ಜಿಡಿಪಿ ಬೆಳವಣಿಗೆಗೆ ರಾಜ್ಯಗಳ ಕಾಣಿಕೆ ಬಲಗೊಳ್ಳಬೇಕಿದೆ | ಶೈಕ್ಷಣಿಕ ವ್ಯವಸ್ಥೆ ಎಲ್ಲರ ಒಳಗೊಳ್ಳುವಿಕೆ ಅಗತ್ಯ

ಮೈಸೂರು: ‘ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತವು ರೂಪುಗೊಳ್ಳಲು ಯುವ ಸಮುದಾಯವು ಶ್ರಮಿಸಬೇಕು. ಅದಕ್ಕಾಗಿ ಶೈಕ್ಷಣಿಕ ಜ್ಞಾನ, ಕೌಶಲ ಹಾಗೂ ಸಂವಹನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು’ ಎಂದು ಶೈಕ್ಷಣಿಕ ಸಂವಹನ ಒಕ್ಕೂಟ (ಸಿಇಸಿ) ನಿರ್ದೇಶಕ ಪ್ರೊ.ಪರೀಕ್ಷತ್ ಸಿಂಗ್ ಮನ್ಹಾಸ್ ಪ್ರತಿಪಾದಿಸಿದರು.

ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರವು (ಇಎಂಆರ್ಸಿ) ‘ಭವಿಷ್ಯಕ್ಕಾಗಿ ಶಿಕ್ಷಣದ ಪರಿವರ್ತನೆ: ಕಲಿಕೆಯಲ್ಲಿ ಒಳಗೊಳ್ಳುವಿಕೆ, ಬುದ್ಧಿವಂತಿಕೆ ಮತ್ತು ತಲ್ಲೀನತೆ’ ಕುರಿತು ಆಯೋಜಿಸಿದ್ದ 2 ದಿನಗಳ ರಾಷ್ಟ್ರೀಯ ವಿಚಾರಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

‘ಈಗಾಗಲೇ ಮೂರನೇ ಅತಿದೊಡ್ಡ ಆರ್ಥಿಕತೆ ಆಗುವತ್ತ ದೇಶ ಹೆಜ್ಜೆ ಇಟ್ಟಿದೆ. ಪ್ರತಿಯೊಬ್ಬ ನಾಗರಿಕನ ಪರಿಶ್ರಮದಿಂದ ಇದು ಸಾಧ್ಯವಾಗಲಿದೆ. ಒಟ್ಟು ದೇಶಿಯ ಉತ್ಪನ್ನದಲ್ಲಿ (ಜಿಡಿಪಿ) ರಾಜ್ಯಗಳು ಉತ್ತಮ ಕಾಣಿಕೆ ನೀಡುತ್ತಿವೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳು ತಲಾ ₹ 90 ಲಕ್ಷ ಕೋಟಿ ಆರ್ಥಿಕತೆ ನಿರ್ಮಾಣದ ಗುರಿ ಹೊಂದಿವೆ’ ಎಂದರು.

‘ಅಮೆರಿಕದ ಆರ್ಥಿಕತೆಯು ಕುಸಿಯುವ ಭೀತಿಯನ್ನು ಹೊಂದಿದೆ. ಈ ವೇಳೆ ನಮ್ಮ ದೇಶದ ಶೈಕ್ಷಣಿಕ ವ್ಯವಸ್ಥೆಯು ಬಲಗೊಳ್ಳುತ್ತಿದೆ. ಎಲ್ಲರನ್ನೂ ಒಳಗೊಳ್ಳುವ, ಬುದ್ಧಿವಂತಿಕೆಯನ್ನು ಹೆಚ್ಚಿಸುವ ಒಪ್ಪಂದಗಳು ನಡೆದಿವೆ. ಈಚೆಗೆ ಐರೋಪ್ಯ ಒಕ್ಕೂಟದೊಂದಿಗೆ ಭಾರತವು ವಾಣಿಜ್ಯ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ವಿನಿಮಯ ಸಾಧ್ಯವಾಗಲಿದೆ’ ಎಂದು ಹೇಳಿದರು.

‘2047ರ ವಿಕಸಿತ ಭಾರತ ನಿರ್ಮಾಣ ಆಗಬೇಕೆಂದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನ್ನು ಅನುಷ್ಠಾನಗೊಳಿಸಲಾಗಿದ್ದು, ಆಡಳಿತ ಭಾಷೆಗಳ ಜೊತೆಗೆ ಪ್ರಾದೇಶಿಕ ಭಾಷೆಗಳ ಬಲವರ್ಧನೆಗೆ ಪೂರಕವಾಗಿದೆ’ ಎಂದರು.

ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ವಿಶ್ರಾಂತ ಕುಲಪತಿ ಪ್ರೊ.ಎ.ಬಾಲಸುಬ್ರಮಣಿಯನ್, ಇಎಂಆರ್ಸಿ ನಿರ್ದೇಶಕ ಪ್ರೊ.ಘಂಟಾ ರವಿಕುಮಾರ್, ಸಿಇಸಿ ಸಂಶೋಧಕ ಪ್ರೊ.ಶತುರ್ಧ, ಹಣಕಾಸು ಅಧಿಕಾರಿ ಪ್ರೊ.ಎಸ್.ಜೆ.ಮಂಜುನಾಥ್ ಪಾಲ್ಗೊಂಡಿದ್ದರು.

‘ಹೊಸ ತಂತ್ರಜ್ಞಾನ ಅರಿವಿರಲಿ’

‘ಹೊಸ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಇರಬೇಕು. 80ರ ದಶಕದಲ್ಲಿ ಕಂಪ್ಯೂಟರ್ ಎಲ್ಲ ಉದ್ಯೋಗ ಕಿತ್ತುಕೊಳ್ಳಲಿದೆ ಎಂದಿದ್ದರು. ಇದೀಗ ಕೈಗಾರಿಕೆ ಸೇವಾ ವಲಯವು ಮಾಹಿತಿ ತಂತ್ರಜ್ಞಾನ ಕೇಂದ್ರಿತವಾಗಿದೆ’ ಎಂದು ಪ್ರೊ.ಪರೀಕ್ಷತ್ ಸಿಂಗ್ ಮನ್ಹಾಸ್ ಹೇಳಿದರು. ‘ಕೃತಕ ಬುದ್ಧಿಮತ್ತೆ ಚಾಟ್ ಬಾಟ್ ಸೇರಿದಂತೆ ಹೊಸ ತಂತ್ರಜ್ಞಾನಗಳು ಉದ್ಯೋಗ ಸೃಷ್ಟಿಸುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಅವಕಾಶ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.