್ ಟನ್ ಗೊಬ್ಬರ ಸರಬರಾಜು ಆಗಿದೆ. ತಂಬಾಕಿಗೆ ಅಗತ್ಯ ಬೇಕಿರುವ ಎಸ್.ಒ.ಪಿ, ಡಿಎಪಿ, ಸಿಎನ್ ಮತ್ತು ಅಮೋನಿಯಂ ಸಲ್ಫೇಟ್ ಲಭ್ಯವಿದ್ದು, ರೈತರಿಗೆ ವಿತರಿಸುವ ಮುನ್ನ ಗುಣಮಟ್ಟ ಪರೀಕ್ಷೆ ಅಗತ್ಯವಿದ್ದು, 4 ದಿನಗಳಲ್ಲಿ ವರದಿ ಕೈ ಸೇರಲಿದೆ. ಬಳಕಗೆ ಯೋಗ್ಯ ಎಂಬ ವರದಿ ಬಂದಲ್ಲಿ ರೈತರಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಕಾಫ್ ಸಮಿತಿ ಸದಸ್ಯ ನಿಲುವಾಗಿಲು ಪ್ರಭಾಕರ್, ಕುಪ್ಪೆ ನಿಂಗೇಗೌಡ, ಕೊತ್ತೇಗಾಲ ಕರುಣಾಕರ್, ರಾಜಶೇಖರ್, ಮಂಡಳಿ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-38-1461208207

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.