ಮೈಸೂರು: ‘ವಿಜ್ಞಾನ ಸಮ್ಮೇಳನಗಳು ಹೊಸ ಸಂಶೋಧನೆ, ಆವಿಷ್ಕಾರಗಳ ಮಾಹಿತಿ ವಿನಿಮಯದ ವೇದಿಕೆಯಾಗಿವೆ. ಹೀಗಾಗಿ ಪ್ರತಿ ಕಾಲೇಜುಗಳಲ್ಲಿಯೂ ಅರಿವಿನ ಸಮ್ಮೇಳನ ನಡೆಸಬೇಕು’ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಪ್ರತಿಪಾದಿಸಿದರು.

ನಗರರ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ರಸಾಯನವಿಜ್ಞಾನ ಅಧ್ಯಯನ ವಿಭಾಗವು ಶುಕ್ರವಾರ ಆಯೋಜಿಸಿದ್ದ ‘ರಸಾಯನ ವಿಜ್ಞಾನ ಕ್ಷೇತ್ರದ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಅವಕಾಶಗಳು’ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಸುಸ್ಥಿರ ಅಭಿವೃದ್ಧಿಗೆ ರಸಾಯನ ವಿಜ್ಞಾನದ ಕೊಡುಗೆ ಅಪಾರವಾಗಿದೆ. ಕ್ಷೇತ್ರದ ವೈಜ್ಞಾನಿಕ ಆವಿಷ್ಕಾರಗಳು ಔಷಧ, ಆರೋಗ್ಯ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತದೆ’ ಎಂದರು.

‘ರಸಾಯನ ವಿಜ್ಞಾನದ ಜ್ಞಾನ ಬಳಸಿ ನಡೆಸಿದ ಔಷಧೀಯ ಆವಿಷ್ಕಾರಗಳು ಮನುಕುಲವನ್ನು ಉಳಿಸಿವೆ. ಈಚಿನ ಸಂಶೋಧನೆಗಳು ಶಕ್ತಿ ಸಂಗ್ರಹ ಸಾಧನ, ಸಂವೇದಕಗಳು (ಸೆನ್ಸರ್ಗಳು), ಬಯೋಮಾರ್ಕರ್ಗಳು ಹಾಗೂ ಜೈವಿಕ ಅಣುಗಳ ಅಭಿವೃದ್ಧಿ ಕೇಂದ್ರಿತವಾಗಿವೆ’ ಎಂದು ವಿವರಿಸಿದರು.

‘ವಿಜ್ಞಾನ ಲೋಕದ ಕೌತುಕಗಳು ಹಾಗೂ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳು ತೆರೆದುಕೊಳ್ಳಬೇಕು. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ ಹಾಗೂ ಇತರೆ ಮುಂತಾದ ಕ್ಷೇತ್ರಗಳೊಂದಿಗೆ ರಸಾಯನ ವಿಜ್ಞಾನವೂ ಹೆಚ್ಚಾಗಿ ಸಂಯೋಜನೆಗೊಳ್ಳಲಿದೆ. ಅದರಿಂದ ಮತ್ತಷ್ಟು ಆವಿಷ್ಕಾರಗಳು ಘಟಿಸಲಿವೆ. ಸಾಧ್ಯತೆಗಳು ವಿಸ್ತರಿಸಲಿವೆ’ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ‘ರಸಾಯನ ವಿಜ್ಞಾನದ ಜೊತೆಗೆ ಜೈವಿಕ, ಸಾವಯವ ಮತ್ತು ನಿರವಯವ ರಸಾಯನ ವಿಜ್ಞಾನ, ಪಾಲಿಮರ್ ವಿಜ್ಞಾನ ಹಾಗೂ ಪದಾರ್ಥ ವಿಜ್ಞಾನದ ಬಗ್ಗೆಯೂ ಆಸಕ್ತಿ ತಳೆಯಬೇಕು. ಬಹುಶಿಸ್ತೀಯ ಅಧ್ಯಯನವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಪ್ರೊ.ಎಂ.ಪ್ರಭು, ಸಮ್ಮೇಳನದ ಸಂಚಾಲಕರಾದ ಮಲ್ಲೇಶ, ರಾಜೇಂದ್ರಪ್ರಸಾದ್, ಸಂಘಟನಾ ಕಾರ್ಯದರ್ಶಿಗಳಾದ ಕಾವ್ಯಾ, ಪುಷ್ಪಾಂಜಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.