ಮೈಸೂರು: ‘₹ 3 ಲಕ್ಷ ಕೋಟಿ ಸಾಲ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಟೀಕಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ವೇಳೆ ₹2.42 ಕೋಟಿ ಸಾಲವಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಅದು ₹5.42 ಲಕ್ಷ ಕೋಟಿಗೆ ಏರಿದೆ. ಸಾಲ ಪಾವತಿಗಾಗಿ ಅಸಲು ಮತ್ತು ಬಡ್ಡಿ ಸೇರಿ ವಾರ್ಷಿಕ ₹18ಸಾವಿರ ಕೋಟಿ ಮೀಸಲಿಡಬೇಕಾಗುತ್ತದೆ. ಒಟ್ಟು ₹43ಸಾವಿರ ಕೋಟಿ ಸಾಲ ಪಾವತಿಸಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳಲಿದೆ’ ಎಂದು ದೂರಿದರು.

‘ಕಳೆದ ಬಾರಿ ₹2.65 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. 337 ಕಾರ್ಯಯೋಜನೆಗಳ ಭರವಸೆ ನೀಡಿದ್ದರು. ಅವುಗಳಲ್ಲಿ 207 ಯೋಜನೆ ಅನುಷ್ಠಾನಗೊಂಡು, 132 ಯೋಜನೆಗಳು ಬಾಕಿ ಉಳಿದಿವೆ. ಕೆಲವೇ ತಿಂಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ಈ ಬಾರಿಯ ಭರವಸೆಗಳು ಕೂಡ ಅನುಷ್ಠಾನಗೊಳ್ಳುವುದಿಲ್ಲ’ ಎಂದು ಆರೋಪಿಸಿದರು.

‘ಈ ಬಾರಿಯ ಬಜೆಟ್ನಲ್ಲಿ ಮೈಸೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕಬಿನಿ ಜಲಾಶಯದ ಅಭಿವೃದ್ಧಿಗಾಗಿ ಕಳೆದ ಬಾರಿ ₹50 ಕೋಟಿ ಘೋಷಣೆಯಾಗಿತ್ತು. ಆದರೆ ಪ್ರಗತಿಯಾಗಿಲ್ಲ. ಉಂಡವಾಡಿ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿ, ದಸರಾ ಪ್ರಾಧಿಕಾರ ರಚನೆಯ ಭರವಸೆಗಳನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ದೂರಿದರು.

‘ರಾಜ್ಯದ ತೆರಿಗೆ ಸಂಗ್ರಹದಲ್ಲಿ ₹4.42 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ನೀತಿ ಆಯೋಗದ ನಿಯಮದ ಪ್ರಕಾರ ಅದರ ಶೇ.42ರಷ್ಟನ್ನು ಅಂದರೆ ₹1.85 ಲಕ್ಷ ಕೋಟಿ ರಾಜ್ಯಕ್ಕೆ ವಾಪಸ್ ನೀಡಬೇಕು. ಆದರೆ, ಈ ಬಾರಿ ₹60 ಸಾವಿರ ಕೋಟಿಗೆ ಸೀಮಿತಗೊಳಿಸಲಾಗಿದೆ. ಕೇಂದ್ರವು ಮೂರು ವರ್ಷಗಳಲ್ಲಿ ₹12,101 ಕೋಟಿ ಜಿಎಸ್ಟಿಯನ್ನು ಬಾಕಿ ಉಳಿಸಿಕೊಂಡಿದೆ’ ಎಂದು ವಿವರ ನೀಡಿದರು.

‘ಹಿಂದಿನ ಬಜೆಟ್ನಲ್ಲಿ ಮೇಕೆದಾಟು ಯೋಜನೆಗೆ ₹100 ಕೋಟಿ ಘೋಷಿಸಲಾಗಿತ್ತು, ಆದರೆ ಈ ಬಾರಿ ಅದರ ಬಗ್ಗೆ ಉಲ್ಲೇಖವನ್ನೇ ಮಾಡದಿರುವ ಮರ್ಮವೇನು? ಕೇಂದ್ರದೊಂದಿಗೆ ಸಂವಹನ ನಡೆಸಿ ಆ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಸೋತಿದೆ. ರಾಜ್ಯದಲ್ಲಿ ಖಾಲಿಯಿರುವ 2.65 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಿಲ್ಲ’ ಎಂದು ಆರೋಪಿಸಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮುಖಂಡರಾದ ಬಿ.ಎಂ.ರಾಮು, ಎಂ.ಶಿವಣ್ಣ, ಚಂದ್ರು, ಗಿರೀಶ್, ರಘು, ಮಹೇಶ್ ಇದ್ದರು.

ಇಂದಿನಿಂದ ‘ಕಿವಿ ಮೇಲೆ ಹೂ ಪೋಸ್ಟರ್’ ಅಭಿಯಾನ

ಮೈಸೂರು: ‘ನೀರಸ ಬಜೆಟ್ ಬಗ್ಗೆ ಜನರಿಗೆ ತಿಳಿಸಲು ಕಿವಿ ಮೇಲೆ ಹೂ ಪೋಸ್ಟರ್ ಅಭಿಯಾನವನ್ನು ಫೆ.19ರಿಂದ (ಭಾನುವಾರ) ನಡೆಸಲಿದ್ದೇವೆ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ತಿಳಿಸಿದರು.

‘ಬಿಜೆಪಿಯೇ ಭರವಸೆ ಎಂಬ ಪೋಸ್ಟರ್ಗಳನ್ನು ನಗರದ ಹಲವು ಭಾಗದಲ್ಲಿ ಅಂಟಿಸಿದ್ದಾರೆ. ಅವುಗಳನ್ನು ಗುರುತಿಸಿ, ಸಮೀಪವೇ ನಮ್ಮ ಪೋಸ್ಟರ್ ಅಂಟಿಸಲಿದ್ದೇವೆ. ಬಿಜೆಪಿಯದ್ದು ಭರವಸೆಯಷ್ಟೇ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

‘ಕಾಂಗ್ರೆಸ್ ಭರವಸೆಯಲ್ಲ ಗ್ಯಾರಂಟಿ ಎಂದು ತಿಳಿಸುವ ಗ್ಯಾರಂಟಿ ಕಾರ್ಡನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೇವಾಲ ಫೆ.21ರಂದು ಮಧ್ಯಾಹ್ನ 2ಕ್ಕೆ ಕಾಂಗ್ರೆಸ್ ಭವನದಲ್ಲಿ ಬಿಡುಗಡೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.