ಮೈಸೂರು: ಅಲ್ಲಿ ಕುಮಾರವ್ಯಾಸ ಕವಿಯ ಉತ್ಕಟ ಅಭಿಮಾನಿಗಳಿದ್ದರು. ಕರ್ಣಾಟ ಭಾರತ ಕಥಾಮಂಜರಿ ಮಹಾಕಾವ್ಯದ ಕುರಿತು ತರಗತಿಗಳಲ್ಲಿ ಫಾಠ ಮಾಡಿದ ವಿದ್ವಾಂಸರಿದ್ದರು. ಸಾಹಿತ್ಯದ ವಿದ್ಯಾರ್ಥಿಗಳಿದ್ದರು. ಹಲವು ಊರುಗಳಿಂದ ಬಂದವರೂ ಇದ್ದರು. ಜೊತೆಗೆ ಕಾವ್ಯ ವಾಚನವಿತ್ತು.
.ಮೈಸೂರು | ಆರ್ಡಿಪಿಆರ್ ಜನರ ಬದುಕು ಸುಧಾರಿಸುವ ಇಲಾಖೆ: ಜಿಲ್ಲಾಧಿಕಾರಿ.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಗುರುವಾರ ಮಹಾಕವಿಯ ಕಥಾಮಂಜರಿಯ ಅಭಿಮಾನವು ವಿಶೇಷವಾಗಿ ಅನಾವರಣಗೊಂಡಿತು

38 ವರ್ಷದ ಬಳಿಕ ಮರುಮುದ್ರಣಗೊಂಡ ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿ ಹೊಸ ಆವೃತ್ತಿಯ ಲೋಕಾರ್ಪಣೆ ಸಮಾರಂಭವದು.

ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪಾದಕತ್ವದಲ್ಲಿ ಮೊದಲಿಗೆ ಪ್ರಕಟವಾಗಿದ್ದ ಕೃತಿಯ ಮೊದಲ ಮುದ್ರಣದಿಂದ ಇಲ್ಲಿವರೆಗಿನ ಬೆಳವಣಿಗೆಯ ಕುರಿತ ನೆನಪುಗಳಿಗೂ ಈ ಕಾರ್ಯಕ್ರಮ ದಾರಿ ಮಾಡಿತ್ತು.

ಪ್ರೊ.ಸಿಪಿಕೆ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
.ಮೈಸೂರು ಸಿಲ್ಕ್ಸ್ ಮೇಲೆ ಕಾಂಗ್ರೆಸ್ ಭೂಗಳ್ಳರ ಕಣ್ಣು: ಆರ್.ಅಶೋಕ .
ಹೊಸ ಆವೃತ್ತಿಯ ಕರಡು ತಿದ್ದಿರುವ ಪ್ರೊ.ಕೃಷ್ಣಮೂರ್ತಿ ಹನೂರು, ಕಾವ್ಯದ ಪ್ರಸ್ತುತತೆ ಕುರಿತು ಮಾತನಾಡಿದರು.

ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಪ್ರಾಸ್ತಾವಿಕ ಮಾತನಾಡಿದರು.

ಕೃತಿಯ ಪ್ರಕಟಣೆಗೆ ಆರ್ಥಿಕ ನೆರವು ನೀಡಿರುವ ನ್ಯೂಯಾರ್ಕ್ ಸ್ಟೋನಿ ಬ್ರೂಕ್ವಿಶ್ವವಿದ್ಯಾಲಯದ ಪ್ರೊ.ಎಸ್.ಎನ್.ಶ್ರೀಧರ್ , ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಪಾಲ್ಗೊಂಡರು.

ಕಾವ್ಯದ ಕೆಲವು ಭಾಗಗಳನ್ನು ಚಾರ್ವಿ ಸತೀಶ್ ವಾಚಿಸಿದರು.

ಅಧ್ಯಕ್ಣತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಇದೇ ಸಂದರ್ಭದಲ್ಲಿ ಪ್ರಸಾರಾಂಗದ ಮಾರಾಟ ವಿಭಾಗದ ಗಣಕೀಕೃತ ಲೆಕ್ಕಪತ್ರ ನಿರ್ವಹಣಾ ವ್ಯವಸ್ಥೆಗೆ ಚಾಲನೆ ನೀಡಿದರು.
.ಮೈಸೂರು | ಕುಡಿಯುವ ನೀರಿಗೆ ಸಮಸ್ಯೆ ಆಗದಿರಲಿ: ಸಚಿವ ಎಚ್.ಸಿ. ಮಹದೇವಪ್ಪ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.