ಕೆ.ಆರ್.ನಗರ: ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲಾಗಿದ್ದು, ಹಂತಹಂತವಾಗಿ ಎಲ್ಲ ವಾರ್ಡ್ ಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.

ಮೈಸೂರು ಮತ್ತು ಹಾಸನ ಕಡೆ ತೆರಳುವ ಇಲ್ಲಿನ ಬಸ್ ನಿಲ್ದಾಣದ ಎರಡು ಮುಖ್ಯದ್ವಾರಗಳ ರಸ್ತೆ ಮತ್ತು ಬಸ್ ನಿಲ್ದಾಣದಲ್ಲಿ ಮೈಸೂರಿಗೆ ತೆರಳುವ ಪ್ರಯಾಣಿಕರಿಗಾಗಿ ಹೈಟೆಕ್ ತಂಗುದಾಣ ಸೇರಿ ಒಟ್ಟು ₹1.30 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹7.30 ಕೋಟಿ ಸೇರಿದಂತೆ ಅಲ್ಪಸಂಖ್ಯಾತ, ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಅನುದಾನ ತರಲಾಗಿದ್ದು, ಪಟ್ಟಣದ ಎಲ್ಲ ವಾರ್ಡ್ಗಳ ಸಂಪರ್ಕ ರಸ್ತೆ, ಕ್ರೀಡಾಂಗಣ, ರೇಡಿಯೋ ಮೈದಾನ, ಗಾಂಧಿ ಉದ್ಯಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತದೆ’ ಎಂದರು.

ಪಟ್ಟಣದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳಲು ಅಮೃತ ಯೋಜನೆಯಡಿ ₹30 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಅದರಂತೆ ಒಳಚರಂಡಿ ಕಾಮಗಾರಿಗೆ ₹20 ಕೋಟಿ ಮಂಜೂರಾಗಿದ್ದು, ಅದೂ ಪ್ರಗತಿಯಲ್ಲಿದೆ’ ಎಂದರು.

‘ಮಳೆ ಬಂದರೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣ ಕೆರೆಯಂತಾಗುತ್ತಿತ್ತು, ₹1 ಕೋಟಿ ಅನುದಾನ ನೀಡಿ ಆವರಣದ ಅಭಿವೃದ್ಧಿ ಮಾಡಲಾಗಿದೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಕಾಲೇಜು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜು ಮೈದಾನದ ಬಳಿ, ಎಲ್ಐಸಿ ಮುಂಭಾಗ ಗ್ರಂಥಾಲಯ ನಿರ್ಮಿಸಲು ಲೋಕೋಪಯೋಗಿ ಇಲಾಖೆಯಿಂದ ₹1 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ನಗರ ಅಧ್ಯಕ್ಷ ಎಂ.ಜೆ. ರಮೇಶ್, ಮುಖಂಡರಾದ ಶಿವುನಾಯಕ್, ಕೋಳಿ ಪ್ರಕಾಶ್, ಕೆ.ಜಿ. ಸುಬ್ರಹ್ಮಣ್ಯ, ಸಯ್ಯದ್ ಸಿದ್ದಿಕ್, ವಿನಯ್ ಮಾತನಾಡಿದರು. ಮುಖಂಡರಾದ ಎಂ.ನಟರಾಜ್, ಶಂಕರ್, ನವೀದ್, ಕೆ.ಎನ್.ಪ್ರಸನ್ನಕುಮಾರ್, ತಿಮ್ಮಶೆಟ್ಟಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-38-1859272667

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.