ಕೆ.ಆರ್.ನಗರ: ‘₹60 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಮೂಲಕ ತಾಲ್ಲೂಕಿನ ಸಿದ್ದಾಪುರ, ಕೆಸ್ತೂರು ಕೊಪ್ಪಲು, ಬ್ಯಾಡರಹಳ್ಳಿ, ಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮವಹಿಸಲಾಗಿದೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲ್ಲೂಕಿನ ಡಿ.ಕೆ.ಕೊಪ್ಪಲು ಗೇಟ್ ಬಳಿ ₹4.96 ಕೋಟಿ ಮೊತ್ತದ ರಾಮಸಮುದ್ರ ನಾಲೆಯ ಹನುಮಾನ್ ಕಾಲುವೆ ಹಾಗೂ 4ನೇ ಬ್ರಾಂಚ್ ಅಭಿವೃದ್ಧಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಭಾಗದ ರೈತರ ಬಹುದಿನಗಳ ಬೇಡಿಕೆ ಮನಗಂಡು ಕಾಮಗಾರಿಗೆ ಚಾಲನೆ ನೀಡಲಾಗಿದೆ. ರೈತರ ಅನುಕೂಲಕ್ಕಾಗಿ ನಾಲೆ ಏರಿಗಳ ರಸ್ತೆ ಅಭಿವೃದ್ಧಿ, ಮೂರು ಸೇತುವೆಗಳ ನಿರ್ಮಾಣ ಸೇರಿದಂತೆ ಸರಾಗವಾಗಿ ನೀರು ಹರಿಸಲು ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಡಿ.ಕೆ.ಕೊಪ್ಪಲು ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ₹10 ಲಕ್ಷ ಹಾಗೂ ಪರಿಶಿಷ್ಟ ಜಾತಿ ಕಾಲೊನಿಯಲ್ಲಿನ ಸಿದ್ದಪ್ಪಾಜಿ ದೇವಸ್ಥಾನದ ಅಭಿವೃದ್ಧಿಗೆ ₹5 ಲಕ್ಷ ಅನುದಾನ ನೀಡಲಾಗಿದೆ ಎಂದರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತುರ್ತಾಗಿ ಬೋರ್ವೆಲ್ ಕೊರೆಸಲು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಕಾಂಗ್ರೆಸ್ ವಕ್ತಾರ ಸಯ್ಯದ್ ಜಾಬೀರ್, ವಕೀಲ ಕೆ.ಸಿ.ಹರೀಶ್, ಲೋಕೇಶ್ ಭರಣಿ, ಹಾಡ್ಯ ಮಹದೇವಸ್ವಾಮಿ, ಚಂದ್ರೇಗೌಡ, ರಂಗೇಶ್, ಸಿ.ಡಿ.ರಾಜಾಚಾರ್, ಕೆ.ಎಸ್.ಹಿರಣ್ಣಯ್ಯ, ಕೆ.ರಾಮಚಂದ್ರ, ವೆಂಕಟರಾಮು, ಕೆ.ವಿ.ಪುಟ್ಟಸ್ವಾಮಿಗೌಡ, ಆನಂದ್, ನಿಂಗೇಗೌಡ, ಪ್ರಭಾಕರ್, ಪಿಡಿಒ ಗಿರೀಶ್, ಎಂಜಿನಿಯರ್ ಸತೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-38-45242651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.