ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟ: ಕೆಪಿಟಿ ಮಂಗಳೂರು ಚಾಂಪಿಯನ್‌

Published 3 ನವೆಂಬರ್ 2023, 20:05 IST
Last Updated 3 ನವೆಂಬರ್ 2023, 20:05 IST
ಅಕ್ಷರ ಗಾತ್ರ

ಮೈಸೂರು: ಮಂಗಳೂರಿನ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ತಂಡವು ರಾಜ್ಯಮಟ್ಟದ 44ನೇ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದ ಅಥ್ಲೆಟಿಕ್ಸ್‌, ಗುಂಪು ಕ್ರೀಡೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ 52 ಪಾಯಿಂಟ್‌ ಗಳಿಸಿ ‘ಸಮಗ್ರ ಚಾಂಪಿಯನ್‌’ ಪಟ್ಟ ತನ್ನದಾಗಿಸಿಕೊಂಡಿತು. 

ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯವಾದ ಕೂಟದಲ್ಲಿ ಪುರುಷರ ವಿಭಾಗದ 21 ಹಾಗೂ ಮಹಿಳಾ ವಿಭಾಗದ 31 ಪಾಯಿಂಟ್‌ ಕಾಣಿಕೆಯಿಂದ ಮಂಗಳೂರಿನ ಕೆಪಿಟಿ ತಂಡವು ಟ್ರೋಫಿ ಎತ್ತಿಹಿಡಿಯಿತು. ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ತಂಡವು 21 ಅಂಕಗಳೊಂದಿಗೆ ರನ್ನರ್‌ ಅಪ್ ಟ್ರೋಫಿ ಪಡೆಯಿತು.

ಪುರುಷರ ವಿಭಾಗದ ವೈಯಕ್ತಿಕ ಚಾಂಪಿಯನ್‌ ಪ್ರಶಸ್ತಿಯು ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್‌ನ ಅಂಕಿತ್‌ ಕರ್ವಿ ಪಾಲಾದರೆ, ಮಹಿಳಾ ವಿಭಾಗದಲ್ಲಿ ‘ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್‌’ನ ನಿಧಿ ಅವರು ಚಾಂಪಿಯನ್‌ ಎನಿಸಿದರು.

ಅಥ್ಲೆಟಿಕ್ಸ್‌ ಫಲಿತಾಂಶ

ಪುರುಷರು: 200 ಮೀಟರ್ಸ್‌ ಓಟ: ಅಂಕಿತ್‌ ಕವ್ರಿ (ಜಿಪಿಟಿ, ಕಾರವಾರ)–1, ಕೀರ್ತನ್ (ಜಿಪಿಟಿ, ಕಾರ್ಕಳ)–2, ಹಿತೇಶ್‌ ಪೊನ್ನಪ್ಪ (ವಿದ್ಯಾವರ್ಧಕ ಪಾಲಿಟೆಕ್ನಿಕ್, ಮೈಸೂರು)–3, ಕಾಲ: 23.31 ಸೆಕೆಂಡ್‌; 800 ಮೀಟರ್ಸ್‌ ಓಟ: ಪೃಥ್ವಿರಾಜ್‌ (ಎನ್‌ಆರ್‌ಎಎಂಪಿ, ನಿಟ್ಟೆ)–1, ಕರುಣ್ (ಕೆವಿಜಿಪಿ, ಸುಳ್ಯ)–2, ಆರ್‌.ಕೀರ್ತಿ (ಡಿಆರ್‌ಆರ್‌ಜಿಪಿ, ದೇವನೂರು)–3, ಕಾಲ: 2 ನಿಮಿಷ 19.88 ಸೆಕೆಂಡ್‌; ಲಾಂಗ್‌ ಜಂಪ್‌: ಮೌನೀಶ್‌ (ಕೆವಿಜಿ, ಸುಳ್ಯ)–1, ಆರ್.ಮನೋಜ್‌ಕುಮಾರ್ (ಸಂಜಯ್‌ ಗಾಂಧಿ ಪಾಲಿಟೆಕ್ನಿಕ್, ಬಳ್ಳಾರಿ)–2, ಎಸ್‌.ಆರ್‌.ಮಂಜುನಾಥ (ಜಿಪಿಟಿ, ಅರಕೆರೆ, ಮಂಡ್ಯ)–3, ದೂರ: 5.95 ಮೀ.; 3 ಕಿ.ಮೀ ರಸ್ತೆ ಓಟ: ಆದರ್ಶ್‌ (ಮೋತಿಚಂದ್‌ ಲೇಂಗಡೆ ಭರತೇಶ್‌ ಪಾಲಿಟೆಕ್ನಿಕ್, ಬೆಳಗಾವಿ)–1, ಮೋಹನ್‌ (ಜಿ‍ಪಿಟಿ, ಮಿರ್ಲೆ, ಮೈಸೂರು)–2, ಕೀರ್ತಿ (ಡಿಆರ್‌ಆರ್‌, ದಾವಣಗೆರೆ)–3, ಕಾಲ:10 ನಿಮಿಷ 50 ಸೆಕೆಂಡ್‌; ಡಿಸ್ಕಸ್‌ ಥ್ರೋ: ಆದಿತ್ಯ (ಡಿಎಸಿಜಿ, ಚಿಕ್ಕಮಗಳೂರು)–1, ಸೃಜನ್‌ (ಎನ್‌ಆರ್‌ಎಎಂಪಿ, ನಿಟ್ಟೆ)–2, ಪಿ.ಗಿರೀಶ (ಎಸ್‌ಜಿಎಂಪಿ, ದೇವನೂರು, ಮೈಸೂರು)–3, ದೂರ: 27.32 ಮೀ.; 4x400 ಮೀಟರ್ಸ್‌ ರಿಲೇ: ಕೆಪಿಟಿ ಮಂಗಳೂರು–1, ಎನ್‌ಆರ್‌ಎಂಪಿ ನಿಟ್ಟೆ–2, ಕೆವಿಜಿ ಸುಳ್ಯ–3, ಕಾಲ: 3 ನಿಮಿಷ 29.32 ಸೆಕೆಂಡ್‌.

ಮಹಿಳೆಯರು: ಲಾಂಗ್‌ಜಂಪ್‌: 200 ಮೀಟರ್ಸ್ ಓಟ: ಪರಿಮಳಾ (ಕೆಪಿಟಿ, ಮಂಗಳೂರು)–1, ರಕ್ಷಿತಾ (ಜಿಪಿಟಿ, ರಾಮನಗರ)–2, ಭಾವನಾ (ಜಿಡಬ್ಲ್ಯುಪಿಟಿ, ಹಾಸನ)–3, ಕಾಲ: 31.37 ಸೆಕೆಂಡ್‌; 800 ಮೀಟರ್ಸ್‌ ಓಟ: ಚೈತಾಲಿ (ಕೆವಿಜಿ, ಸುಳ್ಯ)–1, ಜೇಜೂರಿ (ಮರಾಠ ಮಂಡಳ ಪಾಲಿಟೆಕ್ನಿಕ್, ಬೆಳಗಾವಿ)–2, ರೇವತಿ (ಎಸ್‌ಜೆಪಿ, ಬೆಂಗಳೂರು)–3, ಕಾಲ: 3 ನಿಮಿಷ 22.42 ಸೆಕೆಂಡ್; ಲಾಂಗ್‌ಜಂಪ್‌: ಅಭಿಲಾಷಾ (ಜೆಎಸ್‌ಎಸ್‌ ಪಾಲಿಟೆಕ್ನಿಕ್, ಮೈಸೂರು)–1, ಭುವನೇಶ್ವರಿ (ಬಿಜಿಎಸ್‌, ಚಿಕ್ಕಬಳ್ಳಾಪುರ)–2, ಸ್ನೇಹಾ (ಜಿಡಬ್ಲ್ಯುಪಿಟಿ, ಹಾಸನ)–3, ದೂರ: 4.12 ಮೀ; 1 ಕಿ.ಮೀ ರಸ್ತೆ ಓಟ: ನಿಧಿ (ಎನ್‌ಆರ್‌ಎಎಂಪಿ, ನಿಟ್ಟೆ)–1, ಯೋಗಿನಿ (ಕೆಪಿಟಿ, ಮಂಗಳೂರು)–2, ಪ್ರಕೃತಿ (ಜಿಡಬ್ಲ್ಯುಪಿಟಿ, ಹಾಸನ)–3, ಕಾಲ: 2 ನಿಮಿಷ 59.71 ಸೆಕೆಂಡ್‌; ಡಿಸ್ಕಸ್‌ ಥ್ರೋ: ಎಸ್‌.ಅಮೃತಾ (ಜೆಸ್‌ಎಸ್‌ಎಸ್‌ಪಿ, ನಂಜನಗೂಡು)–1, ಐಶ್ವರ್ಯಾ (ಕೆಪಿಟಿ, ಮಂಗಳೂರು)–2, ಭಾಗ್ಯಲಕ್ಷ್ಮಿ (ಜಿಡಬ್ಲ್ಯುಪಿಟಿ, ಮಂಗಳೂರು)–3, ದೂರ: 18.52 ಮೀ.; 4x400 ಮೀಟರ್ಸ್‌ ರಿಲೇ: ಕೆಪಿಟಿ ಮಂಗಳೂರು–1, ಕೆವಿಜಿ ಸುಳ್ಯ–2, ಕಾಲ: 5 ನಿಮಿಷ 24.62 ಸೆಕೆಂಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT