ಮೈಸೂರು: ‘ಕನ್ನಡ ಶೈಕ್ಷಣಿಕವಾಗಿ ಆತಂಕದಲ್ಲಿರುವಾಗ ಅದಕ್ಕೆ ಪರ್ಯಾಯವಾಗಿ ಕನ್ನಡವನ್ನು ಕಲೆಗಳ ಮೂಲಕ ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.

ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳು ಇಂಗ್ಲಿಷ್ ಕಲಿತು, ದೂರದೂರಿನಲ್ಲಿ ಉದ್ಯೋಗ ಪಡೆಯಬೇಕೆಂಬ ತಾಯಂದಿರ ಆಶಯದಿಂದ ಕನ್ನಡದ ಶಿಕ್ಷಣ ಮರೆಯಾಗುತ್ತಿದೆ. ಇದೇ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಕನ್ನಡಿಗರೇತರೂ ಹೆಚ್ಚುತ್ತಿದ್ದಾರೆ. ಅವರಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸಲು ಕಲಾ ಪ್ರಕಾರಗಳು ಕೆಲಸ ಮಾಡಬೇಕು. ಎಲ್ಲಾ ರೀತಿಯ ಕಲೆಗಳ ಮೂಲಕ ಕನ್ನಡದ ಸೊಂಪನ್ನು ಸಾರಿ ಹೇಳಬೇಕು’ ಎಂದರು.

‘ನಾಟಕವು ಪ್ರತಿಭಟನೆಯ ಅತೀ ದೊಡ್ಡ ಮಾಧ್ಯಮ ಎಂದು ಕರೆಯಲ್ಪಟ್ಟಿತ್ತು. ಆದರೆ ಈಚೆಗೆ ಅದು ನಿಂತ ನೀರಾಗಿದೆ. ಸಂವಿಧಾನದ ಪ್ರಸ್ತುತ ಸ್ಥಿತಿ ಹಾಗೂ ರಾಷ್ಟ್ರಕ್ಕೆ ಬೇಕಾದ ಭ್ರಾತೃತ್ವವು ನಾಟಕಗಳ ಮೂಲಕ ಪ್ರತಿಧ್ವನಿಸಬೇಕು. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಇದರ ಬಗ್ಗೆ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಕರ್ನಾಟಕವೆಂದು ಹೆಸರಾದಾಗ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಕವಿವಾಣಿ ಪ್ರಚಲಿತದಲ್ಲಿತ್ತು. ಆದರೆ ಪ್ರಸ್ತುತ ನಮ್ಮ ಬದುಕು ಕನ್ನಡವಾಗಬೇಕಾದ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಗಾಯಕ ಪ್ರೊ.ಎಸ್.ಸಿ.ಶರ್ಮ, ಕೆ.ಮರುಳಸಿದ್ದಪ್ಪ, ಹಿಂದೂಸ್ತಾನಿ ಸಂಗೀತ ಗಾಯಕ ನಾಗರಾಜ ರಾವ್ ಹವಾಲ್ದಾರ್, ಜಾನಪದ ವಿದ್ವಾಂಸ ಮುಖವೀಣೆ ಆಂಜನಪ್ಪ ಅವರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಮೌಲ್ಯಮಾಪನ ಕುಲಸಚಿವ ಪ್ರೊ.ಜಿ.ವಿ.ವೆಂಕಟರಮಣ ಇದ್ದರು.

‘ಸರ್ಕಾರಿ ಶಾಲೆಗೆ ಮೂಲಸೌಕರ್ಯ ದೊರೆಯಲಿ’

‘ಪೋಷಕರು ಇಂಗ್ಲಿಷ್ ಕಲಿತರೆ ಮಕ್ಕಳಿಗೆ ಉದ್ಯೋಗ ದೊರೆಯುತ್ತದೆಂಬ ಭ್ರಮೆಯಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮ ತೆರೆಯಲಾಗುತ್ತಿದೆ. ಇಂಗ್ಲಿಷ್ ಮಾಧ್ಯಮ ತೆರೆಯುವುದೊಂದೇ ಸರ್ಕಾರಿ ಶಾಲೆ ಉಳಿಸುವ ಮಾನದಂಡ ಆಗಬಾರದು. ಸಮರ್ಪಕ ಮೂಲಸೌಕರ್ಯ ಒದಗಿಸಿದರೂ ವಿದ್ಯಾರ್ಥಿಗಳು ಬರುತ್ತಾರೆ’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆ.ಮರುಳಸಿದ್ದಪ್ಪ ಪ್ರತಿಪಾದಿಸಿದರು.

‘ಶಿಕ್ಷಣ ಹಾಗೂ ಆರೋಗ್ಯಕ್ಕೆ ಸರ್ಕಾರ ಪ್ರಾಶಸ್ತ್ಯ ನೀಡಬೇಕಿದೆ. ಆದರೆ ಆ ವಿಭಾಗಕ್ಕೆ ಬಜೆಟ್ನಲ್ಲಿ ಎರಡರಿಂದ ಮೂರು ಶೇಕಡಾ ಹಣವನ್ನಷ್ಟೇ ಮೀಸಲಿಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.