ಹುಣಸೂರು: ‘ಆದಿವಾಸಿ ಸಮುದಾಯದವರ ಸಮಗ್ರ ಅಭಿವೃದ್ಧಿಗೆ ಜೀವನ ಮುಡಿಪಾಗಿಟ್ಟು ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡು ಕೊಡಗು ಜಿಲ್ಲೆಯ ಆದಿವಾಸಿಗಳಿಗೆ ಕೃಷಿ ಭೂಮಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಮಾನವ ಸಂಪನ್ಮೂಲ ವ್ಯಕ್ತಿ ರಾಯ್ ಡೇವಿಡ್ ಅವರ ನಿಧನದಿಂದ ಧ್ವನಿ ಇಲ್ಲದ ವರ್ಗಗಳಿಗೆ ತುಂಬಲಾರದ ನಷ್ಟವಾಗಿದೆ’ ಎಂದು ಆದಿವಾಸಿ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ ಹೇಳಿದರು.

ನಗರದ ಡೀಡ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಯ್ ಡೇವಿಡ್ ಮೂಲತಃ ಕೊಡಗಿನವರಾಗಿದ್ದು, ಈ ಭಾಗದಲ್ಲಿ ಆದಿವಾಸಿ ಸಮುದಾಯ ಎದುರಿಸುತ್ತಿದ್ದ ಮೂಲಭೂತ ಸಮಸ್ಯೆ ಹಾಗೂ ಗೇಣಿದಾರರ ಆಡಳಿತದ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸಿದ ಅಪರೂಪದ ವ್ಯಕ್ತಿ. ಆದಿವಾಸಿ ಸಮುದಾಯದ ಅಭಿವೃದ್ಧಿಗೆ ‘ಕಾರ್ಡ್’ ಎಂಬ ಸಂಸ್ಥೆ ಆರಂಭಿಸಿ ಆ ಮೂಲಕ ಗಿರಿಜನರಿಗೆ ಅರಣ್ಯ ಹಕ್ಕು ಹಾಗೂ ಮೂಲಭೂತ ಸವಲತ್ತು ಕಲ್ಪಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಸಫಲರಾಗಿದ್ದರು’ ಎಂದರು.

‘ನಾಗರಹೊಳೆ ಅರಣ್ಯದಲ್ಲಿ ಆದಿವಾಸಿಗಳ ಒಕ್ಕಲೆಕ್ಕೆಬ್ಬಿಸಿ ತಾಜ್ ರೆಸಾರ್ಟ್ ನಿರ್ಮಿಸಿದ್ದ ಅರಣ್ಯ ಇಲಾಖೆ ವಿರುದ್ಧ ಪರಿಸರ ಮಾಲಿನ್ಯ ಹಾಗೂ ಆದಿವಾಸಿಗಳಿಗೆ ಅರಣ್ಯ ಹಕ್ಕು ನೀಡಬೇಕು ಎಂಬ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ತಾಜ್ ರೆಸಾರ್ಟ್ ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು’ ಎಂದರು.

ಕಾರ್ಯಕ್ರಮದಲ್ಲಿ ಡಾ.ಟಿ.ಎಸ್. ವಿವೇಕಾನಂದ, ಡೀಡ್ ಸಂಸ್ಥೆಯ ಶ್ರೀಕಾಂತ್, ಗಿಡಮೂಲಕೆ ತಜ್ಞೆ ಮಾಸ್ತಮ್ಮ, ಬೆಟ್ಟಕುರುಬ ಪಾರಂಪರಿಕ ಮುಖಂಡ ವಿಠಲ್, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮಿ, ಶ್ರೀಕಂಠು, ಪ್ರಕಾಶ್, ಶಾರದಾ ಬೆಳಗೆರೆ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-38-808938888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.