ಮೈಸೂರು: ‘ಕೆ.ಆರ್.ಆಸ್ಪತ್ರೆ, ಪಿಕೆಡಿಪಿ (ರಾಜಕುಮಾರಿ ಕೃಷ್ಣಜಮ್ಮಣ್ಣಿ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆ) ಆಸ್ಪತ್ರೆಯಲ್ಲಿ ಸಿರಿಂಜುಗಳನ್ನು ಮರುಬಳಕೆ ಮಾಡಲಾಗುತ್ತಿದೆ. ರೋಗಿಗಳ ಬಳಿ ಕೆಲಸ ಮಾಡುವಾಗ ಬಳಸಲು ಕೈಗವಸು, ಮಾಸ್ಕ್ ನೀಡುತ್ತಿಲ್ಲ’ ಎಂದು ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ದೂರಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಬುಧವಾರ ನಡೆಸಿದ ಸಂವಾದದ ವೇಳೆ ವಿದ್ಯಾರ್ಥಿಗಳು ಈ ಆರೋಪ ಮಾಡಿದರು.

‘ದಾಖಲಾಗುವ ದಿನ ರೋಗಿಗೆ ಬಳಸುವ ಸಿರಿಂಜ್ ಅನ್ನೇ ಪ್ರತಿದಿನ ಬಳಸಲಾಗುತ್ತಿದೆ. ಸಿರಿಂಜು ಬಿಸಾಡಿದರೆ ಮೇಲ್ವಿಚಾರಕ ಶುಶ್ರೂಷಕರು ಬೈಯುತ್ತಾರೆ. ಪ್ರಶ್ನಿಸಿದ್ರೆ ಇಂಡೆಂಟ್ ಇಲ್ಲ ಎನ್ನುತ್ತಾರೆ. ನಮ ಬಗ್ಗೆಯೂ ಮುಂಜಾಗ್ರತೆ ವಹಿಸುತ್ತಿಲ್ಲ’ ಎಂದು ಆರೋಪ ಮಾಡಿದರು.

ಕೆ.ಆರ್ ಆಸ್ಪತ್ರೆಯ ಮೇಲ್ವಿಚಾರಕಿ ಡಾ. ಶೋಭಾ ಮಾತನಾಡಿ, ‘ಈ ರೀತಿಯ ದೂರು ನಮಗೆ ಬಂದಿಲ್ಲ. ಸಿರಿಂಜು ಪೂರೈಕೆ ಮಾಡುತ್ತಿದ್ದೇವೆ’ ಎಂದು ಪ್ರತಿಪಾದಿಸಿದರು.

ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯಿಸಿ, ‘ಇದು ಸೂಕ್ಷ್ಮ ವಿಚಾರ. ಅಧಿಕಾರಿಗಳಿಗೆ ಸಮಸ್ಯೆಯ ಅರಿವಿಲ್ಲ ಎಂಬುದು ವಿಷಾದನೀಯ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡುತ್ತೇನೆ. ರೋಗಿ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.