ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು| ಕಾರ್ಖಾನೆ ಸ್ಥಗಿತ: ಪರಿಹಾರಕ್ಕೆ ಆದೇಶ

Published 26 ಜುಲೈ 2023, 7:58 IST
Last Updated 26 ಜುಲೈ 2023, 7:58 IST
ಅಕ್ಷರ ಗಾತ್ರ

ಮೈಸೂರು: ‘ಕಾರ್ಖಾನೆ ಬಂದ್‌ ಮಾಡಿ 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದ ಬೆಳವಾಡಿ ಕೈಗಾರಿಕಾ ಪ್ರದೇಶದ ಎಂ.ಕೆ.ಫ್ಯಾಶನ್‌ ವರ್ಲ್ಡ್‌ ಕಂಪನಿಯು ಇದಕ್ಕೆ ಪರಿಹಾರವಾಗಿ ಕಾರ್ಮಿಕರಿಗೆ ತಲಾ ₹2.5 ಲಕ್ಷ ಪರಿಹಾರ ನೀಡುವಂತೆ ಮೈಸೂರು ಕಾರ್ಮಿಕ ನ್ಯಾಯಾಲಯ ಆದೇಶಿಸಿದೆ’ ಎಂದು ಜಿಲ್ಲಾ ಗಾರ್ಮೆಂಟ್ಸ್‌ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಮೋದ್‌ ಚಿಕ್ಕಮಣ್ಣೂರು ತಿಳಿಸಿದರು.

‘ಕಂಪನಿಯು 2018ರಲ್ಲಿ ಕಾರ್ಮಿಕ ಇಲಾಖೆಯ ಅನುಮತಿಯಿಲ್ಲದೇ, ಕಾರ್ಮಿಕರಿಗೂ ತಿಳಿಸದೆ ಏಕಾಏಕಿ ಉತ್ಪಾದನೆ ಸ್ಥಗಿತಗೊಳಿಸಿ ಲೇ–ಆಫ್‌ ಮಾಡಿತ್ತು. ಈ ಸಂಬಂಧ ಕಾನೂನು ಹೋರಾಟ ನಡೆಸಿದ್ದ ಎಂ.ಕೆ.ಫ್ಯಾಶನ್‌ ವರ್ಲ್ಡ್‌ ಕಾರ್ಮಿಕರ ಸಂಘಕ್ಕೆ ಜಯ ದೊರೆತಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮೇ 24ರಂದು ಈ ಆದೇಶ ಪ್ರಕಟವಾಗಿದ್ದು, ಲೇ–ಆಫ್‌ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ 300 ಕಾರ್ಮಿಕರಿಗೆ ₹7.5 ಕೋಟಿ ಪರಿಹಾರ ನೀಡುವಂತೆ ನ್ಯಾಯಾಲಯವು ಸೂಚಿಸಿದೆ. ಆದರೆ, ಇಂದಿಗೂ ಪರಿಹಾರದ ಹಣ ದೊರೆತಿಲ್ಲ. ಶೀಘ್ರವೇ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ’ ಎಂದರು.

‘ಅಲ್ಲದೇ, ಕಂಪನಿಯು ಕಾರ್ಮಿಕರಿಗೆ ಭವಿಷ್ಯ ನಿಧಿಯ ಭಾಗವಾಗಿ ₹2.46 ಕೋಟಿ ನೀಡಬೇಕಿದ್ದು, ಅದನ್ನು ದೊರಕಿಸುವಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯೂ ವಿಫಲವಾಗಿದೆ. ಈ ಬಗ್ಗೆಯೂ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಸುವರ್ಣ, ಖಜಾಂಚಿ ಬಿ.ಎನ್‌.ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಗ್ಯಶ್ರೀ, ಸುನೀತಾ, ನಿವೇದಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT