ಮೈಸೂರು: ‘ರಾಜ್ಯದಲ್ಲಿ ಒಳ ಮೀಸಲಾತಿ ಗೊಂದಲದಿಂದ 3 ವರ್ಷಗಳಿಂದ ಯಾವುದೇ ಶುಶ್ರೂಷಕರಿಗೆ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ನೇಮಕಾತಿ ನಡೆಯಲಿದ್ದು, 4ಸಾವಿರಕ್ಕೂ ಹೆಚ್ಚಿನ ಸರ್ಕಾರಿ ನೌಕರಿ ಸಿಗಲಿವೆ’ ಎಂದು ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ ಕುಲಸಚಿವ ಕೆ.ಮಲ್ಲು ತಿಳಿಸಿದರು.

ನಗರದ ಜೆ.ಕೆ. ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಸರ್ಕಾರಿ ಶುಶ್ರೂಷ ಕಾಲೇಜಿನ ವತಿಯಿಂದ 2025–26ನೇ ಸಾಲಿನ ಪ್ರಥಮ ವರ್ಷದ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳ ಜ್ಯೋತಿ ಬೆಳಗುವಿಕೆ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದ 31 ಕಾಲೇಜುಗಳಲ್ಲಿ 5 ಕಾಲೇಜುಗಳಲ್ಲಿ ಮಾತ್ರ ಸರ್ಕಾರದಿಂದ ನೇಮಿಸಿದ ಪ್ರಾಧ್ಯಾಕರಿದ್ದಾರೆ. ಉಳಿದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಂದ ಬೋಧನೆ ನಡೆಯುತ್ತಿದೆ. ನಮ್ಮ ಪರಿಷತ್ನಿಂದ 450 ಪ್ರಾಧ್ಯಾಪಕರ ನೇಮಕಕ್ಕೆ ಬೇಡಿಕೆ ಇಡಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ 31 ಸರ್ಕಾರಿ ಶುಶ್ರೂಷ ಕಾಲೇಜುಗಳಲ್ಲಿ ಪ್ರತಿ ಕಾಲೇಜಿನಲ್ಲಿ 100 ಸೀಟುಗಳಿದ್ದು, ರಾಜ್ಯ ಸರ್ಕಾರ 2026ನೇ ಸಾಲಿನಲ್ಲಿ 250 ಸೀಟುಗಳಿಗೆ ಹೆಚ್ಚಿಸಿದ್ದು, ರಾಜ್ಯದಲ್ಲಿ 2 ಸಾವಿರ ಸೀಟುಗಳು ಹೆಚ್ಚಾಗಿವೆ. ಶುಶ್ರೂಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕಡಿತವಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

‘ಅಂತಃಕರಣ, ಸೇವಾ ಮನೋಭಾವ ನರ್ಸ್ಗಳ ಮುಖ್ಯ ಧ್ಯೇಯವಾಗಬೇಕು’ ಎಂದರು.

‘ಭಾರತೀಯರಲ್ಲಿ ಶುಶ್ರೂಷ ವಿಚಾರದಲ್ಲಿ ಅಪಾರ ಜ್ಞಾನವಿದ್ದು, ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಬಹುದು’ ಎಂದರು.

‘ಕೋವಿಡ್ ಪರಿಸ್ಥಿತಿಯ ನಂತರ ದೇಶದ ಶುಶ್ರೂಷಕರಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಕಂಡುಬಂದಿದೆ. ನೇರವಾಗಿ ಕಾಲೇಜುಗಳಿಂದ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಬೆಂಬಲ ನೀಡುತ್ತಿದೆ’ ಎಂದು ತಿಳಿಸಿದರು.

ಎಂಎಂಸಿಆರ್ಐ ಮುಖ್ಯ ಆಡಳಿತಧಿಕಾರಿ ಬಿ.ಆರ್.ಮಹೇಶ್, ಆರ್ಥಿಕ ಸಲಹೆಗಾರ್ತಿ ಎನ್.ನೂತನಶ್ರೀ, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಎಚ್.ಸಿ.ಶೋಭಾ, ಸ್ಥಾನೀಯ ವೈದ್ಯಾಧಿಕಾರಿ ಡಾ.ನಯಾಜ್ ಪಾಷ್, ಚೆಲುವಾಂಬ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಆರ್.ಸುಧಾ, ಪಿಕೆಟಿಬಿ ಮತ್ತು ಸಿ.ಡಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಸಿ.ಪ್ರಶಾಂತ್, ಸರ್ಕಾರಿ ಶುಶ್ರೂಷ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ನಂದಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.