ಕೆ.ಆರ್.ನಗರ: ತಾಲ್ಲೂಕಿಗೆ ಸಾಕಷ್ಟು ಕೊಡುಗೆ ನೀಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಭವನ ಇಲ್ಲಿ ನಿರ್ಮಾಣವಾಗದಿರುವುದು ಬೇಸರ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಡಿಂಡಿಮ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಘಟಕ ಶನಿವಾರ ಇಲ್ಲಿ ಆಯೋಜಿಸಿದ್ದ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕಾವೇರಿ ನದಿ ನೀರು ಪಡೆಯಲು ನಮಗೆ ಚೋಳರ ಕಾಲದಿಂದಲೂ ಅಡ್ಡಗಾಲು ಇತ್ತು. ಅರಮನೆ ವೈಭವಕ್ಕಿಂತ ಜನರ ಸಮಸ್ಯೆಯೇ ಮುಖ್ಯ ಎಂದು ಒಡೆಯರ್ ಅವರು ವಿಶೇಷ ತಂತ್ರಜ್ಞಾನ ಬಳಸಿ ಕಾವೇರಿ ನದಿಗೆ ಕನ್ನಂಬಾಡಿ ಕಟ್ಟೆ ನಿರ್ಮಿಸಿದರು ಎಂದರು.

‘ಬೇಸಿಗೆಯಲ್ಲಿ ರಾಯಚೂರು, ಕಲಬುರಗಿ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ಜನ 1ಕಿ.ಮೀ. ದೂರ ಸಾಗಿ ಕುಡಿಯಲು ನೀರು ತರುತ್ತಾರೆ. ಈ ಭಾಗದಲ್ಲಿ ಕನ್ನಂಬಾಡಿ ಕಟ್ಟೆ ನಿರ್ಮಿಸಿದ ಫಲವಾಗಿ ಇಂದು ಕೇವಲ ಕೃಷಿ ಅಲ್ಲ, ಕೈಗಾರಿಕೆಗಳೂ ಸ್ಥಾಪನೆಯಾದವು. ಒಡೆಯರ್ ಅಂದು ಜನರ ಬದುಕಿಗೆ ಅಡಿಪಾಯ ಹಾಕಿದರು. ಪ್ರತಿವರ್ಷ ನಡೆಯುವ ಪರಿಷತ್ತಿನ ಸಂಸ್ಥಾಪನಾ ದಿನದಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ನಮಗೆ ನೆನಪಾಗುತ್ತದೆ. ಅನ್ನ, ನೀರು, ರಸ್ತೆ, ಬೆಳಕು ಕೊಟ್ಟು ಕೃಷ್ಣರಾಜನಗರ ನಿರ್ಮಿಸಿದ ಕೀರ್ತಿ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದರು.

‘ಹಳೆಮೈಸೂರು ಭಾಗದಲ್ಲಿನ ಜನ ನೆಮ್ಮದಿಯಾಗಿ ಬದುಕಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ. ದುರಂತ ಏನಂದರೆ ಅವರ ಹೆಸರಿನಲ್ಲಿ ತಾಲ್ಲೂಕಿನಲ್ಲಿ ಸಾಹಿತ್ಯ ಭವನ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳಲ್ಲಿ ಒಡೆಯರ್ ಅವರ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಬೇಕು. ಅವರ ಹೆಸರಿನಲ್ಲಿ ಭವನ ಸ್ಥಾಪನೆಯಾಗಬೇಕು’ ಎಂದು ಹೇಳಿದರು.

ಗೌರವ ಅಧ್ಯಕ್ಷ ಡಿ.ನಟರಾಜ್, ನಗರ ಅಧ್ಯಕ್ಷ ಸಿ.ವಿ.ಮೋಹನಕುಮಾರ್, ಸಮಾಜ ಸೇವಕ ಜಿ.ಶೇಷಾದ್ರಿ, ಚುಟುಕು ಸಾಹಿತಿ ಹೆಗ್ಗಂದೂರು ಪ್ರಭಾಕರ್, ನಿವೃತ್ತ ಪ್ರಾಂಶುಪಾಲ ಕೃಷ್ಣ, ಗೌರವ ಕಾರ್ಯದರ್ಶಿ ಸಿ.ಆರ್.ಉದಯಕುಮಾರ್, ಉಪಾಧ್ಯಕ್ಷ ರಾಮಕೃಷ್ಣ, ಕೋಶಾಧ್ಯಕ್ಷ ಕೆ.ಎಲ್.ಭಾಸ್ಕರ್ ಮಾತನಾಡಿದರು. ಮಹಿಳಾ ಪ್ರತಿನಿಧಿ ಕೆ.ಪಿ.ಭಾರತಿ, ರೋಟರಿ ಕಾರ್ಯದರ್ಶಿ ಪುರುಷೋತ್ತಮ್, ಖಜಾಂಚಿ ಅಶೋಕ್, ಆರೋಗ್ಯ ಇಲಾಖೆಯ ಕೆ.ವಿ.ರಮೇಶ್, ನಿವೃತ್ತ ಶಿಕ್ಷಕ ಚಂದ್ರಶೇಖರ್, ರೈತ ಮುಖಂಡ ಜೆ.ಎಂ.ಕುಮಾರ್, ರಾಮಶೆಟ್ಟಿ, ಗೋಪಾಲ್ ರಾಜ್, ಮಹದೇವ್, ಯೋಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.