ಮೈಸೂರು: ಕೌಟುಂಬಿಕ ಕಲಹಗಳು, ಜಮೀನು– ಆಸ್ತಿ ವಿವಾದಗಳು, ವಂಚನೆಗಳು, ಪೊಲೀಸ್ ದೌರ್ಜನ್ಯ– ನಿಂದನೆಗಳು ಕುರಿತು ಅಳಲು ತೋಡಿಕೊಂಡ ನೊಂದ ಮಹಿಳೆಯರು.

ನಗರದ ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ‘ಮಹಿಳಾ ಜನ ಸುನ್ವಾಯಿ’ (ಮನೆ ಮನೆಗೆ ಮಹಿಳಾ ಆಯೋಗ) ಸಭೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಎದುರು ಮಹಿಳೆಯರು ಸಮಸ್ಯೆಗಳ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದರು.

ಪ್ರತಿಯೊಬ್ಬರ ದೂರುಗಳನ್ನು ಸಮಾಧಾನದಿಂದ ಆಲಿಸಿದ ನಾಗಲಕ್ಷ್ಮಿ ಚೌಧರಿ, ಸಮಸ್ಯೆಗಳ ತೀವ್ರತೆಗೆ ಭಾವುಕರಾದರು. ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶೀಘ್ರದಲ್ಲಿ ಸಮಸ್ಯೆ ಪರಿಹರಿಸಬೇಕು ಎಂಬ ತಾಕೀತು ಮಾಡಿದರು.

‘ಮಹಿಳೆಯರ ಸುರಕ್ಷತೆ ಮುಖ್ಯ. ಪೊಲೀಸ್ ಅಧಿಕಾರಿಗಳು ಸಂತ್ರಸ್ತೆಯರಿಗೆ ಭರವಸೆ, ವಿಶ್ವಾಸ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಲಿಂಗಸೂಕ್ಷ್ಮತೆ ಇರಬೇಕು. ಈ ಸಂಬಂಧ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು. ಹೆಣ್ಣು ಮಕ್ಕಳು ಸಮಸ್ಯೆಗೆ ಸ್ಪಂದಿಸುವಂತಹ ಕಾರ್ಯಕ್ರಮ ನಿರಂತರ ನಡೆದಲ್ಲಿ, ಸಮಸ್ಯೆ ಕಡಿಮೆ ಮಾಡಬಹುದು’ ಎಂದು ಹೇಳಿದರು.

‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಕಾನೂನು ಜ್ಞಾನ ಮತ್ತು ಜಾಗೃತಿ ಮೂಡಿಸುವುದು ಅಗತ್ಯ. ಸಂತ್ರಸ್ತೆಯರಿಗೆ, ಮಹಿಳೆಯರಿಗೆ ಮತ್ತು ದುರ್ಬಲ ವರ್ಗದವರಿಗೆ ಕಾನೂನು ಜ್ಞಾನದ ಎಷ್ಟೋ ವಿಚಾರಗಳ ಕುರಿತು ಮಾಹಿತಿ ಇರುವುದಿಲ್ಲ. ಪೊಲೀಸ್ ಇಲಾಖೆಯಿಂದ ನಡೆಸಲಾಗುವ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ಸಾಮಾಜಿಕ ಜಾಲತಾಣ ಬಳಸಿಕೊಂಡು ಪ್ರಚಾರ ಮಾಡಿದಲ್ಲಿ ಮಾಹಿತಿ ಹೆಚ್ಚು ತಲುಪುತ್ತದೆ. ಇದರಿಂದ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಸರ್ಕಾರಿ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರ ಹಿತರಕ್ಷಣೆಗಾಗಿ ಲೈಂಗಿಕ ದೌರ್ಜನ್ಯ ತಡೆ (ಪಾಶ್) ಸಮಿತಿ ಇದೆ. ಈ ಸಮಿತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಇದರ ಅನುಷ್ಠಾನ ಕುರಿತು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ‘ಪೊಲೀಸ್ ಇಲಾಖೆಯಿಂದ ಮನೆ ಮನೆಗೆ ಪೋಲಿಸ್, ಆಸರೆ, ಸಂತ್ರಸ್ತೆ ದಿನ, ತೆರೆದ ಮನೆ, ಎಸ್ಸಿ ಎಸ್ಟಿ ಸಭೆ, ಜನಸಂಪರ್ಕ ಸಭೆ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ’ ಎಂದರು.

‘2023ನೇ ಸಾಲಿನಿಂದ ಗಮನಿಸಿದರೆ ನಗರ ವ್ಯಾಪ್ತಿಯಲ್ಲಿ ಅಪರಾಧಗಳ ಸಂಖ್ಯೆ ಶೇ50ರಷ್ಟು ಗಣನೀಯವಾಗಿ ಕಡಿಮೆಯಾಗಿದೆ. ಅಪರಾಧ ಕೃತ್ಯ ತಡೆಗಟ್ಟಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದು ತಿಳಿಸಿದರು.

ಡಿಸಿಪಿ ಕೆ.ಎಸ್.ಸುಂದರ್ ರಾಜ್, ‘ಹೆಣ್ಣು ಮಕ್ಕಳ ರಕ್ಷಣೆಗಾಗಿ ಅಕ್ಕ ಪಡೆ ಮುಖ್ಯವಾಗಿ ಕಾಲೇಜುಗಳು, ತೊಂದರೆ ಇರುವ ಸ್ಥಳಗಳಲ್ಲಿ ಗಸ್ತು ಮಾಡಲಾಗುತ್ತಿದೆ. ನಗರದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಸಾಗಣಿಕೆ ತಡೆಗಟ್ಟಲು ‘ವಿಮುಕ್ತಿ’ ಯೋಜನೆ ಜಾರಿಗೆ ತರಲಾಗಿದೆ’ ಎಂದು ತಿಳಿಸಿದರು.

ಮಹಿಳೆಯೊಬ್ಬರು ತಮಗೆ ಖಾಸಗಿ ಸಂಸ್ಥೆಯಿಂದ ಇರಲು ಮನೆ ಸೇರಿದಂತೆ ಮೂಲ ಸೌಲಭ್ಯಗಳ ತೊಂದರೆಯಾಗುತ್ತಿರುವ ಬಗ್ಗೆ ತಿಳಿಸಿದಾಗ ಸ್ಪಂದಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಪೂರ್ಣ ಮಾಹಿತಿಯೊಂದಿಗೆ ಡಿಸಿ ಕಚೇರಿಗೆ ಭೇಟಿ ನೀಡುವಂತೆ ಹಾಗೂ ನಿವೇಶನ, ಮೂಲ ಸೌಕರ್ಯಗಳ ಬಗ್ಗೆ ಮನವಿ ಸಲ್ಲಿಸಿದವರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಸಭೆಯಲ್ಲಿ ಎಎಸ್ಪಿ ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು ಇದ್ದರು.

‘ಪೊಲೀಸ್ ಇಲಾಖೆ ತವರು ಮನೆ ಇದ್ದಂತೆ’ ‘ಸಂತ್ರಸ್ತ ಮಹಿಳೆಯರಿಗೆ ಪೊಲೀಸ್ ಇಲಾಖೆ ತವರು ಮನೆ ಇದ್ದಂತೆ. ತಂದೆ–ತಾಯಿ ಬಿಟ್ಟರೆ ಅವರ ಸಂಕಷ್ಟ ನಿವಾರಣೆ ಕೋರಿ ಪೊಲೀಸರ ಮೊರೆ ಬರುತ್ತಾರೆ. ಅವರ ಸಮಸ್ಯೆಗೆ ಸ್ಪಂದಿಸಬೇಕು. ಅವರಲ್ಲಿ ಭರವಸೆ ಮೂಡಿಸಬೇಕು’ ಎಂದು ನಾಗಲಕ್ಷ್ಮಿ ಚೌಧರಿ ಹೇಳಿದರು. ‘ದೌರ್ಜನ್ಯ ಅಥವಾ ಇನ್ನಿತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಿಯಾದ ಸ್ಪಂದನೆ ಸಿಗದಿದ್ದರೆ ಇಲಾಖೆ ಬಗ್ಗೆ ಜನರಲ್ಲಿ ವಿಶ್ವಾಸ ಹೋಗುತ್ತದೆ. ಅಂತಹ ಕಳಂಕ ತರದಂತೆ ನೋಡಿಕೊಳ್ಳಬೇಕು’ ಎಂದು ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಭಾವೋದ್ವೇಗ ಕಣ್ಣೀರು: ಮಾರಾಣಾಂತಿಕ ಹಲ್ಲೆಗೆ ಒಳಗಾದ ಕಡಬೂರಿನ ಶಿವಮ್ಮ ಅವರ ರಕ್ತಸಿಕ್ತ ಫೋಟೊ ಕಂಡು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ ಆಯೋಗದ ಅಧ್ಯಕ್ಷರು ಹುಲ್ಲಹಳ್ಳಿ ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೊಂದು ದೊಡ್ಡಮಟ್ಟದಲ್ಲಿ ಹಲ್ಲೆ ನಡೆದಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನದ ಪ್ರಕರಣ ಯಾಕೆ ದಾಖಿಸಿಲ್ಲ ಎಂದು ಸಿಟ್ಟಾದರು.

ಅಧಿಕಾರಿಗಳ ಗೈರು: ಅಸಮಾಧಾನ ಮುಖ್ಯಮಂತ್ರಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿದ್ದರು. ಸಂತ್ರಸ್ತರ ಸಮಸ್ಯೆ ಆಲಿಸಲು ಮುಖ್ಯ ಅಧಿಕಾರಿಗಳ ಹೊರತಾಗಿ ಸಿಬ್ಬಂದಿ ಜವಾಬು ಕಂಡು ನಾಗಲಕ್ಷ್ಮೀ ಚೌಧರಿ ಅಸಮಾಧಾನ ವ್ಯಕ್ತಪಡಿಸಿದರು. ‘ಈ ಮೊದಲೇ ಜಿಲ್ಲಾಡಳಿತ ಸಿಎಂ ಕಾರ್ಯಕ್ರಮ ಇರುವುದನ್ನು ಗಮನಕ್ಕೆ ತಂದಿದ್ದರೆ ಈ ಸಭೆ ಮುಂದೂಡಬಹುದಿತ್ತು. ಸುಮ್ಮನೆ ಸಭೆ ನಡೆಸಿದರೆ ಏನು ಪ್ರಯೋಜನ. ಸಭೆ ಉದ್ದೇಶ ಸಂತ್ರಸ್ತರ ಸಮಸ್ಯೆ ಪರಿಹರಿಸುವುದು. ಸಂಬಂಧಪಟ್ಟ ಅಧಿಕಾರಿಗಳಿಲ್ಲದೆ ಮಾಹಿತಿ ಪಡೆಯುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

100 ಅರ್ಜಿಗಳು ಸಭೆಯಲ್ಲಿ ಒಟ್ಟು 100 ಅರ್ಜಿ ಸಲ್ಲಿಕೆಯಾದವು. ಈ ವೇಳೆ ನಿವೇಶನ ಒದಗಿಸುವಂತೆಯೂ ಕೋರಿದರು. ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೊಲೀಸ್ ಠಾಣೆಗಳಿಗೆ ಹೋದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮಹಿಳೆಯರಿಗೆ ಸೌಜನ್ಯದ ಮಾತುಗಳನ್ನಾಡದೆ ಅಗೌರವದಿಂದ ನಡೆಸಿಕೊಂಡ ಬಗ್ಗೆ ಸಭೆಯಲ್ಲಿ ಕೆಲ ಪ್ರಕರಣ ಕಂಡುಬದವು. ಜಮೀನು ಸಮಸ್ಯೆಯಿಂದಾಗಿ ಹಲ್ಲೆ ನಡೆದಿದ್ದು ಪೊಲೀಸರ ರಕ್ಷಣೆ ಸಂಬಂಧ ಎಚ್.ಡಿ.ಕೋಟೆಯ ಲೀಲಾವತಿ ದೊಡ್ಡ ಕವಲಂದೆ ವ್ಯಾಪ್ತಿಯಲ್ಲಿ ತಂದೆಯ ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ರಕ್ಷಣೆ ನೀಡದೆ ಪೊಲೀಸ್ ಅಧಿಕಾರಿ ನಿಂದನೆ ಕುರಿತು ಪದ್ಮ ಮತ್ತು ಸಹೋದರಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ನನ್ನ ಮೇಲೆಯೇ ಸುಳ್ಳು ದೂರು ನೀಡಿ ಕೆಲಸದಿಂದ ವಜಾಗೊಳಿಸಿರುವ ಸಂಬಂಧ ಜೆ.ಪಿ.ಪ್ಯಾಲೇಸ್ ಉದ್ಯೋಗಿ ಸುಮಲತಾ ಲಕ್ಷಾಂತರ ಹಣ ಪಡೆದು ವಾಪಸ್ ನೀಡದೆ ವಕೀಲನೊಬ್ಬ ಮೋಸ ಮಾಡಿದ್ದಲ್ಲದೆ ಗನ್ ತೋರಿಸಿ ಬೆದರಿಕೆ ಹಾಕಿರುವ ಕುರಿತು ವೃದ್ಧೆ ಸುನೀತಾ ಆನ್ಲೈನ್ ಬೆಟ್ಟಿಂಗ್ ಚಟದಿಂದ ₹ 20 ಲಕ್ಷಕ್ಕೂ ಹೆಚ್ಚು ಹಣ ಕಳೆದು ಪರಾರಿಯಾಗಿರುವ ಗಂಡನನ್ನು ಹುಡುಕಿಕೊಡುವಂತೆ ಮೈಸೂರಿನ ಮೇಘನಾ ಭಾವ–ಮೈದುನರ ಕಿರುಕುಳದಿಂದ ಬೇಸತ್ತಿರುವ ಬಗ್ಗೆ ಬೆಟ್ಟದಪುರದ ವರನಂದಿ ಸೇರಿದಂತೆ 50ಕ್ಕೂ ಸಂತ್ರಸ್ತೆಯರು ದೂರು ಸಲ್ಲಿಸಿದರು. ಈ ವೇಳೆ ನಿವೇಶನ ಒದಗಿಸುವಂತೆಯೂ ಕೋರಿದರು. ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವು ಸಮಸ್ಯೆ ಸ್ಥಳದಲ್ಲೇ ಬಗೆಹರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.