ಹಂಪಾಪುರ: ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿವಿಧ ಪೂಜೆ, ಆಚರಣೆಗಳನ್ನು ಮಾಡಿ ತ್ಯಾಜ್ಯವನ್ನು ಬಿಸಾಡುತ್ತಿರುವುದರಿಂದ ಅದು ಕಬಿನಿ ನದಿಗೆ ಸೇರಿ ಕಲುಷಿತವಾಗುತ್ತಿದೆ.

‘ಕಬಿನಿ ಹಿನ್ನೀರಿನ ಪ್ರದೇಶಗಳಲ್ಲಿ ರೈತರು ಬಿತ್ತನೆ ಮಾಡಿದ್ದು, ಬಿತ್ತನೆಯ ನಂತರ ಮಳೆ ಬಾರದೇ ಇದ್ದುದರಿಂದ ಈ ಭಾಗದ ರೈತರು ಪೂಜೆ ಮಾಡುವ ಮೂಲಕ ಮಳೆಗೆ ಪ್ರಾರ್ಥಿಸುತ್ತಿದ್ದಾರೆ. ಇದರಿಂದ ತ್ಯಾಜ್ಯ ಅವ್ಯಾಹತವಾಗಿ ನದಿಗೆ ಸೇರುತ್ತಿದೆ’ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಮಳೆ ಆಗಿದ್ದು, ರೈತರು ಜಮೀನು ಹದಗೊಳಿಸಿ ಬಿತ್ತನೆ ಮಾಡಿದ್ದರು. ಆ ಬಳಿಕ ಮಳೆಯಾಗದೆ ಮಗ್ಗೆ, ಕೆ.ಆರ್.ಪುರ(ಕೃಷ್ಣರಾಜಪುರ), ಹೊಸಹೊಳಲು, ಕಾರಾಪುರ, ಮಳಲಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಆಯಾ ಗ್ರಾಮದೇವತೆಯ ಮೊರೆ ಹೋಗಿ ತಂಪಿನ ಪೂಜೆಗಳನ್ನು ನೆರವೇರಿಸಿದ್ದರು. ಆದರೂ ಮಳೆ ಬಾರದ್ದನ್ನು ಗಮನಿಸಿದ ರೈತರು ಮತ್ತು ಗ್ರಾಮಸ್ಥರು ಕಬಿನಿ ಹಿನ್ನೀರಿಗೆ ತೆರಳಿ ಗಂಗೆಗೆ ಪೂಜೆ ಮಾಡುತ್ತಿದ್ದಾರೆ. ಪೂಜೆಯ ಜೊತೆಗೆ ಗ್ರಾಮಸ್ಥರು ನೆರೆಹೊರೆಯ ಸಾವಿರಾರು ಜನರಿಗೆ ಅನ್ನದಾನ ಮಾಡುವುದರಿಂದ ಪ್ಲಾಸ್ಟಿಕ್ ಲೋಟ, ಊಟದ ಎಲೆ ಎಲ್ಲವನ್ನು ಹಿನ್ನೀರಿನ ಪ್ರದೇಶದಲ್ಲಿ ಬಿಟ್ಟು ಹೋಗುತ್ತಿರುವುದರಿಂದ ಕಲುಷಿತಗೊಳ್ಳುತ್ತಿದೆ.

ಕೆ.ಆರ್.ಪುರ ಗ್ರಾಮಸ್ಥರಿಂದ ಶ್ಯಾಮ ಆಚರಣೆ:‘ಅಂತರಸಂತೆ ಹೋಬಳಿಯ ಕೆ.ಆರ್. ಪುರ ಗ್ರಾಮಸ್ಥರು ಎರಡು ವರ್ಷಗಳಿಗೊಮ್ಮೆ ಹಿನ್ನೀರಿಗೆ ತೆರಳಿ, ತೆಂಗಿನ ಗರಿಗಳಿಂದ ಚಪ್ಪರ ನಿರ್ಮಿಸಿ, ದೇವರನ್ನು ಪ್ರತಿಷ್ಠಾಪಿಸಿ ಮರಿಗಳನ್ನು ಬಲಿ ನೀಡಿ, ಸಾವಿರಾರು ಮಂದಿಗೆ ಊಟ ಹಾಕುವುದರ ಮೂಲಕ ಶ್ಯಾಮ ಆಚರಣೆ ಮಾಡಿದ್ದಾರೆ. ಇದರಿಂದಲೂ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಈ ತ್ಯಾಜ್ಯವನ್ನು ಹಿನ್ನೀರಿನ ಪ್ರದೇಶದಲ್ಲಿ ಚೆಲ್ಲಾಡಿ ಹೋಗಿದ್ದಾರೆ. ಈ ತ್ಯಾಜ್ಯವು ಮಳೆ ಬಂದಾಗ ನದಿ ಸೇರಲಿದ್ದು ಇದರಿಂದಲೂ ಜಲಾಶಯ ಕಲುಷಿತಗೊಳ್ಳುತ್ತದೆ’ ಎಂಬುದು ಪರಿಸರಪ್ರಿಯರು ಆರೋಪ.

‘ಪೂಜೆ ಮತ್ತು ಅನ್ನದಾನವನ್ನು ನದಿಯ ದಡದಲ್ಲೇ ಮಾಡಿದ್ದು ತ್ಯಾಜ್ಯಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ. ಇದರಿಂದ ಮಳೆ ಬಂದಾಗ ತ್ಯಾಜ್ಯವು ನದಿಯ ಒಡಲು ಸೇರಲಿದ್ದು, ನದಿಯಲ್ಲಿ ವಾಸಿಸುವ ಜಲಚರಗಳಿಗೂ ಕಂಟಕವಾಗುವ ಸಂಭವವಿದೆ. ಹಿಂದೆ ನೀರುನಾಯಿಯೊಂದಕ್ಕೆ ಪ್ರಾಸ್ಟಿಕ್ ಸುತ್ತಿಕೊಂಡಿತ್ತು, ಅದನ್ನು ಗಮನಿಸಿ ಆ ನೀರುನಾಯಿಯ ರಕ್ಷಣೆ ಮಾಡಲಾಗಿತ್ತು’ ಎಂದು ಮಗ್ಗೆ ಗ್ರಾಮದ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮಗಳಲ್ಲಿ ಬೀಗರ ಔತಣವನ್ನು ಸಹ ಅಲ್ಲಿನ ತ್ಯಾಜ್ಯಗಳನ್ನು ಟ್ರಾಕ್ಟರ್ಗಳ ಮೂಲಕ ಹಿನ್ನೀರಿಗೆ ತಂದು ಸುರಿಯುತ್ತಾರೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-38-1178857953

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.