ಜಯಪುರ: ಹೋಬಳಿಯ ದೊಡ್ಡಹುಂಡಿಯ ಮುರುಡ ಬಸವೇಶ್ವರಸ್ವಾಮಿ ಓಕಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಬಸವೇಶ್ವರ ರಥೋತ್ಸವ ದೊಡ್ಡಹುಂಡಿ, ಕೆರೆಹಂಡಿ, ಡಿ.ಸಾಲುಂಡಿ ಗ್ರಾಮಗಳಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಒಂಬತ್ತು ವರ್ಷಕ್ಕೊಮ್ಮೆ ನಡೆಯುವ ಓಕಳಿ ಜಾತ್ರಾ ಮೆರವಣಿಗೆಯಲ್ಲಿ ಗೋವುಗಳನ್ನು ಶೃಂಗರಿಸಿ ಮೆರವಣಿಗೆ ಮಾಡಲಾಯಿತು.

ಹರಕೆ ಹೊತ್ತ ಭಕ್ತರು ಬಾಯಿಬೀಗ ಧರಿಸಿ ಸ್ವಾಮಿಯ ಹರಕೆ ತೀರಿಸಿದರು. 33 ಹಳ್ಳಿಗಳ ಗಡಿ ದೇವರುಗಳು ಮತ್ತು ಬಿರುದು ಬಾವಲಿಗಳು, ಛತ್ರಿ ಚಾಮರಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವು.

ಮಂಗಳವಾದ್ಯ ಮತ್ತು ತಮಟೆ ಸದ್ದಿಗೆ ನಂದಿಧ್ವಜ ಕಂಬವನ್ನು ಯುವಕರು ಹೊತ್ತು ಕುಣಿದರು.ಪೂಜಾ ಕುಣಿತ,ಡೊಳ್ಳು ಕುಣಿತ ,ವೀರಗಾಸೆ ನೃತ್ಯ ಸೇರಿ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು.

ಜಾತ್ರೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಜಯಪುರ ಠಾಣಾ ಪಿಎಸ್ಐ ಕಾಳೇಗೌಡ ಅವರು ಪೊಲೀಸ್ ಬಂದೋಬಸ್ತ್ ನೇತೃತ್ವ ವಹಿಸಿ,ಜಾತ್ರಾ ಮೆರವಣಿಗೆ ಸಾಂಗವಾಗಿ ಸಾಗಲು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.