ಹುಣಸೂರು: ದೇಶದಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯತೆ ತೊಲಗಿಸುವ ಸಲುವಾಗಿ ದಶಕಗಳ ಹಿಂದೆ ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಅವರು ಹೋರಾಟ ನಡೆಸಿ ಸಾಮಾಜಿಕ ಜಾಗೃತಿ ಮೂಡಿಸಿದರಾದರೂ ಇಂದಿಗೂ ಅಸ್ಪೃಶ್ಯತೆ ಜೀವಂತ ಇರುವುದು ವಿಪರ್ಯಾಸ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ 119 ನೇ ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವತಂತ್ರ್ಯ ಭಾರತದಲ್ಲಿ ಜಾತಿಯತೆ, ಅಸ್ಪೃಶ್ಯತೆಯನ್ನು ಬುಡಸಮೇತ ಕಿತ್ತು ಸಮಸಮಾಜ ನಿರ್ಮಿಸುವ ಕನಸು ಕಂಡು ತಮ್ಮ ಬದುಕನ್ನೇ ಮೀಸಲಿಟ್ಟ ಈ ಇಬ್ಬರು ಮಹನೀಯರ ಕನಸು ಇಂದಿಗೂ ನನಸಾಗದೆ ಈ ಎರಡು ವಿಷಯಕ್ಕೆ ಕೋಲಾಹನ ನಡೆದಿದೆ. ಭಾರತೀಯರು ಸ್ವಾತಂತ್ರ್ಯ ಪಡೆದ ಬಳಿಕ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಪಥದಲ್ಲಿ ವಿಶ್ವವೇ ಹಿಂತಿರುಗಿ ನೋಡುವಂತೆ ಬೆರಗುಗೊಳಿಸಿದ್ದರೂ ಜಾತಿಯತೆ, ಅಸಮಾನತೆ ಮತ್ತು ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ಹೋಗಲಾಡಿಸಲು ಸಾಧ್ಯವಿಲ್ಲ. ಸುಶಿಕ್ಷಿತ ನಾಗರಿಕರು ಈ ದಿಕ್ಕಿನಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು.

ಬಾಬು ಜಗಜೀವನರಾಂ ತಮ್ಮ ಬಾಲ್ಯದಲ್ಲಿ ಶಿಕ್ಷಣ ಪಡೆಯುವುದೇ ಒಂದು ಸವಾಲಾಗಿತ್ತು, ಆ ಸಮಯದಲ್ಲಿ ಉನ್ನತ ಶಿಕ್ಷಣ ಪಡೆದು ತಮ್ಮ ಸಾಧನೆಗೆ ಶಿಕ್ಷಣವನ್ನು ಮೆಟ್ಟಿಲನ್ನಾಗಿಸಿಕೊಂಡು ಭಾರತದಲ್ಲಿ ಹಲವು ಕ್ರಾಂತಿಕಾರಿಕ ಸಾಧನೆಗಳನ್ನು ಕೈಗೊಂಡರು. ಬಾಬು ಅವರ ರಾಜಕೀಯ ಜೀವನದಲ್ಲಿ ಅತಿ ಹೆಚ್ಚು ಅವಧಿ ಕೇಂದ್ರದಲ್ಲಿ ವಿವಿಧ ಸಚಿವ ಸ್ಥಾನದಲ್ಲಿ ಸೇವೆ ಸಲ್ಲಿಸಿದ ದಾಖಲೆ ಸ್ಥಾಪಿಸಿದ ಹಿಂದುಳಿದ ನಾಯಕ. ಇವರ ಕಾಲಾವಧಿಯಲ್ಲಿ ಪ್ರಧಾನ ಮಂತ್ರಿ ಆಗುವ ಅರ್ಹತೆ ಇದ್ದರೂ ಆಂತರಿಕ ರಾಜಕೀಯದಿಂದ ಸ್ಥಾನಕ್ಕೇರುವಲ್ಲಿ ವಿಫಲರಾಗಿದ್ದು ದುರಂತ ಎಂದರು.

ಪ್ರಧಾನ ಭಾಷಣ ಮಾಡಿದ ಜೆ.ಮಹದೇವ್, ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಇಬ್ಬರು ನಾಯಕರ ಗುರಿ ಒಂದೇ ಆಗಿತ್ತು. ಬಾಬೂಜಿ ಅವರ 78 ವರ್ಷಗಳ ರಾಜಕೀಯ ಜೀವನದಲ್ಲಿ ದಲಿತ ಸಮಾಜದ ಯಶಸ್ವಿಗಾಗಿ ದುಡಿದ ಅಪ್ರತಿಮ ನಾಯಕ ಎಂಬ ಹೆಗ್ಗಳಿಕೆ ಹೊಂದಿದ್ದರು. ಇಂದಿರಾ ಗಾಂಧಿ ಅವರ ಅವಧಿಯಲ್ಲಿ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಅವಧಿಯಲ್ಲಿ ಸಿಡಿದೆದ್ದು ಹೊರ ಬಂದ ಬಾಬೂಜಿ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸೋಲಿಸಿ ಸಂಸತ್ ಪ್ರವೇಶಿಸಿ, ಅಧಿಕಾರದ ಗದ್ದುಗೆ ಹಿಡಿದು ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದು ಇತಿಹಾಸ ಎಂದರು.

ತಹಶೀಲ್ದಾರ್ ಮಂಜುನಾಥ್, ಆದಿಜಾಂಬವ ಸಮುದಾಯದ ಮುಖಂಡ ಡಿ.ಕುಮಾರ್ ಮಾತನಾಡಿದರು. ಶಿವಣ್ಣ, ನಿಂಗರಾಜ್ ಮಲ್ಲಾಡಿ, ಪರಶುರಾಮ್, ನೇರಳಕುಪ್ಪೆಮಹದೇವ್, ಹೊಸೂರು ಕುಮಾರ್. ಆಂಜನೇಯ ಅಣ್ಣಯ್ಯ ನಾಯಕ, ಕಿರಂಗೂರು ಸ್ವಾಮಿ, ಸತೀಶ್ ಕುಮಾರ್ ಸೇರಿ ತಾಲ್ಲೂಕು ಅಧಿಕಾರಿಗಳಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-38-519731112

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.