ಕೆ.ಆರ್.ನಗರ: ‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ದಾನ, ಧರ್ಮ, ಸಹಾಯ ಮಾಡಿದರೆ ಈದ್ ಉಲ್ ಫಿತ್ರ್ಗೆ ನಿಜವಾದ ಅರ್ಥ ಮತ್ತು ಮನುಷ್ಯತ್ವಕ್ಕೆ ಬೆಲೆ ಸಿಗುತ್ತದೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಇಲ್ಲಿನ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶನಿವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕಳೆದ ವರ್ಷ 1ರಿಂದ 10ನೇ ತರಗತಿ ವರೆಗಿನ ಮೌಲಾನಾ ಅಬ್ದುಲ್ ಕಲಾಂ ವಸತಿ ಶಾಲೆ ಪಟ್ಟಣದಲ್ಲಿ ಪ್ರಾರಂಭಿಸಲಾಗಿದ್ದು, ಸ್ವಂತ ಕಟ್ಟಡಕ್ಕಾಗಿ ನಿವೇಶನ ಹುಡುಕಾಟದಲ್ಲಿ ಇದ್ದೇವೆ. ಸೂಕ್ತ ನಿವೇಶನ ದೊರೆಯುತ್ತಿದ್ದಂತೆ ಕಟ್ಟಡ ಕಾಮಗಾರಿಗೆ ಪ್ರಾರಂಭಿಸಲಾಗುತ್ತದೆ’ ಎಂದರು.

‘ಇಲ್ಲಿನ ಶಾದಿ ಮಹಲ್ ಉದ್ಘಾಟನೆಗಾಗಿ ಕಾದಿದ್ದು, ಕೆಲವೇ ದಿನಗಳಲ್ಲಿ ಸಚಿವ ಬಿ.ಝೆಡ್.ಜಮೀರ್ ಅಹಮ್ಮದ್ ಖಾನ್ ಅವರಿಂದ ಉದ್ಘಾಟನೆ ಮಾಡಿಸಲಾಗುತ್ತದೆ’ ಎಂದರು.

‘ಕಳೆದ ವರ್ಷ ಮಂಜೂರಾದ ₹5 ಕೋಟಿ ಅನುದಾನದಲ್ಲಿ ಮುಸ್ಲಿಂ ಬಡಾವಣೆಗಳ ಅಭಿವೃದ್ಧಿ ಮಾಡಲಾಗಿದೆ. ಹಳೇ ಯಡತೊರೆಯಲ್ಲಿನ ಮಸೀದಿ ಮತ್ತು ಇಲ್ಲಿನ ಜಾಮೀಯಾ ಮಸೀದಿ ಅಭಿವೃದ್ಧಿಗಾಗಿ ₹90 ಲಕ್ಷ ಅನುದಾನ ನೀಡಲಾಗಿದೆ. ಇಲ್ಲಿನ ಶಾದಿ ಮಹಲ್ಗೆ ಜನರೇಟರ್ಗಾಗಿ ವೈಯಕ್ತಿಕವಾಗಿ ₹7 ಲಕ್ಷ ನೀಡಲಾಗಿದೆ. ಮುಸ್ಲಿಂ ಬಡಾವಣೆಯಲ್ಲಿ ‘ನಮ್ಮ ಕ್ಲಿನಿಕ್’ ತೆರೆಯಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಮಸೀದಿ ಅಭಿವೃದ್ಧಿಗೊಳಿಸಲು ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುತ್ತದೆ. ಈಗಾಗಲೇ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಧರ್ಮ ಗುರುಗಳಾದ ಮುಪ್ತಿ ಜೈನುಲ್ ಅಬಿದಿನ್, ಮೌಲಾನಾ ಅಲಿ ಹಸನ್, ಹಾಸಿಪ್ ಒಕಾರಿ ಅಸಿಫ್ ರಜಾ, ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಅಪ್ಸರ್ ಬಾಬು ಮಾತನಾಡಿದರು. ಮುಖಂಡ ಮೆಹಬೂಬ್ ಖಾನ್, ಸಮಿತಿ ಕಾರ್ಯದರ್ಶಿ ತಸವರ್ ಪಾಷ, ಮುಜಾಹಿದ್, ಕಾಂಗ್ರೆಸ್ ವಕ್ತಾರ ಸಯ್ಯದ್ ಜಾಬೀರ್, ಮುಖಂಡರಾದ ಜಾವೀದ್, ಸಯ್ಯದ್ ಸಿದ್ದಿಕ್, ಅಸ್ಲಂ, ನವೀದ್ ಖಾನ್, ನವಾಜ್ ಭಾಗವಹಿಸಿದ್ದರು.

ಜಾಮೀಯಾ ಮಸೀದಿ ಬಳಿ ಜಮಾವಣೆಗೊಂಡ ಮುಸ್ಲಿಮರು, ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭ ಹಾರೈಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-38-842947080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.