ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಲಿಗ್ರಾಮ: ಚಿರತೆ ದಾಳಿಗೆ ಹಸು ಬಲಿ

Published : 18 ಆಗಸ್ಟ್ 2024, 13:40 IST
Last Updated : 18 ಆಗಸ್ಟ್ 2024, 13:40 IST
ಫಾಲೋ ಮಾಡಿ
Comments

ಸಾಲಿಗ್ರಾಮ: ತಾಲ್ಲೂಕಿನ ದೇವಿತಂದ್ರೆ ಗ್ರಾಮದ ಹೊರವಲಯದ ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ತಿಂದು ಹೋಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

 ಶನಿವಾರ ಹಸುವಿನ ಮಾಲೀಕ ಮಹೇಶ್ ಮಲಗುವ ಮುನ್ನ ಮೇವು ಹಾಕಿ ಮಲಗಿದ್ದರು. ಎಂದಿನಂತೆ ಮುಂಜಾನೆ ಎದ್ದು ಜಮೀನಿನ ಕಡೆ ಹೋಗಿ ಕೊಟ್ಟಿಗೆ ನೋಡಿದಾಗ ಹಸು ಇರಲಿಲ್ಲ. ಗಾಬರಿಗೊಂಡು ಸುತ್ತಮುತ್ತ ನೋಡಲಾಗಿ ಮನೆಯಿಂದ ಸ್ವಲ್ಪ ದೂರದಲ್ಲಿ ಹಸು ಬಿದ್ದಿರುವುದು ಕಂಡುಬಂದಿದೆ. ನಂತರ ಚಿರತೆ ದಾಳಿಗೆ ಹಸು ಬಲಿಯಾಗಿರುವುದು ತಿಳಿದು ಬಂತು ಎಂದು ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಹಲವು ತಿಂಗಳಿಂದ ಚಿರತೆ ಓಡಾಡುತ್ತಿರುವುದು ರೈತರ ಗಮನಕ್ಕೆ ಬಂದಿತ್ತು. ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಕೂಲಿ ಮಾಡುವ ರೈತರೊಬ್ಬರ ಬೆಲೆ ಬಾಳುವ ಹಸು ಬಲಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

‘ಪ್ರತಿ ದಿನ ರೈತರು ಜಮೀನಿಗೆ ಹೋಗುವುದು ಕಷ್ಟವಾಗುತ್ತಿದೆ. ವಿಧಿ ಇಲ್ಲದೆ ಜೀವ ಕೈಯಲ್ಲಿ ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳ ಉದಾಸೀನಕ್ಕೆ ರೈತರು ಜೀವ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ’ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದರು. ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ಕೊಟ್ಟು ಶೀಘ್ರವೇ ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT