ಮೈಸೂರು: ‘ಇಲ್ಲಿನ ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿರುವ ಪಾರಂಪರಿಕ ಕಟ್ಟಡವಾದ ಜಯಲಕ್ಷ್ಮೀ ವಿಲಾಸ ಅರಮನೆಯನ್ನು ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡುವ ಯೋಚನೆ ಮಾಡಿದ್ದೇ ಅಪರಾಧ’ ಎಂದು ನಿವೃತ್ತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದ್ದಾರೆ.

ಈ ಅರಮನೆಯನ್ನು ಗುತ್ತಿಗೆಗೆ ನೀಡುವ ಸಂಬಂಧ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರು ಈಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪಿಸಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ರಂಗಪ್ಪ, ‘ಇದೊಂದು ಅಪಾಯಕಾರಿ ನಡೆ’ ಎಂದು ಆರೋಪಿಸಿದ್ದಾರೆ.

‘10 ಎಕರೆ ವಿಸ್ತೀರ್ಣದಲ್ಲಿರುವ ಈ ಅರಮನೆ ಕಟ್ಟಡ ಗಂಗೋತ್ರಿಯ ಆಕರ್ಷಣೆಯ ಕೇಂದ್ರ ಬಿಂದು. ಇದು ಮೈಸೂರನ್ನು ಆಳಿದ ಮಹಾರಾಜರ ವಂಶದ ಕುರುಹು. ಇಂತಹ ಪ್ರತಿಷ್ಠಿತ ಕಟ್ಟಡ ವಿ.ವಿ. ಆವರಣದಲ್ಲಿರುವುದು ಹೆಮ್ಮೆಯ ಸಂಗತಿ. ಇದರ ಮಹತ್ವ ಅರಿಯದೇ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಬಗ್ಗೆ ಆಲೋಚಿಸಿದ್ದು ತಪ್ಪು. ಈ ಅರಮನೆಯನ್ನು ಉಚಿತವಾಗಿ 40 ವರ್ಷಗಳ ಗುತ್ತಿಗೆ ನೀಡುವುದು ಎಂದರೆ ಏನರ್ಥ? ವಿ.ವಿ.ಯ ಆಸ್ತಿಯನ್ನು ಹೀಗೆ ಹಸ್ತಾಂತರಿಸುವುದು ಅಪಾಯಕಾರಿ’ ಎಂದು ದೂರಿದ್ದಾರೆ.

‘ನಾನು ಈ ವಿ.ವಿ. ಕುಲಪತಿ ಆಗಿದ್ದಾಗಲೂ ಕುಕ್ಕರಹಳ್ಳಿ ಕೆರೆಯನ್ನು ಗುತ್ತಿಗೆ ನೀಡುವಂತೆ ಹಲವರು ಕೇಳಿದ್ದರು. ಪ್ರಭಾವ ಬಳಸಿದ್ದರು, ಒತ್ತಡ ಹಾಕಿಸಿದ್ದರು. ಆದರೆ, ನಾನು ಬಗ್ಗದೆ, ಅದು ನಮ್ಮ ಸ್ವತ್ತು ಎಂದು ಹೇಳಿ ಆ ವಿಷಯದ ಚರ್ಚೆಗೂ ಅವಕಾಶ ಕೊಟ್ಟಿರಲಿಲ್ಲ’ ಎಂದು ತಿಳಿಸಿದ್ದಾರೆ.

‘ಈ ಹಿಂದೆ ಕೊಟ್ಟ ‘ಪೆಟ್ರೋಲ್ ಬಂಕ್’ ಸ್ಥಳವನ್ನೇ 50 ವರ್ಷ ಕಳೆದರೂ ಮರಳಿ ವಿ.ವಿ. ಸುಪರ್ದಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತೆಯೇ ಪ್ರೀಮಿಯರ್ ಸ್ಟೂಡಿಯೋಸ್ ಎದುರಿನ ‘ವಯಸ್ಕರ ಶಿಕ್ಷಣ ಸಂಸ್ಥೆ’ಗೆ ನೀಡಿದ್ದ ಜಾಗವಿರಬಹುದು, ಖಾಸಗಿ ವ್ಯಕ್ತಿಗೆ ನೀಡಿದ ಸರಸ್ವತಿಪುರಂನ ವಿವಿ ಆಸ್ತಿ ಇರಬಹುದು ಈವರೆಗೂ ಸುಪರ್ದಿಗೆ ಪಡೆದುಕೊಳ್ಳಲಾಗಿಲ್ಲ. ಇದೆಲ್ಲವೂ ನಮ್ಮ ಮುಂದಿರುವ ಜೀವಂತ ನಿರ್ದಶನ. ಹೀಗಾಗಿ, ವಿ.ವಿ. ಆಸ್ತಿಯನ್ನು ಕಳೆದುಕೊಳ್ಳಬಾರದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.