ಮೈಸೂರು: ‘ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಲ್ಲಿರುವ ಪಾಠ ಹೇಳಿಕೊಡುವ ಜೊತೆಗೆ ಬದುಕಿನ ಪಾಠಗಳನ್ನೂ ಕಲಿಸಿಕೊಡಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಶಿವಾಜಿ ಜೋಯಿಸ್ ಸಲಹೆ ನೀಡಿದರು.
ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತಿಯೊಬ್ಬರೂ ಆನಂದಕ್ಕೆ ಕೊರತೆಯಾಗದಂತೆ ಬದುಕಿನ ಸುಖವನ್ನು– ವೈಭವವನ್ನು ಅನುಭವಿಸಬೇಕು. ಸುಖ, ಸಂತೋಷ ಎನ್ನುವುದು ಆನಂದದ ಕೆಳಹಂತದ್ದಾಗಿದೆ. ಆನಂದವಾಗಿರಬೇಕಾದರೆ ಬದುಕಿನಲ್ಲಿ ಮಾಡುವ ಸಾಧನೆಯಲ್ಲಿ ತೃಪ್ತಿ ಇರಬೇಕು’ ಎಂದರು.
ಸಂಸ್ಥೆಯ ಅಧ್ಯಕ್ಷ ಪ್ರೊ.ಚಂದ್ರಶೇಖರೇಗೌಡ, ಶ್ರೀನಿವಾಸಮೂರ್ತಿ, ದಿವಾಕರ್, ಗೋವಿಂದಯ್ಯ, ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ, ಸಂಸ್ಥೆಯ ಕಾರ್ಯದರ್ಶಿ ಪ್ರಭಾಮಣಿ, ಯೋಗಶಿಕ್ಷಕ ರಾವಣಿಕರ್ ಇದ್ದರು.
ಮಕ್ಕಳಿಂದ ಯೋಗಾಸನ ಪ್ರದರ್ಶನ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.