ಹನಗೋಡು: ಹೋಬಳಿಯ ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೆಬ್ಬಾಳ ಕ್ಷೇತ್ರದ ಟಿ.ಗೌರಮ್ಮ ಗವಿಮಾದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಕಾಳೇಗೌಡ ಅವರು ಅಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ ಟಿ.ಗೌರಮ್ಮ ಗವಿಮಾದು ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ, ಬಿಇಒ ಮಹದೇವಯ್ಯ ಘೋಷಿಸಿದರು.
ಚುನಾವಣೆಯಲ್ಲಿ ಉಪಾಧ್ಯಕ್ಷೆ ಆರ್.ಗೀತಾ, ಸದಸ್ಯರಾದ ಲಲಿತ, ಸುನಂದ, ಗೌರಮ್ಮ, ಪಿ.ಎಸ್.ರಾಧಾ, ಮಂಜುಳ, ಜೆ.ಪಿ.ಪಾರ್ವತಿ, ಕಾಳೇಗೌಡ, ನಾಗರಾಜು, ಚಂದ್ರೇಗೌಡ, ವೆಂಕಟೇಶ್, ಅರಸಯ್ಯ ಭಾಗವಹಿಸಿದ್ದರು. ಸದಸ್ಯ ಸಿ.ಪಿ.ಸುಬ್ರಹ್ಮಣ್ಯನ್ ಗೈರಾಗಿದ್ದರು.