ಮೈಸೂರು: ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಕೆ ವೀಕ್ಷಣೆ ಮಾಡಲು ಮಹಾರಾಷ್ಟ್ರ ರಾಜ್ಯಕ್ಕೆ ರೈತರ ತಂಡ ತೆರಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಗರದಲ್ಲಿ ಮಂಗಳವಾರ ಪಿಡಬ್ಲ್ಯುಡಿ ಅತಿಥಿ ಗೃಹದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ನಡೆದ ಸಭೆಯಲ್ಲಿ, ಏಪ್ರಿಲ್ ತಿಂಗಳಲ್ಲಿ ರೈತರ ತಂಡ ವೀಕ್ಷಣೆಗೆ ತೆರಳಲು ತೀರ್ಮಾನಿಸಿತು.

ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಮಹಾರಾಷ್ಟ್ರ ರಾಜ್ಯದಲ್ಲಿ ಕಬ್ಬು ಬೇಸಾಯ ಮಾಡುವ ರೈತರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿ ವ್ಯವಸಾಯ ಮಾಡುತ್ತಿರುವುದರಿಂದ ಉತ್ಪಾದನೆ ಏರಿಕೆಯಾಗಿ, ಖರ್ಚು ಕಡಿಮೆಯಾಗಿದೆ. ಇದರಿಂದ ರೈತರಿಗೆ ಹೆಚ್ಚು ಲಾಭವಾಗುತ್ತಿದೆ ಎಂಬ ಮಾಹಿತಿ ದೊರಕಿರುವುದು ರೈತರಿಗೆ ಸಂತಸ ಉಂಟುಮಾಡಿದೆ’ ಎಂದು ತಿಳಿಸಿದರು.

‘ಕೃತಕ ಬುದ್ಧಿಮತ್ತೆ ಅಳವಡಿಸಿಕೊಂಡು ಯಶಸ್ವಿಯಾಗಿರುವ ಮಹಾರಾಷ್ಟ್ರ ರೈತರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಈ ಬಗ್ಗೆ ಹೆಚ್ಚು ಅರಿತುಕೊಳ್ಳಲು ರೈತರ ತಂಡ ವೀಕ್ಷಣೆಗೆ ಬರಲಿದೆ ಎಂದು ತಿಳಿಸಿದ್ದೇನೆ’ ಎಂದರು.

‘ರಾಜ್ಯದಾದ್ಯಂತ ಬ್ಯಾಂಕ್ ಸಾಲ ಪಡೆದಿರುವ ರೈತರಿಗೆ ಸರ್ಫೇಸಿ ಕಾಯ್ದೆ ಮರಣಶಾಸನವಾಗಿದೆ. ಈ ಕಾಯ್ದೆಯ ವಿರುದ್ಧ ರೈತರ ಹೋರಾಟ ಅವಶ್ಯಕತೆ ಇದೆ. ಕಾಯ್ದೆ ರದ್ದಾಗದಿದ್ದರೆ ರೈತರ ಕೃಷಿ ಭೂಮಿ ಬಂಡವಾಳಶಾಹಿಗಳ ಹಾಗೂ ಕಂಪನಿಗಳ ವಶಕ್ಕೆ ಹೋಗುತ್ತದೆ’ ಎಂದು ತಿಳಿಸಿದರು.

‘ಈಗಾಗಲೇ ನೂರಾರು ರೈತರು ಭೂಮಿ ಕಳೆದುಕೊಂಡಿದ್ದಾರೆ. ಮುಂದಿನ ತಿಂಗಳು ರಿಸರ್ವ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು. 19ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ರೈತರ ಬೃಹತ್ ರ್ಯಾಲಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ವರ್ಕೌಡ್ ನಾಗೇಶ್, ಕೆಂಡಗಣ್ಣಪ್ಪ, ರಂಗರಾಜು, ಮಂಜುನಾಥ್, ಮಂಜೇಶ್ ಕಸುವಿನಹಳ್ಳಿ, ಕೂಡನಹಳ್ಳಿ ಸೋಮಣ್ಣ, ಪ್ರಭಾಕರ್, ಕಮಲಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.