ಮೈಸೂರು: ‘ಇಲ್ಲಿನ ಕುರುಬಾರಹಳ್ಳಿ ಸರ್ವೆ ಸಂಖ್ಯೆ 4ರಲ್ಲಿನ 24 ಎಕರೆ ಜಾಗವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ. ಸರ್ಕಾರಿ ಜಾಗವನ್ನು ಅಕ್ರಮವಾಗಿ ಮತ್ತೊಬ್ಬರಿಗೆ ಮಾರಾಟ ಒಪ್ಪಂದ ಮಾಡಿಕೊಟ್ಟವರು ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಒತ್ತಾಯಿಸಿದರು.

‘ಸರ್ಕಾರದ ಹೆಸರಿನಲ್ಲಿರುವ ಈ ಜಾಗದ ಪ್ರಸ್ತುತ ಮಾರುಕಟ್ಟೆ ಮೌಲ್ಯವು ₹900 ಕೋಟಿ ಆಗುತ್ತದೆ. ಇದನ್ನು ಪ್ರಶಾಂತ ಉಚ್ಚಿಲ್ ಮತ್ತು ಅವರ ಕುಟುಂಬದವರು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅಕ್ರಮವಾಗಿ ಮಾರಲು ಹೊರಟಿದ್ದರು. ಮಾರ್ಚ್ 5ರಂದು ನಾನು ಸುದ್ದಿಗೋಷ್ಠಿ ಮೂಲಕ ಈ ವಿಚಾರವನ್ನು ಬಹಿರಂಗಗೊಳಿಸುತ್ತಲೇ 6ರಂದೇ ಪ್ರಶಾಂತ್ ಉಪನೋಂದಣಿ ಕಚೇರಿಯಲ್ಲಿ ತರಾತುರಿಯಲ್ಲಿ ಈ ಮಾರಾಟ ಒಪ್ಪಂದವನ್ನು ರದ್ದುಗೊಳಿಸಿಕೊಂಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಒಪ್ಪಂದ ಕರಾರು ರದ್ದು ಪ್ರಕರಣವೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಟ್ಟು ₹40 ಕೋಟಿಗೆ ಬೆಂಗಳೂರಿನ ಇಬ್ಬರು ಉದ್ಯಮಿಗಳು ಈ ಜಮೀನನ್ನು ಖರೀದಿಸಲು ಹೊರಟಿದ್ದರು. ಅದಕ್ಕಾಗಿ ಪ್ರಶಾಂತ್ ಮತ್ತು ಇತರ ಹತ್ತು ಜನರಿಗೆ ಒಟ್ಟು ₹4.75 ಕೋಟಿ ಮೌಲ್ಯದ ಚೆಕ್ ಹಾಗೂ ಡಿ.ಡಿ. ನೀಡಿದ್ದರು. ಕರಾರು ಪತ್ರದಲ್ಲಿ ಎಲ್ಲರೂ ಸಹಿ ಹಾಕಿದ್ದು, ರದ್ದು ಪತ್ರದಲ್ಲಿ ಮಾರಾಟಗಾರರ ಪರವಾಗಿ ಪ್ರಶಾಂತ್ ಹಾಗೂ ಖರೀದಿದಾರರ ಪರವಾಗಿ ಉದ್ಯಮಿ ಒಬ್ಬರೇ ಸಹಿ ಮಾಡಿದ್ದಾರೆ. ಉದ್ಯಮಿಯು ಕೊಟ್ಟಿದ್ದ ₹4.75 ಕೋಟಿಯನ್ನು ಯಾವ ರೂಪದಲ್ಲಿ ಹಿಂಪಡೆಯಲಾಗಿದೆ ಎಂಬ ಮಾಹಿತಿ ಇಲ್ಲ. ಇದು ಅವರ ತಂತ್ರ ಇನ್ನೊಂದು ಭಾಗವೂ ಆಗಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.

‘ಆರ್ಟಿಸಿಯಲ್ಲಿ ಋಣಭಾರ ಕಲಂನಲ್ಲಿ ಸರ್ಕಾರಿ ಆಸ್ತಿ ಎಂದು ಸ್ಟಷ್ಟವಾಗಿ ನಮೂದಾಗಿದ್ದರೂ ಅಧಿಕಾರಿಗಳು ಹೇಗೆ ಮಾರಾಟಕ್ಕೆ ಅವಕಾಶ ನೀಡಲು ಹೊರಟಿದ್ದರು ಎಂಬುದು ಗೊತ್ತಿಲ್ಲ. ಇದರಲ್ಲಿ ಉಪನೋಂದಣಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಸದ್ಯ ನಡೆದಿರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ’ ಎಂದರು.

ಮೂರನೇ ಪ್ರಕರಣ:

‘ಸರ್ಕಾರಿ ಆಸ್ತಿ ಅತಿಕ್ರಮಣ ಕುರಿತು ನಾನು ಗಮನಕ್ಕೆ ತರುತ್ತಿರುವ ಮೂರನೇ ಪ್ರಕರಣ ಇದಾಗಿದೆ. ಹಿಂದಿನ ಎರಡೂ ಪ್ರಕರಣದಲ್ಲೂ ಅಧಿಕಾರಿಗಳು ತಡವಾಗಿ ಎಚ್ಚೆತ್ತು ಒತ್ತುವರಿ ತೆರವುಗೊಳಿಸಿದ್ದರು. ಈ ಆಸ್ತಿಯ ದಾಖಲೆಯನ್ನು ಸಂಪೂರ್ಣ ಸರ್ಕಾರದ ಹೆಸರಿಗೆ ಬದಲಿಸಿಕೊಂಡು ವಶಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಮುಡಾ ಪ್ರಕರಣ ಬೆಳಕಿಗೆ ಬರುತ್ತಲೇ ಸಿದ್ದರಾಮಯ್ಯ ಪತ್ನಿ 14 ನಿವೇಶನಗಳನ್ನು ಹಿಂತಿರುಗಿಸಿದ್ದರು. ನಂತರದಲ್ಲಿ ಉಳಿದ ಪ್ರಕರಣಗಳಲ್ಲಿಯೂ ಇದೇ ರೀತಿ ಅಕ್ರಮ ಬೆಳಕಿಗೆ ಬಂದಾಗ ಮಾತ್ರ ಆರೋಪಿಗಳು ಜಮೀನು ವಾಪಸ್ ನೀಡುತ್ತಿದ್ದಾರೆ. ಅಧಿಕಾರಿಗಳು ಮೊದಲೇ ಅಕ್ರಮವನ್ನು ತಡೆಯುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ ತನಿಖೆ ಮಾಡಿಸಬೇಕು’ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ‘ಶಾಸಕ ಶ್ರೀವತ್ಸ ಅವರ ಶ್ರಮದಿಂದಾಗಿ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮುಖ್ಯಮಂತ್ರಿಗಳು ಇನ್ನಾದರೂ ಎಚ್ಚೆತ್ತು ತಮ್ಮ ತವರು ಜಿಲ್ಲೆಯಲ್ಲಿನ ಭೂ ಅಕ್ರಮಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಶಿವಕುಮಾರ್, ವಕ್ತಾರ ಮೋಹನ್, ಮಂಡಲ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ನಗರ ಪ್ರಧಾನಕಾರ್ಯದರ್ಶಿ ಸೋಮಸುಂದರ್, ಉಪಾಧ್ಯಕ್ಷ ವಿಶ್ವೇಶ್ವರಯ್ಯ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಬಿ.ಎಂ. ಸಂತೋಷ್ಕುಮಾರ್, ಬಿಲ್ಲಯ್ಯ, ಗೋಕುಲ್ ಗೋವರ್ಧನ್, ಜೈ ಶಂಕರ್, ಜಯರಾಮ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.