ಮೈಸೂರು: ಕೊಡವ ಸಮಾಜ ಮೈಸೂರು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅಭಿಮಾನಿ ಬಳಗದಿಂದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ವೃತ್ತದಲ್ಲಿ ಕೆ.ಎಂ.ಕಾರ್ಯಪ್ಪ ಅವರ 127ನೇ ಜನ್ಮದಿನ ಆಚರಿಸಲಾಯಿತು.

ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತನಾಡಿ, ‘ದೇಶಕ್ಕೆ ಕಾರ್ಯಪ್ಪ ಅವರ ಕೊಡುಗೆ ಅಪಾರ. ಕೊಡಗಿನ ದೇಶಪ್ರೇಮಿಗಳು, ವೀರರು ಮತ್ತೆಲ್ಲೂ ಹುಟ್ಟಲು ಸಾಧ್ಯವಿಲ್ಲ. ದೇಶಭಕ್ತಿ ಅವರಲ್ಲಿ ಪಾರಂಪರಿಕವಾಗಿ ಬೆಳೆದು ಬಂದಿದೆ. ಇದಕ್ಕೆ ಕಾರ್ಯಪ್ಪ ಅವರು ಪರೋಕ್ಷವಾಗಿ ಕಾರಣರಾಗಿದ್ದು, ಅವರ ಸ್ಮರಣೆ ಅಗತ್ಯ’ ಎಂದರು.

ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ಜಗತ್ತು ಭಾರತದ ಸೇನೆಯ ಕಡೆಗೆ ತಿರುಗಿ ನೋಡುವಂತೆ ಕಾರ್ಯಪ್ಪ ಅವರು ಮಾಡಿದ್ದಾರೆ. ಮೆಟ್ರೋಪೋಲ್ ವೃತ್ತದಲ್ಲಿ ಕಾರ್ಯಪ್ಪ ಅವರ ಪ್ರತಿಮೆ ಸ್ಥಾಪಿಸುವ ಸಂದರ್ಭದಲ್ಲಿ ಅನೇಕ ಅಡೆತಡೆಗಳು ಎದುರಾಗಿದ್ದವು. ಅದೆಲ್ಲವನ್ನು ಬದಿಗೊತ್ತಿ ಪ್ರತಿಮೆ ನಿಂತಿದೆ, ಇದು ಅತ್ಯಂತ ಹೆಮ್ಮೆಯ ವಿಚಾರ. ಅಪ್ರತಿಮ ಸಾಹಸಿಗರೊಬ್ಬರು ನಮ್ಮ ನಾಡಿನವರು ಎಂಬ ಹೆಮ್ಮೆ ನಮ್ಮಲ್ಲಿ ಇರಬೇಕು’ ಎಂದು ಹೇಳಿದರು.

ಪೊಂಜಾಂಡ ಎ. ಗಣಪತಿ, ನಾಯಕಂಡ ತಿಮ್ಮಯ್ಯ ಇದ್ದರು.

ಚಾಮುಂಡೇಶ್ವರಿ ಯುವ ಬಳಗದ ಸದಸ್ಯರು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ವೃತ್ತದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಿದರು.

ಮುಖಂಡರಾದ ನಜರ್ಬಾದ್ ನಟರಾಜ್, ಅಖಿಲ ಕರ್ನಾಟಕ ಸಿದ್ದರಾಮಯ್ಯ ಬ್ರಿಗೇಡ್ ಅಧ್ಯಕ್ಷ ಹಿನಕಲ್ ಉದಯ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಆರಿಫ್ ಪಾಷಾ, ಡೈರಿ ವೆಂಕಟೇಶ್, ಎಸ್.ಎನ್. ರಾಜೇಶ್, ಜಿ. ರಾಘವೇಂದ್ರ, ದಿನೇಶ್, ಕೋದಂಡ, ಬಲರಾಮ, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ, ವಿನಯ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.